ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್‌ಗೆ ಪತ್ನಿ ಭೂಮಿಕಾ ಮತ್ತು ಮಗ ಆಕಾಶ್ ಸಿಕ್ಕಿದ್ದಾರೆ. ತನ್ನನ್ನು ಹುಡುಕಿಕೊಂಡು ಗೌತಮ್ ಬಂದರೂ ಭೂಮಿಕಾ ಅಂತರ ಕಾಯ್ದುಕೊಂಡಿದ್ದಾಳೆ. ಪತ್ನಿ ಮತ್ತು ಮಗ ಸಿಕ್ಕ ಖುಷಿಯಲ್ಲಿರುವ ಗೌತಮ್, ಇಬ್ಬರು ತನ್ನಿಂದ ದೂರವಾಗಿದ್ದೇಕೆ ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಮಗನ ಬರ್ತ್ ಡೇ ಬಂದಿದ್ದು, ಅವನೊಂದಿಗೆ ಇಡೀ ದಿನ ಸಮಯ ಕಳೆಯಬೇಕೆಂದು ಗೌತಮ್ ಯೋಜನೆ ರೂಪಿಸಿಕೊಂಡಿದ್ದಾನೆ.