ನಂದಗೋಕುಲ ಧಾರಾವಾಹಿಯಲ್ಲಿ ನಂದನ ಕಿರಿಯ ಪುತ್ರಿಯಾಗಿ, ಅಣ್ಣನವರ ಮುದ್ದಿನ ತಂಗಿ ರಕ್ಷಾ ಪಾತ್ರದಲ್ಲಿ ನಟಿಸುತ್ತಿರುವ ಕೃಷ್ಣಪ್ರಿಯಾ ಭಟ್ ಹೊಸ ಜೀವನಕ್ಕೆ ಕಾಲಿಡುವ ತಯಾರಿಯಲ್ಲಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂದಗೋಕುಲ ಧಾರಾವಾಹಿ ಸದ್ಯಕ್ಕಂತೂ ಜನರ ಫೇವರಿಟ್ ಪಾತ್ರವಾಗಿದೆ. ಧಾರಾವಾಹಿಯ ಪ್ರತಿಯೊಂದು ಪಾತ್ರಗಳನ್ನು ಸಹ ಜನ ಇಷ್ಟಪಟ್ಟಿದ್ದಾರೆ. ಇದರಲ್ಲಿ ಒಂದು ಪಾತ್ರ ರಕ್ಷಾ.
27
ನಂದನ ಕಿರಿಯ ಪುತ್ರಿ, ಅಣ್ಣಂದಿರ ಮುದ್ದಿನ ತಂಗಿ, ಅತ್ತಿಗೆಯ ಪ್ರೀತಿಯ ನಾದಿನಿ ರಕ್ಷಾ ಪಾತ್ರಕ್ಕೆ ಜೀವತುಂಬಿ ನಟಿಸುತ್ತಿರುವ ನಟಿ ಕೃಷ್ಣಪ್ರಿಯಾ ಭಟ್. ಈಗಷ್ಟೇ ಶುರುವಾದ ಧಾರಾವಾಹಿಯಲ್ಲಿ ತಮ್ಮ ಪಾತ್ರದ ಮೂಲಕ ಜನರನ್ನು ಸೆಳೆದು, ಹುಡುಗರ ಕ್ರಶ್ ಕೂಡ ಆಗಿದ್ರು.
37
ಇದೀಗ ನಟಿ ಕೃಷ್ಣಪ್ರಿಯ ಹೊಸ ಜೀವನಕ್ಕೆ ಕಾಲಿಡಲು ರೆಡಿಯಾಗುತ್ತಿದ್ದಾರೆ. ಇತ್ತೀಚೆಗೆ ಕೃಷ್ಣಪ್ರಿಯ ನಿಶ್ಚಿತಾರ್ಥ ಮಾಡಿಕೊಂಡಿದ್ದು, ತಾವು ಹೊಸ ಜೀವನಕ್ಕೆ ಕಾಲಿಟ್ಟಿರುವ ಫೋಟೊಗಳನ್ನು ನಟಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ತಮ್ಮ ಎಂಗೇಜ್ಮೆಂಟ್ ಫೋಟೊಗಳ ಜೊತೆಗೆ Officially upgraded my “partner in crime” to “partner for life ಎಂದು ಬರೆದುಕೊಂಡಿದ್ದಾರೆ. ಅಂದರೆ, ಸ್ನೇಹಿತರಾಗಿದ್ದವರು, ಈಗ ಜೀವನ ಸಂಗಾತಿಗಳಾಗಿ ಅಪ್ ಗ್ರೇಡ್ ಹೊಂದುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿದೆ.
57
ಇವರು ಮದುವೆಯಾಗುತ್ತಿರುವ ಹುಡುಗನ ಹೆಸರು ಅಮೋಘ ಕುಂಟಿನಿ. ಇವರು ವೃತ್ತಿಯಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿದ್ದು, ಯಕ್ಷಗಾನ ಕಲಾವಿದರು ಕೂಡ ಹೌದು, ಅನ್ನೋದನ್ನು ಅವರ ಸೋಶಿಯಲ್ ಮೀಡಿಯಾ ಪ್ರ್ಹೊಫೈಲ್ ಹೇಳುತ್ತಿದೆ. ಹೆಚ್ಚಿನ ಮಾಹಿತಿ ತಿಳಿದಿಲ್ಲ.
67
ಕೃಷ್ಣಪ್ರಿಯಾ ಮಂಗಳೂರಿನ ಬೆಡಗಿಯಾಗಿದ್ದು, ಸದ್ಯ ಬೆಂಗಳೂರಿನಲ್ಲೇ ಇದ್ದು, ಸದ್ಯ ನಂದಗೋಕುಲದಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕೂ ಮುನ್ನ ಇವರು ನನ್ನ ಬಿಟ್ಟೋಗ್ಬೇಡಾ ಎನ್ನುವ ಆಲ್ಬಂ ಹಾಡಿನಲ್ಲಿ ನಟಿಸಿದ್ದರು.
77
ನಂದಗೋಕುಲದಲ್ಲಿ ರಕ್ಷಾ ಪಾತ್ರವನ್ನು ಹೆಚ್ಚಿನ ಜನರು ಮೆಚ್ಚಿಕೊಂಡಿದ್ದು, ಇವರ ಕ್ಯೂಟ್ನೆಸ್ ಗೆ ಹುಡುಗರು ಫಿದಾ ಆಗಿದ್ದಾರೆ. ನಟಿಯ ನಿಶ್ಚಿತಾರ್ಥದ ಫೋಟೊ ನೋಡಿ, ಛೇ ಈಗಷ್ಟೇ ನಿಮ್ಮ ಮೇಲೆ ಕ್ರಶ್ ಆಗಿತ್ತು, ಇಷ್ಟು ಬೇಗ ಎಂಗೇಜ್ ಆಗ್ಬಿಟ್ರಾ ಎಂದು ಕೇಳಿದ್ದಾರೆ.