‘ನಂದಗೋಕುಲ’ ಧಾರಾವಾಹಿಯ ಮುದ್ದಿನ ಸೊಸೆಯಂದಿರಾದ ಮೀನಾ, ಅಮೂಲ್ಯ ಮತ್ತು ಪ್ರಿಯಾ ಜೊತೆಯಾಗಿ ಮಂತ್ರಾಲಯಕ್ಕೆ ತೆರಳಿದ್ದು, ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಬಂದಿದ್ದಾರೆ. ಅಮೂಲ್ಯ ಪಾತ್ರಧಾರಿ ಊರ್ಜಿತಾ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನಂದಗೋಕುಲ’ ಧಾರಾವಾಹಿ ನಟಿಯರಾದ ಮೇಘಾ ಸಂಜು, ಅರ್ಪಿತಾ ಗೌಡ ಹಾಗೂ ಊರ್ಜಿತಾ ವಲ್ತಾಜೆ ಜೊತೆಯಾಗಿ ತಮ್ಮ ಕುಟುಂಬದೊಂದಿಗೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಬಂದಿದ್ದಾರೆ.
26
ಮಂತ್ರಾಲಯದಲ್ಲಿ ನಂದಗೋಕುಲದ ಮುದ್ದು ಸೊಸೆಯಂದಿರು
ನಂದನ ಮುದ್ದು ಸೊಸೆಯಂದಿರು ಜೊತೆಯಾಗಿ ರಾಯರ ದರ್ಶನ ಪಡೆದಿದ್ದು, ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ನಟಿಯರ ಫೋಟೊಗಳು.
36
ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡ ನಟಿಯರು
ಮೀನಾ ಪಾತ್ರಧಾರಿ ಮೇಘಾ, ಅಮ್ಮು ಪಾತ್ರದಲ್ಲಿ ನಟಿಸುತ್ತಿರುವ ಊರ್ಜಿತಾ ಹಾಗೂ ಪ್ರಿಯಾ ಪಾತ್ರದಲ್ಲಿ ನಟಿಸುತ್ತಿರುವ ಅರ್ಪಿತಾ ಗೌಡ, ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡಿದ್ದು, ಜೊತೆಯಾಗಿ ರಾಯರ ದರ್ಶನ ಪಡೆದು ಬಂದಿದ್ದಾರೆ. ನಂದನ ಸೊಸೆಯಂದಿರನ್ನು ಒಟ್ಟಾಗಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ನಟಿಯರು ತಮ್ಮ ರಿಯಲ್ ಫ್ಯಾಮಿಲಿ ಜೊತೆ ರಾಯರ ದರ್ಶನ ಪಡೆದಿದ್ದರೆ. ಪ್ರಿಯಾ ಪಾತ್ರಧಾರಿ ನಟಿ ಅರ್ಪಿತಾ ಗೌಡ ಅವರು ಪತಿ ಹೇಮಂತ್ ಜೊತೆ, ಮೀನಾ ಪಾತ್ರ ಮಾಡುತ್ತಿರುವ ನಟಿ ಮೇಘಾ ಸಂಜು ಅವರು ಪತಿ ಸಂಜು ಜೊತೆಗೆ ಮಂತ್ರಾಲಯ ದರ್ಶನ ಪಡೆದಿದ್ದಾರೆ.
56
ಕೂಡು ಕುಟುಂಬದ ಕಥೆ ನಂದಗೋಕುಲ
ನಂದಗೋಕುಲ ಧಾರಾವಾಹಿ ನಂದ ಮತ್ತು ಗಿರಿಜಾರ ಕೂಡು ಕುಟುಂಬದ ಕಥೆಯಾಗಿದೆ. ನಂದನ ಮೂವರು ಗಂಡು ಮಕ್ಕಳ ಮದುವೆ, ಸಂಸಾರದ ಕಥೆ ವ್ಯಥೆಯೇ ಈ ಧಾರಾವಾಹಿಯ ಮುಖ್ಯ ಕಥೆಯಾಗಿದೆ. ಪ್ರತಿಯೊಬ್ಬ ನಟರೂ ಕೂಡ ಈ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸುತ್ತಿದ್ದಾರೆ.
66
ತೆರೆ ಮೇಲೆ ಶತ್ರುಗಳು, ತೆರೆ ಹಿಂದೆ ಮಿತ್ರರು
ನಂದಗೋಕುಲ ಧಾರಾವಾಹಿಯಲ್ಲಿ ಮೀನಾ ಮತ್ತು ಅಮ್ಮು ತುಂಬಾನೆ ಕ್ಲೋಸ್ ಇದ್ದಾರೆ, ಆದರೆ ಹಿರಿಯ ಸೊಸೆ ಪ್ರಿಯಾ ಎಂದರೆ ಅಕ್ಕ ತಂಗಿ ಇಬ್ಬರಿಗೂ ಆಗಿ ಬರೋದಿಲ್ಲ. ಅದಕ್ಕೆ ಕಾರಣ ಪ್ರಿಯಾ ಎಲ್ಲರ ಮಧ್ಯೆ ತಂದಿಡುವ ಗುಣ. ಆದರೆ ತೆರೆಯ ಹಿಂದೆ ಎಲ್ಲರೂ ತುಂಬಾನೆ ಕ್ಲೋಸ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.