'ನಾನಿನ್ನ ಬಿಡಲಾರೆ' ಧಾರಾವಾಹಿಯ ಬಾಲನಟಿ ಮಹಿತಾ, ಹಿತಾ ಪಾತ್ರದ ಮೂಲಕ ತನ್ನ ಅದ್ಭುತ ನಟನೆಯಿಂದ ಮಂತ್ರಮುಗ್ಧಗೊಳಿಸಿದ್ದಾಳೆ. ತಾಯಿಯ ಪ್ರೀತಿಗಾಗಿ ಹಂಬಲಿಸುವ ದೃಶ್ಯಗಳಲ್ಲಿ ಭಾವನಾತ್ಮಕವಾಗಿ ನಟಿಸಿ ಕಣ್ಣೀರು ತರಿಸುವ ಈಕೆ, ಈ ಹಿಂದೆ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋಗಳಲ್ಲೂ ಮಿಂಚಿದ್ದಳು
ಕೆಲವರಿಗೆ ಹಾಗೆನೇ. ಟ್ಯಾಲೆಂಟ್ ಎನ್ನುವುದು ಹುಟ್ಟುತ್ತಲೇ ಬಂದು ಬಿಡುತ್ತದೆ. ಹಿಂದಿನ ಜನ್ಮದಿಂದ ಬಂದ ಕಲೆ ಅದು ಎಂದು ಹೇಳುವವರೇ ಹೆಚ್ಚು ಮಂದಿ. ನಟನೆ, ಸಂಗೀತ, ಚಿತ್ರಕಲೆ, ಅಭಿನಯ, ನೃತ್ಯ... ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಚಿಕ್ಕಪುಟಾಣಿ ಇರುವಾಗಲೇ ಇವರು ಮಾಡುವ ಸಾಧನೆ ನೋಡಿದರೆ ನಿಜಕ್ಕೂ ಅದು ಈ ಜನ್ಮದಂತೂ ಇದ್ದಿರಲಿಕ್ಕೆ ಸಾಧ್ಯವೇ ಇಲ್ಲವೇನೋ ಅನ್ನಿಸಿಬಿಡುವುದು ಉಂಟು. ಕಲೆ ಎನ್ನುವುದು ರಕ್ತಗತವಾಗಿ ಬರುವುದು ನಿಜವಾದರೂ, ಕೆಲವೊಮ್ಮೆ ಯಾವ ಹಿನ್ನೆಲೆಯೂ ಇಲ್ಲದ ಪುಟಾಣಿ ಮಕ್ಕಳು ನಡೆದುಕೊಳ್ಳುವ ರೀತಿ ಅಚ್ಚರಿ ಎನ್ನಿಸುವುದು ಉಂಟು.
27
ತಾಯಿಗಾಗಿ ಹಂಬಲಿಸುವ ಹಿತಾ
ಅದೇ ರೀತಿ ಇದೀಗ ನಾನಿನ್ನ ಬಿಡಲಾರೆ ಸೀರಿಯಲ್ (Naa Ninna Bidalaare Serial) ಹಿತಾ. ಈಕೆಯ ನಿಜವಾದ ಹೆಸರು ಮಹಿತಾ. ಈ ಸೀರಿಯಲ್ನಲ್ಲಿ ಈಕೆಯ ಒಂದೊಂದು ಅಭಿನಯಕ್ಕೂ ವೀಕ್ಷಕರು ಮನಸೋತಿದ್ದಾರೆ. ನಗು, ಅಳು, ತಮಾಷೆ ಏನೇ ಇರಲಿ. ಯಾವುದೇ ಭಾವ ಇರಲಿ ಅದಕ್ಕೆ ತಕ್ಕಂತೆ ನಟಿಸುತ್ತಾಳೆ. ದುಃಖದ ಸನ್ನಿವೇಶದಲ್ಲಿ ವೀಕ್ಷಕರನ್ನು ಅಳಿಸುತ್ತಾಳೆ. ಇದರಲ್ಲಿ ಆಕೆ ತಾಯಿಯನ್ನು ಕಳೆದುಕೊಂಡಿರುವ ತಬ್ಬಲಿ ಮಗು. ತಾಯಿಯ ಪ್ರೀತಿಗಾಗಿ ಹಂಬಲಿಸುವ, ತನ್ನ ತಾಯಿಯ ಸಾವಿಗೆ ಅಪ್ಪನೇ ಕಾರಣ ಎಂದು ತಪ್ಪು ತಿಳಿದು ಆತನನ್ನು ದ್ವೇಷಿಸುವ ಕ್ಯಾರೆಕ್ಟರ್ ಈಕೆಯದ್ದು.
37
ಕಣ್ಣಲ್ಲಿ ನೀರು ತರಿಸುವ ಪುಟ್ಟಿ
ನಟನೆಯಲ್ಲಿ ಮಾತ್ರ ಮಹಿತಾ ಒಂದು ಹೆಜ್ಜೆ ಮುಂದು. ಅಬ್ಬಾ ಎನ್ನುವಂಥ ನಟನೆ ಈಕೆಯದ್ದು. ಇದೀಗ ಅಮ್ಮನ ನೆನಪಿನಲ್ಲಿ, ಅಮ್ಮನಿಗಾಗಿ ಹಂಬಲಿಸುತ್ತಾ, ಒಮ್ಮೆ ಬಂದು ನನ್ನನ್ನು ಹಗ್ ಮಾಡು, ಪ್ಲೀಸ್ ಬಾ ಅಮ್ಮಾ... ನನ್ನನ್ನು ಯಾಕೆ ಬಿಟ್ಟುಹೋದೆ... ಎಂದು ಕೇಳುವ ಪರಿ ಮಾತ್ರ ಬಹುತೇಕ ವೀಕ್ಷಕರು , ನೆಟ್ಟಿಗರ ಕಣ್ಣಲ್ಲಿ ನೀರನ್ನು ತರಿಸಿರುವುದು ಕಮೆಂಟ್ನಲ್ಲಿ ಹಾಕಿರುವ ಸಂದೇಶಗಳಿಂದಲೇ ನೋಡಬಹುದು.
