ನಗರದ ಜಂಜಾಟ ಬಿಟ್ಟು ಪ್ರಕೃತಿಯ ಮಡಿಲಲ್ಲಿ ಕುಟುಂಬದ ಜೊತೆ ಸಮಯ ಕಳೆದ ನಮ್ರತಾ ಗೌಡ

Published : Apr 24, 2024, 03:19 PM ISTUpdated : Apr 24, 2024, 03:25 PM IST

ಕಿರುತೆರೆ ನಟಿ, ಬಿಗ್‌ಬಾಸ್ ಖ್ಯಾತಿಯ ನಮ್ರತಾ ಗೌಡ ನಗರದ ಜಂಜಾಟ ಬಿಟ್ಟು ಹಳ್ಳಿಯತ್ತ ಮುಖ ಮಾಡಿದ್ದಾರೆ. ಸಕಲೇಶಪುರದ ಸುಂದರವಾದ ಪ್ರಕೃತಿಯ ಮಡಿಲಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ.

PREV
19
ನಗರದ ಜಂಜಾಟ ಬಿಟ್ಟು ಪ್ರಕೃತಿಯ ಮಡಿಲಲ್ಲಿ ಕುಟುಂಬದ ಜೊತೆ ಸಮಯ ಕಳೆದ ನಮ್ರತಾ ಗೌಡ

ಕಿರುತೆರೆ ನಟಿ, ಬಿಗ್‌ಬಾಸ್ ಖ್ಯಾತಿಯ ನಮ್ರತಾ ಗೌಡ ನಗರದ ಜಂಜಾಟ ಬಿಟ್ಟು ಹಳ್ಳಿಯತ್ತ ಮುಖ ಮಾಡಿದ್ದಾರೆ. ಸಕಲೇಶಪುರದ ಸುಂದರವಾದ ಪ್ರಕೃತಿಯ ಮಡಿಲಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ.

29

ಹಸಿರು ಹಸಿರಾದ ಪ್ರಕೃತಿಯ ನಡುವೆ ನಮೃತಾ ಗೌಡ ಸಿಂಪಲ್‌ ಲುಕ್‌ನಲ್ಲಿ ಫೋಸ್ ಕೊಟ್ಟಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

39

ಪ್ರಕೃತಿಯ ಮಧ್ಯೆಯಿರುವ ಸುಂದರವಾದ ರೆಸಾರ್ಟ್‌ನಲ್ಲಿ ನಮ್ರತಾ ತಮ್ಮ ಅಪ್ಪ-ಅಮ್ಮನ ಜೊತೆ ಸಮಯ ಕಳೆಯುತ್ತಿದ್ದಾರೆ. ಸುತ್ತಮುತ್ತಲಿನ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

49

ಮಾತ್ರವಲ್ಲ ಹೊಸ ಫುಡ್‌ಗಳನ್ನು ಟೇಸ್ಟ್ ಮಾಡುತ್ತಿರುವ ಪೋಟೋವನ್ನು ಸಹ ನಮ್ರತಾ ಶೇರ್ ಮಾಡಿದ್ದಾರೆ. ಟೇಬಲ್‌ನಲ್ಲಿ ಹರಡಿರುವ ಆಹಾರದ ಪ್ಲೇಟ್‌ಗಳನ್ನು ಪೋಟೋದಲ್ಲಿ ನೋಡಬಹುದು.

59

ನೆಟ್ಟಿಗರು ಫೋಟೋಸ್‌ಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಸೂಪರ್ ನೇಚರ್‌, ಅಪ್ಪ-ಅಮ್ಮನ ಜೊತೆ ಕಳೆಯುತ್ತಿರುವುದು ಬೆಸ್ಟ್ ಎಂದೆಲ್ಲಾ ಹೊಗಳಿದ್ದಾರೆ.

69

ನಮ್ರತಾ ಗೌಡ 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ನಮ್ರತಾ ಗೌಡ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ 'ಪುಟ್ಟ ಗೌರಿ' ಮದುವೆ ಧಾರಾವಾಹಿಯಲ್ಲಿ ಹಿಮ ಪಾತ್ರದಲ್ಲಿ ಮಿಂಚಿದ್ದರು. 

79

ಕನ್ನಡ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ, ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ. ತಮ್ಮ ಉತ್ತಮ ನಟನೆಯಿಂದ ಮನೆ ಮಾತಾಗಿದ್ದರು. 

89

ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಕಿರುತೆರೆ, ಯೂಟ್ಯೂಬ್​ ಚಾನೆಲ್​ನಲ್ಲಿ ಸದ್ದು ಮಾಡ್ತಿದ್ದ ನಮ್ರತಾ ಗೌಡ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.

99

ನಾಗಿಣಿ 2, ಬಿಗ್ ಬಾಸ್ ಸೀಸನ್ 10 ಶೋ ಮೂಲಕ ಗಮನ ಸೆಳೆದ ನಮ್ರತಾ ಗೌಡ ಇತ್ತೀಚಿಗಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ದುಬಾರಿ ಕಾರು ಖರೀದಿಸುವ ಮೂಲಕ ನಟಿ ಸಂಭ್ರಮಿಸಿದ್ದಾರೆ.‌ 

Read more Photos on
click me!

Recommended Stories