ಹರ್ಷ -ಭುವಿ ಜೋಡಿ ಬಗ್ಗೆ ನೆನಪಿಸುವ ಅಗತ್ಯಾನೆ ಇಲ್ಲ. ಕನ್ನಡತಿ ಧಾರಾವಾಹಿ (Kannadathi serial) ಮೂಲಕ ಜನಮನ ಗೆದ್ದ ಫೇವರಿಟ್ ಜೋಡಿ ಇವರು. ಸದ್ಯ ಹರ್ಷ ಮತ್ತು ಭುವಿ ಇಬ್ಬರೂ ಸೀರಿಯಲ್ ಗಳಿಂದ ದೂರ ಇದ್ದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇದೀಗ ಹರ್ಷ ಅಂದ್ರೆ ಕಿರಣ್ ರಾಜ್ (Kiran Raj) ಅವರ ನ್ಯೂ ಲುಕ್ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಕಿರಣ್ ಸ್ಟೈಲಿಶ್ ಲುಕ್ ನೋಡಿ ಅಭಿಮಾನಿಗಳು ಮನಸೋತಿದ್ದು, ಅದರಲ್ಲೂ ಮಹಿಳಾ ಅಭಿಮಾನಿಗಳು ಫಿದಾ ಆಗೋಗ್ಬಿಟ್ಟಿದ್ದಾರೆ.
ಸೈಮಾ (SIIMA) ನಾಮಿನೇಶನ್ ಪಾರ್ಟಿಗೆ ಕಿರಣ್ ರಾಜ್ ಆಗಮಿಸುತ್ತಿರುವ ವಿಡಿಯೋ ಭಾರಿ ಸದ್ದು ಮಾಡ್ತಿದೆ. ಅನಿಲ್ ಅನಿ ಡಿಸೈನ್ ಮಾಡಿರುವ ಬ್ಲ್ಯಾಕ್ ಬಣ್ಣದ ಬ್ಲೇಸರ್ ರೀತಿಯ ವಿ ನೆಕ್ ಶರ್ಟ್ ಧರಿಸಿದ್ದು, ಅದರ ಜೊತೆಗೆ ಬ್ಲ್ಯಾಕ್ ಫಾರ್ಮಲ್ಸ್ ಹಾಗೂ ಗಾಗಲ್ಸ್ ಧರಿಸಿದ್ದು ತುಂಬಾನೆ ಹಾಟ್ ಆಗಿ ಕಾಣಿಸ್ತಿದ್ದಾರೆ.
ಕಿರಣ್ ರಾಜ್ ಫೋಟೊ ಸೋಶಿಯಲ್ ಮೀಡೀಯಾದಲ್ಲಿ (Social media) ಅಪ್ ಲೋಡ್ ಆಗುತ್ತಿದ್ದಂತೆ, ಅಭಿಮಾನಿಗಳು ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಇದರಲ್ಲಿ ಹೆಚ್ಚಾಗಿ ಮಹಿಳಾ ಅಭಿಮಾನಿಗಳೇ ಇದ್ದು ಕಿರಣ್ ಸ್ಟೈಲಿಶ್ ಲುಕ್ ಮಹಿಳಾ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದಂತಿದೆ ಅನ್ನೋದನ್ನ ಕಾಮೆಂಟ್ ನೋಡಿದ್ರೇನೆ ತಿಳಿಯುತ್ತೆ.
ಕಿಂಗ್ ಆಫ್ ಸ್ಟೈಲ್, ನಿಮ್ಮನ್ನ ನೋಡಿ ಕಳೆದೋಗ್ಬಿಟ್ಟೆ, ಜಸ್ಟ್ ಲುಕ್ಕಿಂಗ್ ಲೈಕ್ ವಾವ್, ಬ್ಲ್ಯಾಕ್ ಡ್ರೆಸಲ್ಲಿ ಹ್ಯಾಂಡ್ಸಮ್ ಹುಡುಗ, ನೆಕ್ಸ್ಟ್ ಇಯರ್ ಬ್ಲ್ಯಾಕ್ ಲೇಡಿ ಗ್ಯಾರಂಟಿ ಎಂದು ಹಾರೈಸಿದ್ದಾರೆ. ಅಷ್ಟೇ ಅಲ್ಲದೇ ಸ್ಟನ್ನಿಂಗ್, ಬ್ರೀತ್ ಟೇಕಿಂಗ್, ಬೆಂಕಿ ಲುಕ್, ಹ್ಯಾಂಡ್ಸಮ್, ನನ್ನ ಬಾಯ್ ಫ್ರೆಂಡ್ ಆಗ್ತೀರಾ?, ಹಾಟ್ ಆಗಿ ಕಾಣಿಸ್ತೀರಿ ಎನ್ನುವಂತಹ ಕಾಮೆಂಟ್ ಗಳೇ ಕಾಣಿಸ್ತಿದೆ.
ಅಷ್ಟೇ ಅಲ್ಲ ನೀವು ಹಾಲಿವುಡ್ ಹೀರೋ ತರ ಕಾಣಿಸ್ತಿದ್ದೀರಿ, ಆ ಲುಕ್, ಆ ಸ್ಟೈಲ್, ಆಟಿಟ್ಯೂಡ್, ಕಾನ್ಫಿಡೆನ್ಸ್ ಲೆವೆಲ್ ನೆಕ್ಸ್ಟ್ ಲೆವೆಲ್. ಹ್ಯಾಂಡ್ಸಮ್ ಮತ್ತು ಟ್ಯಾಲೆಂಟೆಡ್ ಹೀರೋ ಎಂದಿದ್ದಾರೆ. ಇದ್ರ ಜೊತೆ ಇನ್ನೊಬ್ಬರು ಸೂಪರ್ ಹ್ಯಾಂಡ್ಸಮ್ ಆಗಿದ್ದೀರಾ ಸರ್ ಕಿರಣ್ ಸರ್ ಎಂದಿದ್ದಾರೆ.
ಇನ್ನು ಕನ್ನಡತಿಯ ಕೋ ಸ್ಟಾರ್ ರಂಜನಿ ರಾಘವನ್ (Ranjani Raghavan) ಸಹ ಕಿರಣ್ ರಾಜ್ ವಿಡಿಯೋಗೆ ಕಾಮೆಂಟ್ ಮಾಡಿದ್ದು, ಯು ಲುಕ್ ಗ್ರೇಟ್, ನಿಮ್ಮ ಚಿತ್ರ ಬಿಡುಗಡೆಗೆ ಅಭಿನಂದನೆಗಳು ಎಂದು ಹೇಳಿದ್ದಾರೆ. ಇದಕ್ಕೆ ಕಿರಣ್ ಕೂಡ ಉತ್ತರಿಸಿದ್ದು, ಥ್ಯಾಂಕ್ಯೂ ಸೋ ಮಚ್. ನಿಮ್ಮ ಮುಂದಿನ ಎಲ್ಲಾ ಪ್ರಾಜೆಕ್ಟ್ ಗಳಲ್ಲೂ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.