ಹೊಸ ಹೇರ್‌ಸ್ಟೈಲ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿರುವ ಕಿರುತೆರೆಯ ಜನಪ್ರಿಯ ನಟಿ ಮೌನಾ ಗುಡ್ಡೆಮನೆ ಅವರ ಈ ಲುಕ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮೌನಾ ಗುಡ್ಡೆಮನೆ ತಮ್ಮ ಹೊಸ ಅವತಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರ ಹೊಸ ಫೋಟೋಗಳು ಭಾರೀ ವೈರಲ್ ಆಗಿದ್ದು, ಅದರಲ್ಲಿರುವ ಹೊಚ್ಚಹೊಸ ಶಾರ್ಟ್ ಹೇರ್‌ಸ್ಟೈಲ್ ಎಲ್ಲರ ಗಮನ ಸೆಳೆದಿದೆ.
26
ಮಾಡರ್ನ್ ಸ್ಟೈಲ್‌ನಲ್ಲಿ ಮೌನಾ
ಸದಾ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೌನಾ, ಈ ಬಾರಿ ಸಂಪೂರ್ಣ ಮಾಡರ್ನ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಕೇಶವಿನ್ಯಾಸವು ಅವರ ವ್ಯಕ್ತಿತ್ವಕ್ಕೆ ವಿಭಿನ್ನ ಮೆರಗು ನೀಡಿದ್ದು, ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
36
ನೆಟ್ಟಿಗರ ಅಭಿಪ್ರಾಯವೇನು?
ವೈರಲ್ ಫೋಟೋಗಳಲ್ಲಿ ಮೌನಾ ತಿಳಿ ಹಳದಿ ಮತ್ತು ಬಿಳಿ ಬಣ್ಣದ ಫ್ಲೋರಲ್ ಗೌನ್ ಧರಿಸಿದ್ದು, ಅದರೊಂದಿಗೆ ಶಾರ್ಟ್ ಹೇರ್‌ಸ್ಟೈಲ್ ಅದ್ಭುತವಾಗಿ ಹೊಂದಿಕೊಂಡಿದೆ. ಈ ಹೊಸ ಲುಕ್‌ನಲ್ಲಿ ಅವರು ಅತ್ಯಂತ ಸ್ಟೈಲಿಶ್ ಹಾಗೂ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ನೆಟ್ಟಿಗರ ಅಭಿಪ್ರಾಯ.
ಬೆಂಗಳೂರಿನ ಖ್ಯಾತ ಹೇರ್ ಸಲೂನ್‌ನಲ್ಲಿ ಈ ಹೊಸ ಹೇರ್‌ಕಟ್ ಮಾಡಿಸಿಕೊಂಡಿರುವ ಮೌನಾ, ಕ್ಯಾಮೆರಾ ಮುಂದೆ ನಗುಮುಖದಿಂದ ವಿವಿಧ ಪೋಸ್‌ಗಳನ್ನು ನೀಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳಿಂದ ಲೈಕ್ಸ್ ಮತ್ತು ಕಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ.
56
ಸುಂದರವಾಗಿ ಕಾಣಿಸುತ್ತಿದ್ದೀರಿ
'ಶಾರ್ಟ್ ಹೇರ್ ನಿಮಗೆ ತುಂಬಾ ಸೂಟ್ ಆಗಿದೆ', 'ಇದು ನಿಮ್ಮ ಬೆಸ್ಟ್ ಲುಕ್', 'ಇನ್ನಷ್ಟು ಸುಂದರವಾಗಿ ಕಾಣಿಸುತ್ತಿದ್ದೀರಿ' ಎಂಬ ಕಾಮೆಂಟ್‌ಗಳ ಮೂಲಕ ಅಭಿಮಾನಿಗಳು ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
66
ಪ್ರಮುಖ ಪಾತ್ರದಲ್ಲಿ ಮೌನಾ
ಕಿರುತೆರೆಯಲ್ಲಿ ರಾಮಾಚಾರಿ ಧಾರಾವಾಹಿಯ ಮೂಲಕ ಗಮನ ಸೆಳೆದಿದ್ದ ಮೌನಾ, ಪ್ರಸ್ತುತ ಕೃಷ್ಣ ರುಕ್ಕು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ, ಲವ್ ಪಂಚ್ ವೆಬ್ ಸರಣಿಯಲ್ಲಿ ವಿಭಿನ್ನ ಹಾಗೂ ಬೋಲ್ಡ್ ಪಾತ್ರದ ಮೂಲಕವೂ ಅವರು ಗಮನ ಸೆಳೆದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.