ತಾವು ನೋಡ್ತಿರೋದು ಕೇವಲ ಸೀರಿಯಲ್, ಇದರಲ್ಲಿ ಇವರದ್ದು ಕೇವಲ ನಟನೆ ಎಂದು ತಿಳಿದಿದ್ದರೂ ಇಂಥ ನಟನೆ ಬಂದಾಗ ಸೂಕ್ಷ್ಮ ಮನಸ್ಸಿನವರು ಭಾವುಕರಾಗುವುದು ಸಹಜ. ಆದರೆ, ಆ ವೀಕ್ಷಕರ ಮೇಲೆ ಅಂಥ ಪರಿಣಾಮ ಬೀರುವುದು ಕೂಡ ಸುಲಭದ ಮಾತಲ್ಲ. ಅದನ್ನು ಮಾಡುತ್ತಿದ್ದಾಳೆ ಪುಟಾಣಿ ಮಹಿತಾ.
57
ನನ್ನಮ್ಮ ಸೂಪರ್ ಸ್ಟಾರ್ ಪುಟಾಣಿ
ಮಹಿತಾ, ಈ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಮಹಿತಾ, ನಂತರ ಚುಕ್ಕಿತಾರೆ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಳು. ಸದಾ ನಟನೆಯಲ್ಲಿ ಮಿಂಚುತ್ತಿರುವ ಮಹಿತಾ ಒಳ್ಳೆಯ ಸಿಂಗರ್ ಕೂಡ. ಈಕೆ ಇನ್ಸ್ಟಾಗ್ರಾಮ್ ಪುಟ ಹೊಂದಿದ್ದು ಅದರಲ್ಲಿ, ನಾನಿನ್ನ ಬಿಡಲಾರೆ ಸೀರಿಯಲ್ನ ಟೈಟಲ್ ಸಾಂಗ್ ಅನ್ನು ಅದ್ಭುತವಾಗಿ ಹಾಡಿರುವುದನ್ನು ನೋಡಬಹುದು.
67
ಸ್ಕೂಲ್ ಮತ್ತು ಸೀರಿಯಲ್ ಎರಡೂ ಮ್ಯಾನೇಜ್
ಮಹಿತಾ, ಸ್ಕೂಲ್ ಮತ್ತು ಸೀರಿಯಲ್ ಎರಡನ್ನೂ ಮ್ಯಾನೇಜ್ ಮಾಡುತ್ತಿದ್ದಾಳೆ. ಈ ಕುರಿತು ಹಿಂದೊಮ್ಮೆ ಈಕೆಯ ಅಮ್ಮ ತನುಜಾ ಮಾಧ್ಯಮದ ಜೊತೆ ಮಾತನಾಡಿದ್ದರು. 'ಚಿಕ್ಕ ವಯಸ್ಸಿನಲ್ಲಿ ಮಹಿತಾಗೆ ಹಾಡಿನಲ್ಲಿ ತುಂಬಾ ಆಸಕ್ತಿ ಇತ್ತು. ಕೋವಿಡ್ ಸಮಯದಲ್ಲಿ ನಾನು ಜನರಿಗೆ ಅರಿವು ಮೂಡಿಸುವ ವಿಡಿಯೋ ಮಾಡುತ್ತಿದ್ದ ವೇಳೆ ಅವಳಲ್ಲಿ ಇದ್ದ ನಟನೆಯ ಕಲೆಯನ್ನು ಗುರುತಿಸಿದೆ.
ಮಗಳು ಬರೀ ಓದಬೇಕು ಎಂದು ನಾನು ಯಾವತ್ತೂ ಒತ್ತಡ ಹಾಕುವುದಿಲ್ಲ. ಆಕೆಗೆ ಯಾವುದೇ ಟ್ಯಾಲೆಂಟ್ ಇದ್ದರೂ ಸಪೋರ್ಟ್ ಮಾಡಬೇಕು ಅನ್ನೋ ಆಸೆ ನನಗೆ ಇತ್ತು. ಅದರಂತೆಯೇ ಅವಳ ಆಸಕ್ತಿಗೆ ನೀರೆರೆದೆ. ಅವರಿಗೆ ಒಳ್ಳೆಯ ವೇದಿಕೆಯೂ ಸಿಗುತ್ತಾ ಹೋಯಿತು ಎಂದಿದ್ದರು. ಅವಳ ಹಣೆಯಲ್ಲಿ ನಟಿಯಾಗುವುದೇ ಬರೆದಿದ್ದರೆ ಅದೇ ಆಗುತ್ತಾಳೆ. ಅವಳಿಗೆ ಏನೇ ಆಸಕ್ತಿ ಇದ್ದರೂ ಆ ಕ್ಷೇತ್ರದಲ್ಲಿ ನಾವು ಮುಂದುವರೆಯಲು ಬಿಡುತ್ತೇವೆ ಎಂದಿದ್ದರು.