ಕಾಲು ಮುರಿದ್ರೂ ವ್ಹೀಲ್​ ಚೇರ್​ ಮೇಲೆ Naa Ninna Bidalaare ಶೂಟಿಂಗ್​! ವಿಡಿಯೋ ಶೇರ್​ ಮಾಡಿದ ನಟಿ ನೀತಾ

Published : Mar 11, 2026, 01:44 PM IST

'ನಾ ನಿನ್ನ ಬಿಡಲಾರೆ' ಧಾರಾವಾಹಿ ಖ್ಯಾತಿಯ ನಟಿ ನೀತಾ ಅಶೋಕ್ ಅವರು ಶೂಟಿಂಗ್ ಸೆಟ್‌ನಲ್ಲಿ ಅಪಘಾತಕ್ಕೀಡಾಗಿ ಕಾಲು ಮುರಿದುಕೊಂಡಿದ್ದಾರೆ. ಕಾಲಿಗೆ ಸರ್ಜರಿಯಾಗಿದ್ದರೂ, ಅವರು ವೀಲ್‌ಚೇರ್ ಸಹಾಯದಿಂದಲೇ ಆಸ್ಪತ್ರೆ ಹಾಗೂ ಮನೆಯಿಂದ ಚಿತ್ರೀಕರಣದಲ್ಲಿ ಭಾಗವಹಿಸುವ ಮೂಲಕ ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ.

PREV
16
ಕಾಲಿಗೆ ಫ್ರ್ಯಾಕ್ಚರ್​

ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್​ನಲ್ಲಿ ಕ್ಯೂಟ್​ ದೆವ್ವ ಆಗಿ ಮಿಂಚುತ್ತಿರುವ ಅಂಬಿಕಾ ರಿಯಲ್​ ಹೆಸರು ನೀತಾ ಅಶೋಕ್​. ನೀತಾ ಅವರು ಶೂಟಿಂಗ್​ ವೇಳೆ ನಡೆದ ಅವಘಡ ಸಂಭವಿಸಿ ಕಾಲಿಗೆ ಫ್ರ್ಯಾಕ್ಚರ್​ ಮಾಡಿಕೊಂಡಿದ್ದಾರೆ. ಕಾಲಿನ ಆಪರೇಷನ್​ ಆಗಿದ್ದರೂ ಆಸ್ಪತ್ರೆಯಲ್ಲಿಯೇ ಕೆಲವೊಂದು ಕ್ಲಿಪ್ಪಿಂಗ್​ ಶೂಟ್​ ಮಾಡಿದ್ದರೆ, ಇದೀಗ ಮನೆಗೆ ಬಂದ ಮೇಲೂ ಮುರಿದ ಕಾಲಲ್ಲೇ ಶೂಟಿಂಗ್​ ನಡೆದಿದೆ.

26
ವಿಡಿಯೋ ಶೇರ್​

ಇದರ ವಿಡಿಯೋ ಅನ್ನು ನೀತಾ ಅಶೋಕ್​ ಶೇರ್​ ಮಾಡಿಕೊಂಡಿದ್ದಾರೆ. ಕಾಲು ಮುರಿದ ಮೇಲೂ ಸೀರಿಯಲ್​ನಲ್ಲಿ ಹೇಗೆ ಕಾಣಿಸಿಕೊಳ್ತಿದ್ದೇನೆ ಎಂದು ಕೆಲವರು ಅಚ್ಚರಿ ಪಡುವುದು ಇದೆ. ಅವರಿಗಾಗಿಯೇ ಈ ವಿಡಿಯೋ ಎಂದು ನಟಿ ಹೇಳಿದ್ದಾರೆ.

36
ಆಗಿದ್ದೇನು?

