ಕರ್ಣ ಸೀರಿಯಲ್ ಶುರುವಾದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೆಚ್ಚಾಯ್ತು ಭವ್ಯಾ ಗೌಡ ಹವಾ…

Published : Sep 23, 2025, 06:32 PM IST

ಕರ್ಣ ಸೀರಿಯಲ್ ಬಿಡುಗಡೆಯಾದ ಮೇಲೆ ನಟಿ ಭವ್ಯಾ ಗೌಡ ಅಭಿಮಾನಿಗಳ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಜನ ಕರ್ಣ-ನಿಧಿ ಜೋಡಿಯನ್ನು ಎಷ್ಟು ಇಷ್ಟ ಪಡ್ತಿದ್ದಾರೆ ಅಂದ್ರೆ ಫೋಟೊ ಹಾಕಿದ್ರೆ ಸಾಕು, ನಿಧಿ ನಿಧಿ.. ಎನ್ನುತ್ತಾ ಹೊಗಳಿ ಅಟ್ಟಕ್ಕೇರಿಸುತ್ತಿದ್ದಾರೆ ಫ್ಯಾನ್ಸ್. ಹೊಸ ಫೋಟೊ ನೋಡಿ ಏನಂದ್ರು ನೋಡಿ. 

PREV
17
ಕರ್ಣ ಸೀರಿಯಲ್ ನಟಿ

ಕರ್ಣ ಸೀರಿಯಲ್ ನಲ್ಲಿ ನಿಧಿ ಪಾತ್ರದಲ್ಲಿ ಬಬ್ಲಿಯಾಗಿ ನಟಿಸುವ ಮೂಲಕ ಕನ್ನಡ ಕಿರುತೆರೆ ಪ್ರಿಯರ ಮನ ಗೆದ್ದ ನಟಿ ಭವ್ಯಾ ಗೌಡ (Bhavya Gowda). ಕರ್ಣ ಹಾಗೂ ನಿಧಿ ಕೆಮೆಸ್ಟ್ರಿಗೆ ಜನ ಮನಸೋತಿದ್ದಾರೆ.

27
ಭವ್ಯಾ ಗೌಡ

ವೈದ್ಯ ವಿದ್ಯಾರ್ಥಿನಿಯಾಗಿ ಡಾಕ್ಟರ್ ಹಾಗೂ ಪ್ರೊಫೇಸರ್ ಕರ್ಣನನ್ನು ಲವ್ ಮಾಡುವ ಬಬ್ಲಿ ಹುಡುಗಿ ನಿಧಿ ಪಾತ್ರಕ್ಕೆ ಭವ್ಯಾ ಗೌಡ ಜೀವ ತುಂಬಿ . ಸೋಶಿಯಲ್ ಮೀಡಿಯಾ ತುಂಬಾ ಭವ್ಯ ಗುಣಗಾನ ಮಾಡುವವರೇ ಕಾಣಸಿಗುತ್ತಿದ್ದಾರೆ.

37
ಅಭಿಮಾನಿಗಳ ಸಂಖ್ಯೆ ಹೆಚ್ಚಾಯ್ತು

ಭವ್ಯಾ ಗೌಡ ನಟನೆಗೆ ಎಂಟ್ರಿ ಕೊಟ್ಟಿದ್ದು, ಗೀತಾ ಸೀರಿಯಲ್ ಮೂಲಕ, ನಂತರ ಬಿಗ್ ಬಾಸ್ ಸೀಸನ್ 11 (Bigg Boss Season 11) ರಲ್ಲೂ ನಟಿಸಿದ್ದರು. ಆದರೆ ಇದೀಗ ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತ್ರದಲ್ಲಿ ನಟಿಸಿದ ಬಳಿ ನಟಿಯ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ.

47
ಫ್ಯಾನ್ ಪೇಜಸ್ ಹವಾ

ಇನ್’ಸ್ಟಾಗ್ರಾಂ ಓಪನ್ ಮಾಡಿದ್ರೆ ಭವ್ಯಾ ಗೌಡ ಅಭಿಮಾನಿಗಳ ಸಾಕಷ್ಟು ಪೇಜ್ ಗಳು ಕಾಣಸಿಗುತ್ತವೆ. ನಟಿ ಏನೇ ಫೋಟೊ ಶೇರ್ ಮಾಡಿದ್ರು, ಅಭಿಮಾನಿಗಳು ಮೆಚ್ಚಿ ಹೊಗಳಿ ಫೋಟೊಗಳನ್ನೇ ವೈರಲ್ ಮಾಡುವಷ್ಟರ ಮಟ್ಟಿಗೆ ಫ್ಯಾನ್ಸ್ ಸಂಖ್ಯೆ ಹೆಚ್ಚಾಗಿದೆ.

57
ಸಲ್ವಾರ್ ಧರಿಸಿ ಪೋಸ್ ಕೊಟ್ಟ ಬ್ಯೂಟಿ

ಕಿರುತೆರೆಯ ಈ ಅಂದಗಾತಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಸಿಂಪಲ್ ಆಗಿ ಸಲ್ವಾರ್ ಧರಿಸಿ ಫೋಟೊಗೆ ಪೋಸ್ ಕೊಟ್ಟಿದ್ದು, ಅಭಿಮಾನಿಗಳ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

67
ಏನಂದ್ರು ಫ್ಯಾನ್ಸ್?

ಗಾರ್ಜಿಯಸ್ ಕ್ವೀನ್ ಭವ್ಯಾ, ಸುಂದರಿ ಭವ್ಯಾ, ಕ್ಯೂಟ್ ನೆಸ್ ಗೆ ಒಂದು ಫೇಸ್ ಅಂತ ಇದ್ರೆ ಅದು ನಿಮ್ಮದೇನೆ, ಬ್ಯೂಟಿ ಕ್ವೀನ್, ಕ್ಯೂಟಿ ಪೈ, ಅಪ್ಸರೆ ಎನ್ನುತ್ತಾ 62 ಸಾವಿರಕ್ಕೂ ಹೆಚ್ಚು ಜನರು ಈ ಫೋಟೊ ಮೆಚ್ಚಿಕೊಂಡಿದ್ದು, 264 ಜನರು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

77
ನಿಧಿ ಪಾತ್ರಕ್ಕೆ ಮೆಚ್ಚುಗೆ

ನಾವು ಕರ್ಣ ಸೀರಿಯಲ್ (Karna serial) ನೋಡುತ್ತಿರುವುದೇ ನಿಮಗಾಗಿ, ನಿಧಿ ಪಾತ್ರಕ್ಕೆ ನೀವು 100% ನ್ಯಾಯ ಒದಗಿಸಿದ್ದೀರಿ. ನಿಮ್ಮ ಎಕ್ಸ್’ಪ್ರೆಶನ್, ನಟನೆ, ಎಲ್ಲವೂ ಸೂಪರ್, ಈ ಬಾರಿ ಝೀ ಅವಾರ್ಡ್ ಬರೋದು ಖಂಡಿತವಾಗಿಯೂ ನಿಮಗೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

Read more Photos on
click me!

Recommended Stories