ಕೈಯಲ್ಲಿ ಹುಕ್ಕಾ ಹಿಡಿದು ಮಾದಕ ಲುಕ್ ಕೊಟ್ಟ ಲಕ್ಷ್ಮೀ ಬಾರಮ್ಮ ಸೀರಿಯಲ್ ವಿಧಿ

Published : Apr 24, 2024, 04:43 PM IST

ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಅಹಂಕಾರಿ ವಿಧಿ ಪಾತ್ರದಲ್ಲಿ ನಟಿಸುತ್ತಿರುವ ಲಾವಣ್ಯ ಕೈಯಲ್ಲಿ ಹುಕ್ಕಾ ಹಿಡಿದು ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಸಖತ್ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. 

PREV
16
ಕೈಯಲ್ಲಿ ಹುಕ್ಕಾ ಹಿಡಿದು ಮಾದಕ ಲುಕ್ ಕೊಟ್ಟ ಲಕ್ಷ್ಮೀ ಬಾರಮ್ಮ ಸೀರಿಯಲ್ ವಿಧಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಲ್‌ನಲ್ಲಿ ವೈಷ್ಣವ್ ತಂಗಿ ಅಹಂಕಾರಿ ವಿಧಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಲಾವಣ್ಯ ಹಿರೇಮಠ್ ತಮ್ಮ ಹೊಸ ಫೋಟೋ ಶೂಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿ ಕೊಂಡಿದ್ದಾರೆ. 
 

26

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಅಮ್ಮನ ಪ್ರೀತಿ ಪಡೆಯದ ಹಠಮಾರಿ ಹುಡುಗಿ, ಲಕ್ಷ್ಮಿಯನ್ನು ಕಂಡರೆ ಉರಿದು ಬೀಳುವ, ಬಡವರನ್ನು ಕೀಳಾಗಿ ಕಾಣುವ ವಿಧಿ ಪಾತ್ರದಲ್ಲಿ ಲಾವಣ್ಯ ಹೀರೇಮಠ್ (Lavaya Hiremath) ನಟಿಸುತ್ತಿದ್ದಾರೆ. ಇವರ ಪಾತ್ರ ನೋಡಿದ್ರೆನೆ ವೀಕ್ಷಕರಿಗೆ ಕೋಪ ಬರುತ್ತೆ. ಅಷ್ಟು ಚೆನ್ನಾಗಿ ನಟಿಸುತ್ತಾರೆ. 
 

36

ಲಾವಣ್ಯ ಹಿರೇಮಠ್ ವೃತ್ತಿಯಲ್ಲಿ ದಂತವೈದ್ಯೆಯಾಗಿದ್ದು (Dentist), ಪ್ರವೃತ್ತಿಯಲ್ಲಿ ನಟಿಯಾಗಿದ್ದಾರೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ಗೂ ಮುನ್ನ ನನ್ನರಸಿ ರಾಧೆ ಸೀರಿಯಲ್ ನಲ್ಲಿ ಇವರು ನಟಿಸಿದ್ದರು. ಸೀರಿಯಲ್ ನಲ್ಲೂ ಸಖತ್ ಸ್ಟೈಲಿಶ್ ಆಗಿರುವ ಲಾವಣ್ಯ. ನಿಜ ಜೀವನದಲ್ಲೂ ತುಂಬಾನೆ ಬೋಲ್ಡ್ ಮತ್ತು ಸ್ಟೈಲಿಶ್ ಆಗಿದ್ದಾರೆ. 
 

46

ಇದೀಗ ಲಾವಣ್ಯ ಹೊಸ ಫೋಟೋ ಮಾಡಿಸಿ ಕೊಂಡಿದ್ದು, ಒಂದಷ್ಟು ಫೋಟೋಗಳನ್ನು ತಮ್ಮ ಸೋಶಿಯಲ್ ಮಿಡೀಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಸೀರೆಯುಟ್ಟು, ಸೀರೆ ಸೆರಗು ಜಾರಿಸಿ, ಕೈಯಲ್ಲಿ ಹುಕ್ಕಾ ಹಿಡಿದು, ಮಾದಕ ನೋಟ ಬೀರುತ್ತಾ, ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ ಲಾವಣ್ಯ. 
 

56

ಡಾರ್ಕ್ ಕೆಂಪು ಬಣ್ಣದ ಸೀರೆ, ಮೂಗಲ್ಲಿ ನತ್ತು, ಆಂಟಿಕ್ ಜ್ಯುವೆಲ್ಲರಿಗಳನ್ನು ಧರಿಸಿ, ಆಂಟಿಕ್ ಪ್ಲೇಸ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಲಾವಣ್ಯ ಲುಕ್ ಗೆ ಸೀರಿಯಲ್ ನ ಸಹ ಕಲಾವಿದರಾದ ತನ್ವಿ ರಾವ್, ರಜನಿ ಮೊದಲಾದವರು ಹಾಟಿ, ಬೆಂಗಳೂರಿನ ಟೆಂಪ್ರೇಚರ್ ಮತ್ತಷ್ಟು ಹೆಚ್ಚಿಸುತ್ತಿದ್ದೀರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

66

ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಕಾವೇರಿ ಪಾತ್ರ ಮಾಡುತ್ತಿರುವ, ಮೇಕಪ್ ಆರ್ಟಿಸ್ಟ್ ಆಗಿರುವ ಸುಷ್ಮಾ ನಾಣಯ್ಯ (Sushma Nanayya) ಮೇಕಪ್ ಮಾಡಿದ್ದು, ನಟಿ ಪದ್ಮಜಾ ರಾವ್ ಅವರ ಆಂಟಿಕ್ ಬಂಗಲೆಯಲ್ಲಿ ಶೂಟಿಂಗ್ ಮಾಡಲಾಗಿದೆ. ಆನ್ಯ ಪ್ಯಾಶನ್ ಅವರ ಔಟ್ ಫಿಟ್ ನಲ್ಲಿ ಲಾವಣ್ಯ ಸಖತ್ತಾಗಿ ಮಿಂಚುತ್ತಿದ್ದಾರೆ. 
 

Read more Photos on
click me!

Recommended Stories