ಅಷ್ಟಕ್ಕೂ ನಟಿಗೆ ಆಗಿದ್ದೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದರು. ಅಂದು ಶೂಟಿಂಗ್​ ನಡೆಯುತ್ತಿದ್ದಾಗ ಬಿಸಿಲು ಇದ್ದುದರಿಂದ ಹೋಗಿ ನೆರಳಿನಲ್ಲಿ ಕುಳಿತುಕೊಳ್ಳಿ ಎಂದರು. ಅಲ್ಲಿಗೆ ಎದ್ದು ಹೋಗಿ ಕುಳಿತುಕೊಳ್ಳುವಾಗ ಕಾಲು ಟ್ವಿಸ್ಟ್​ ಆಯಿತು. ತುಂಬಾ ನೋವಾಯಿತು. ವೈದ್ಯರು ಕೂಡಲೇ ಪೇನ್​ ಕಿಲ್ಲರ್​ ಇಂಜೆಕ್ಷನ್​ ಕೊಡಿಸಿ, ಕೂಡಲೇ ಎಕ್ಸ್​ರೇ ಮಾಡಿಸಿ ಎಂದರು ಎಂದು ನಟಿ ನೆನಪಿಸಿಕೊಂಡಿದ್ದಾರೆ.

46
ಕಾಲು ಫ್ರ್ಯಾಕ್ಚರ್​

ಎಕ್ಸ್​ರೇ ಮಾಡಿದಾಗ ಫ್ರಾಕ್ಚರ್ ಆಗದೇ ಇರಲಿ ಎಂದು ದೇವರಲ್ಲಿ ತುಂಬಾ ಪ್ರಾರ್ಥಿಸಿಕೊಂಡೆ. ಆದರೆ ಬ್ಯಾಡ್​ ಲಕ್​, ಫ್ರ್ಯಾಕ್ಚರ್​ ಆಗಿ ಹೋಗಿತ್ತು ಎಂದಿದ್ದಾರೆ ನೀತಾ ಅಶೋಕ್​. ವೈದ್ಯರು ಕೂಡಲೇ ಸರ್ಜರಿ ಮಾಡಬೇಕು ಎಂದರು. ಸರ್ಜರಿ ಹೆಸರು ಕೇಳುತ್ತಿದ್ದಂತೆಯೇ ನನ್ನ ಮೀಟರ್​ ಆಫ್​ ಆಗೋಯ್ತು. ಆದರೂ ಎಲ್ಲರ ಒಪೀನಿಯನ್​ ತೆಗೆದುಕೊಂಡು ಸರ್ಜರಿಗೆ ಓಕೆ ಎಂದೆ ಎಂದಿದ್ದಾರೆ.

56
ವೀಲ್​ಚೇರ್​ ಸಹಾಯ

ಸರ್ಜರಿಯ ಮೊದಲ ದಿನ ಸೀರಿಯಲ್​ ತಂಡ ಕೆಲವೊಂದು ಕ್ಲೋಸ್​ ಅಪ್​ ಶಾರ್ಟ್ಸ್​ ತೆಗೆದುಕೊಂಡು ಹೋಯಿತು. ತುಂಬಾ ಸಹಕರಿಸಿ ನನಗೆ ಎಲ್ಲಾ ರೀತಿಯ ಸಹಾಯ ಮಾಡಲಾಯಿತು ಎಂದು ನೆನಪಿಸಿಕೊಂಡಿದ್ದಾರೆ ನಟಿ. ಇದೀಗ ಮನೆಗೆ ನಟಿ ಹೋಗಿದ್ದು, ಅಲ್ಲಿಯೂ ವೀಲ್​ಚೇರ್​ ಸಹಾಯದಿಂದ ಶೂಟಿಂಗ್​ ಮಾಡಲಾಗಿದೆ. ಆದರೆ ಎಲ್ಲಿಯೂ ಇದರ ಬಗ್ಗೆ ಜನರಿಗೆ ಗೊತ್ತಾಗದಂತೆ ನೋಡಿಕೊಳ್ಳಲಾಗಿದೆ.

66
ಮನೆಯಲ್ಲೂ ಶೂಟಿಂಗ್​

ಇದೀಗ ಮನೆಗೆ ನಟಿ ಹೋಗಿದ್ದು, ಅಲ್ಲಿಯೂ ವೀಲ್​ಚೇರ್​ ಸಹಾಯದಿಂದ ಶೂಟಿಂಗ್​ ಮಾಡಲಾಗಿದೆ. ಆದರೆ ಎಲ್ಲಿಯೂ ಇದರ ಬಗ್ಗೆ ಜನರಿಗೆ ಗೊತ್ತಾಗದಂತೆ ನೋಡಿಕೊಳ್ಳಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories