'ಯಶ್‌ಗೆ ಆಗಲೇ ಆ ಕಿಚ್ಚಿತ್ತು' : ನಂದಗೋಕುಲ ಸೀರಿಯಲ್‌ನ ಸುಂದರ ನೆನಪು ಬಿಚ್ಚಿಟ್ಟ ನಟಿ ಲಕ್ಷ್ಮೀ ಸಿದ್ದಯ್ಯ

Published : Oct 22, 2026, 12:52 PM IST

Yash early days: ರಾಕಿಂಗ್ ಸ್ಟಾರ್ ಯಶ್ ಇಂದು ಕೆಜಿಎಫ್ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಆದರೆ, ಅವರು ಈ ಹಂತ ತಲುಪಲು ಪಟ್ಟ ಶ್ರಮ ಮತ್ತು ಅವರ ಆರಂಭಿಕ ದಿನಗಳ ನಟನೆಯನ್ನು ಅವರ ಸಹನಟಿ ಲಕ್ಷ್ಮೀ ಸಿದ್ದಯ್ಯ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

PREV
14
ಸುಂದರ ನೆನಪುಗಳನ್ನು ಹಂಚಿಕೊಂಡ ನಟಿ

ಸುಂದರ ನೆನಪುಗಳನ್ನು ಹಂಚಿಕೊಂಡ ನಟಿ
ರಾಕಿಂಗ್ ಸ್ಟಾರ್ ಯಶ್ ಇಂದು ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಕಿರುತೆರೆಯ ಖ್ಯಾತ ನಟಿ ಲಕ್ಷ್ಮೀ ಸಿದ್ದಯ್ಯ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಯಶ್ ಅವರ ಆರಂಭಿಕ ದಿನಗಳ ಜನಪ್ರಿಯ ಧಾರಾವಾಹಿ ‘ನಂದಗೋಕುಲ’ದಲ್ಲಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದ ಸುಂದರ ನೆನಪುಗಳನ್ನು ನಟಿ ಸಂದರ್ಶನವೊಂದರಲ್ಲಿ ಮೆಲಕು ಹಾಕಿದ್ದಾರೆ.

24
ಆಗಲೇ ಸಾಧಿಸುವ ಛಲವಿತ್ತು

ಆಗಲೇ ಸಾಧಿಸುವ ಛಲವಿತ್ತು
ಯಶ್ ಮತ್ತು ರಾಧಿಕಾ ಪಂಡಿತ್ ಅವರ ಬೆಳವಣಿಗೆಯ ಬಗ್ಗೆ ಮಾತನಾಡಿದ ಲಕ್ಷ್ಮೀ ಸಿದ್ದಯ್ಯ, "ಯಶ್ ಮತ್ತು ರಾಧಿಕಾ ಇಂದು ಮುಟ್ಟಿರುವ ಎತ್ತರ ನೋಡಿ ತುಂಬಾ ಹೆಮ್ಮೆಯಾಗುತ್ತದೆ. ಯಶ್ ಜೊತೆ ನಾನು ಜೋಡಿಯಾಗಿ ನಟಿಸಿದ್ದೆ. ಆ ಕಾಲದಲ್ಲೇ ಅವನಲ್ಲಿ 'ಏನಾದರೂ ಸಾಧಿಸಲೇಬೇಕು' ಎಂಬ ತೀವ್ರವಾದ ಕಿಚ್ಚಿತ್ತು. ಅಂದುಕೊಂಡಂತೆ ಅವನು ಇಂದು ಸಾಧಿಸಿ ತೋರಿಸಿದ್ದಾನೆ. ನಮ್ಮ ಕನ್ನಡ ಚಿತ್ರರಂಗವನ್ನು ನಾವು ಊಹಿಸಲೂ ಸಾಧ್ಯವಾಗದ ಮಟ್ಟಕ್ಕೆ ಕೊಂಡೊಯ್ದಿದ್ದಾನೆ. ಅವನು ಯಾವಾಗಲೂ ಚೆನ್ನಾಗಿರಬೇಕು ಎಂಬುದೇ ನನ್ನ ಆಶಯ" ಎಂದು ಹಾರೈಸಿದರು.

