ಬ್ರಹ್ಮಗಂಟು ಧಾರಾವಾಹಿ ನಾಯಕಿ ದೀಪಾ, ಆಲಿಯಾಸ್ ದಿಯಾ ಪಾಲಕ್ಕಲ್ ಸೀರಿಯಲ್ ನಲ್ಲಿ ಮಾತ್ರ ಕಪ್ಪು, ಕೊಂಚ ಕುರೂಪಿ, ಆದರೆ ರಿಯಲ್ ಲೈಫಲ್ಲಿ ಈಕೆ ಎಷ್ಟು ಸುಂದರಿ ಎಂದರೆ ಕಪ್ಪು-ಬಿಳುಪು ಫೊಟೊದಲ್ಲೂ ಎದ್ದು ಕಾಣುತ್ತೆ ಸೌಂದರ್ಯ. ಅಷ್ಟೊಂದು ಸುಂದರಿ ಈಕೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕನ್ನಡ ಧಾರಾವಾಹಿ ಬ್ರಹ್ಮಗಂಟಿನಲ್ಲಿ ನಾಯಕಿ ದೀಪಾ ಪಾತ್ರಕ್ಕೆ ಜೀವ ತುಂಬುತ್ತಿರುವ ನಟಿ ದಿಯಾ ಪಾಲಕ್ಕಲ್ (Diya Palakkal). ದೀಪಾ ಪಾತ್ರ ಹೇಗಿದೆ ಅನ್ನೋದು ನಿಮಗೆ ಗೊತ್ತಿದೆ ಅಲ್ವಾ? ನೋಡಲು ಕಪ್ಪಾಗಿರುವ, ಕನ್ನಡಕ ಧರಿಸಿ, ಹಳ್ಳಿ ಗುಗ್ಗು ಆಗಿ, ಯಾವಾಗ್ಕೂ ಸೀರೆ, ಕನ್ನಡ ಧರಿಸಿ ಹಜ್ಬೆಂಡ್ ಎಂದು ಓಡಾಡುವ ಹುಡುಗಿ ದೀಪಾ.
27
ರಿಯಲ್ ಲೈಫಲ್ಲಿ ಅಪ್ಸರೆ
ಸೀರಿಯಲ್ ನ ದೀಪಾ ಪಾತ್ರಕ್ಕಾಗಿ ದಿಯಾ ಅವರನ್ನು ಕೊಂಚ ಕುರೂಪಿಯಂತೆ ತೋರಿಸಲಾಗಿದೆ. ಆದರೆ ರಿಯಲ್ ಲೈಫಲ್ಲಿ ದಿಯಾ ತುಂಬಾನೆ ಸುಂದರವಾಗಿದ್ದಾರೆ. ಎಷ್ಟು ಸುಂದರಿ ಎಂದರೆ ಬ್ಲ್ಯಾಕ್ ಆಂಡ್ ವೈಟ್ ಫೋಟೊದಲ್ಲೂ ನಟಿಯ ಸೌಂದರ್ಯ ಎದ್ದು ಕಾಣುತ್ತೆ.
37
ಬ್ಲ್ಯಾಕ್ & ವೈಟ್ ಫೋಟೊ ವೈರಲ್
ಇದೀಗ ಸೋಶಿಯಲ್ ಮೀಡಿಯಾದಲ್ಲಿ (social media) ದಿಯಾ ಅವರ ಬ್ಲ್ಯಾಕ್ & ವೈಟ್ ಫೋಟೊಗಳು ವೈರಲ್ ಆಗುತ್ತಿದ್ದು, ಟ್ರಾನ್ಸರೆಂಟ್ ಸೀರೆ ಧರಿಸಿರುವ ನಟಿ, ಮುದ್ದಾಗಿ ಪೋಸ್ ಕೊಟ್ಟಿದ್ದು, ಆಕೆಯ ನಗುವೆ ಮ್ಯಾಜಿಕ್ ಅಂತೆ ಮನ ಸೆಳೆಯುತ್ತಿದೆ.
ಬ್ರಹ್ಮಗಂಟು ಧಾರಾವಾಹಿಯಲ್ಲೂ (Bramhagantu serial) ಇನ್ನು ಸದ್ಯದಲ್ಲೇ ದೀಪಾ ಪಾತ್ರದ ಬದಲು ದಿಶಾ ಪಾತ್ರ ಕಾಣಸಿಗಲಿದೆ. ಕಥೆಯಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ದೀಪಾ ದಿಶಾ ಆಗಿ ಚಿರು ಮುಂದೆ ಬರಲಿದ್ದಾರೆ. ಚಿರು ರಿಯಾಕ್ಷನ್ ಹೇಗಿರುತ್ತೆ ಅನ್ನೋದನ್ನು ನೋಡಲು ಜನ ಕಾಯುತ್ತಿದ್ದಾರೆ.
57
ಹೊಸ ಲುಕ್'ಗೆ ಮೆಚ್ಚುಗೆ
ಸೀರಿಯಲ್ ನಲ್ಲಿ ದಿಶಾ ಪ್ರೊಮೊ ಬಿಡುಗಡೆಯಾಗುತ್ತಿದ್ದಂತೆ, ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದು, ಫೈನಲಿ ನಮ್ಮ ಆಸೆಯಂತೆ ದೀಪಾ ಹೊಸ ಲುಕ್ ನೋಡಾಯ್ತು, ತುಂಬಾನೆ ಸುಂದರಿಯಂತೆ ಕಾಣಿಸ್ತಿದ್ದಾರೆ. ಮುಂದಿನ ಎಪಿಸೋಡ್ ಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ. ದಿಯಾ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
67
ಬಾಲ ನಟಿಯಾಗಿ ಎಂಟ್ರಿ
ಕಿನ್ನರಿ ಧಾರಾವಾಹಿಯಲ್ಲಿ ಬಾಲನಟಿಯಾಗಿ ನಟಿಸಿದ್ದ ದಿಯಾ ಪಾಲಕ್ಕಲ್, ಬಳಿಕ ಹಲವಾರು ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ಬಾಲನಟಿಯಾಗಿ ಅಭಿನಯಿಸಿ, ಜನಮನ ಗೆದ್ದಿದ್ದರು. ಇದೀಗ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
77
ಸಿನಿಮಾಗಳಲ್ಲೂ ನಟನೆ
ಕುಂದ ಕನ್ನಡದ ಸಿನಿಮಾವಾಗಿರುವ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ಪಾತ್ರ ನಿರ್ವಹಿಸಿ ವೀಕ್ಷಕರ ಮೆಚ್ಚುಗೆಗೆ ಕೂಡಾ ಪಾತ್ರರಾಗಿದ್ದರು ದಿಯಾ. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು. ಇದಲ್ಲದೇ ಜಾನಿ ಜಾನಿ ಯೆಸ್ ಪಪ್ಪ, ಜಾನ್ ಜಾನಿ ಜನಾರ್ಧನ್ ಸಿನಿಮಾಗಳಲ್ಲೂ ನಟಿಸಿದ್ದಾರೆ.