34
'ನಂದಗೋಕುಲ'ದ ತಮಾಷೆಯ ಎಂಟ್ರಿ ಸೀನ್

'ನಂದಗೋಕುಲ'ದ ತಮಾಷೆಯ ಎಂಟ್ರಿ ಸೀನ್
ಧಾರಾವಾಹಿಯ ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡ ನಟಿ, ತಮ್ಮ ಪರಿಚಯದ ದೃಶ್ಯದ (Entry Scene) ಬಗ್ಗೆ ಸ್ವಾರಸ್ಯಕರ ಪ್ರಸಂಗವನ್ನು ಹಂಚಿಕೊಂಡರು.

"ಆ ಧಾರಾವಾಹಿಯಲ್ಲಿ ನನ್ನ ಪಾತ್ರದ ಎಂಟ್ರಿ ಸೀನ್ ತುಂಬಾ ಮಜವಾಗಿತ್ತು. ನಾನು ಮಾಡರ್ನ್ ಡ್ರೆಸ್ ಧರಿಸಿ, ಕಿವಿಗೆ ಇಯರ್‌ಫೋನ್ ಹಾಕಿಕೊಂಡು ರಸ್ತೆಯಲ್ಲಿ ಒಬ್ಬಳೇ ಜೋರಾಗಿ ನಗುತ್ತಾ ಬರುತ್ತಿರುತ್ತೇನೆ. ಇದನ್ನು ನೋಡಿದ ಯಶ್ ಮತ್ತು ಕಾಮಿಡಿ ನಟ ಗಿರೀಶ್, 'ಹುಡುಗಿ ನೋಡಲು ಚೆನ್ನಾಗಿದ್ದಾಳೆ, ಆದರೆ ಹುಚ್ಚಿಯಂತೆ ಆಡ್ತಿದ್ದಾಳೆ. ಪಾಪ ಇವಳನ್ನು ಸುರಕ್ಷಿತವಾಗಿ ಮನೆಗೆ ಬಿಡೋಣ' ಎಂದು ನನ್ನನ್ನು ಹಿಂಬಾಲಿಸಿಕೊಂಡು ಬರುತ್ತಾರೆ. ಕೊನೆಗೆ ಬಂದು 'ಏನಮ್ಮಾ ನಿನ್ನ ಸಮಸ್ಯೆ?' ಎಂದು ವಿಚಾರಿಸಿದಾಗ, ನಾನು ಇಯರ್‌ಫೋನ್ ತೆಗೆಯುತ್ತೇನೆ. ಆಗ ಅವರಿಗೆ ತಿಳಿಯುತ್ತದೆ—ನಾನು ಹುಚ್ಚಿಯಲ್ಲ, ಫೋನ್‌ನಲ್ಲಿ ಮಾತನಾಡುತ್ತಾ ನಗುತ್ತಿದ್ದೆ ಎಂದು! ಈ ದೃಶ್ಯ ಚಿತ್ರೀಕರಣ ಮಾಡುವಾಗ ನಾವೆಲ್ಲರೂ ತುಂಬಾ ನಕ್ಕಿದ್ದೆವು," ಎಂದು ಆ ದಿನಗಳ ತಮಾಷೆಯನ್ನು ವಿವರಿಸಿದರು.

44
ಸಮಕಾಲೀನ ಪ್ರತಿಭಾವಂತ ಕಲಾವಿದರ ದಂಡೇ ಇತ್ತು

ಸಮಕಾಲೀನ ಪ್ರತಿಭಾವಂತ ಕಲಾವಿದರ ದಂಡೇ ಇತ್ತು
'ನಂದಗೋಕುಲ' ಧಾರಾವಾಹಿಯಲ್ಲಿ ವಿನಯಾ ಪ್ರಸಾದ್ ಸಹ ಇದ್ದರು. ರಾಧಿಕಾ ಪಂಡಿತ್ ಸೇರಿದಂತೆ ಸಮಕಾಲೀನ ಪ್ರತಿಭಾವಂತ ಕಲಾವಿದರ ದಂಡೇ ಇತ್ತು. ನಾವೆಲ್ಲರೂ ಒಂದೇ ವಯಸ್ಸಿನವರಾಗಿದ್ದರಿಂದ ಶೂಟಿಂಗ್ ಸೆಟ್‌ನಲ್ಲಿ ಸದಾ ತಮಾಷೆ, ಸಂತಸದ ವಾತಾವರಣ ಇರುತ್ತಿತ್ತು ಎಂದು ಲಕ್ಷ್ಮೀ ಸಿದ್ದಯ್ಯ ನೆನಪಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories