ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಬೆಂಗಳೂರಿನಲ್ಲಿ ಹೆಡ್ ಮಿಸ್ ಆಗಿ ಕೆಲಸ ಮಾಡುತ್ತಿದ್ದರೆ, ಗೌತಮ್ ಕೂಡ ಅದೇ ನಗರದಲ್ಲಿ ಅವಳನ್ನು ಹುಡುಕುತ್ತಿದ್ದಾನೆ. ಇದರ ನಡುವೆ ಗೌತಮ್‌ಗೆ ಅನಾಥ ಹೆಣ್ಣು ಮಗು ಸಿಕ್ಕಿದ್ದು, ಭೂಮಿಕಾ ಡ್ರೋನ್ ಹಿಡಿದ ವಿಡಿಯೋ ವೈರಲ್ ಆಗಿ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಸದ್ಯ ಭೂಮಿಕಾ ಗೌತಮ್‌ಗೆ ಸಿಗದಂತೆ ಬೆಂಗಳೂರು ಸೇರಿಕೊಂಡಿದ್ದಾಳೆ. ಅಲ್ಲಿ ಆಕೆಗೆ ಹೆಡ್ಮಿಸ್ ಕೆಲಸ ಸಿಕ್ಕಿದೆ. ಆದರೆ ವಿಧಿಯಾಟವೇ ಬೇರೆ. ಗೌತಮ್ ಕೂಡ ಬೆಂಗಳೂರಿನಲ್ಲಿಯೇ ವಠಾರ ಒಂದರಲ್ಲಿ ಬಾಡಿಗೆಗೆ ಇದ್ದಾನೆ.
26
ಪತಿ-ಪತ್ನಿ ಒಂದಾಗೋದು ಯಾವಾಗ?
ಐದು ವರ್ಷ ಮಗ ಮತ್ತು ಪತ್ನಿಗಾಗಿ ಕಾದೂ ಕಾದು ಕೊನೆಗೆ ಇನ್ನೇನು ಇಬ್ಬರೂ ಸಿಕ್ಕೇಬಿಟ್ಟರು, ಒಟ್ಟಾಗುತ್ತಾರೆ ಎನ್ನುವಷ್ಟರಲ್ಲಿಯೇ ಭೂಮಿಕಾ ಆತನಿಂದ ದೂರವಾಗಿದ್ದಾಳೆ. ಇನ್ನು ಪತ್ನಿ ಮತ್ತು ಮಗನಿಗಾಗಿ ಗೌತಮ್ ಇನ್ನೆಷ್ಟು ವರ್ಷ ಹುಡುಕಬೇಕೋ ಆ ದೇವರೇ ಬಲ್ಲ ಎನ್ನುತ್ತಿದ್ದಾರೆ ವೀಕ್ಷಕರು.
36
ಹೆಡ್ ಮಿಸ್ ಆದ ಭೂಮಿಕಾ
ಅದೇ ಇನ್ನೊಂದೆಡೆ, ಭೂಮಿಕಾ ಮತ್ತು ಗೌತಮ್ ಮಗಳೇ ಎನ್ನಲಾದ ಮಗುವೊಂದನ್ನು ಭೂಮಿಕಾ ಸ್ನೇಹಿತೆ ಬಳಿ ಇದೆ. ಆಕೆ ಕೂಡ ಭೂಮಿಕಾ ಶಾಲೆಯಲ್ಲಿಯೇ ಟೀಚರ್ ಆಗಿದ್ದಾಳೆ. ಇನ್ನು ಅದೇ ಶಾಲೆಗೆ ಆ ಮಗು ಬಂದರೆ ಅಲ್ಲಿಗೆ ಅದು ತನ್ನ ಮಗಳು ಎಂದು ಅರಿಯದಿದ್ದರೂ ಭೂಮಿಕಾ ಆ ಮಗುವಿನ ಮೇಲೆ ಅಪಾರ ಪ್ರೀತಿ ತೋರಿ ತಾಯಿಯ ಪ್ರೀತಿ ತೋರಿಸುತ್ತಾಳೆ ಎನ್ನುವ ಸಾಧ್ಯತೆ ಇದೆ.
ಇದು ಸೀರಿಯಲ್ ಕಥೆಯಾದರೆ ಇದೀಗ ಭೂಮಿಕಾ ಅರ್ಥಾತ್ ಛಾಯಾ ಸಿಂಗ್ (Chaya Singh) ಕೈಯಲ್ಲಿ ಡ್ರೋನ್ ಹಿಡಿದಿರುವ ವಿಡಿಯೋ ಒಂದು ವೈರಲ್ ಆಗಿದೆ. ಶೂಟಿಂಗ್ ಸಮಯದಲ್ಲಿ ಬಳಸುವ ಡ್ರೋನ್ ಅನ್ನು ಹಿಡಿದು ಬಿಡುವಿನ ವೇಳೆಯಲ್ಲಿ ನಟಿ ತಮಾಷೆ ಮಾಡಿದ್ದಾರೆ.
56
ನಟಿಯ ಕಾಲೆಳೆದ ನೆಟ್ಟಿಗರು
ಆದರೆ, ಇದನ್ನು ನೋಡಿದ ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ. ಗೌತಮ್ ಎಲ್ಲಿ ಎಂದು ನೋಡಲು ಡ್ರೋನ್ ಬಳಸ್ತಿದ್ದೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಗಂಡ ಬೆಂಗಳೂರಿನಲ್ಲಿಯೇ ಇದ್ದಾನೆ. ಆದ್ರೆ ನಿಮ್ಮ ಡ್ರೋನ್ ಕಣ್ಣಿಗೆ ಕಾಣಲ್ಲ ಬಿಡಿ. ಇದೆಲ್ಲಾ ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.
66
ಗೌತಮ್ ಕೈಸೇರಿದ ಹೆಣ್ಣು ಮಗಳು
ಅದೇ ಇನ್ನೊಂದೆಡೆ, ಇದರ ನಡುವೆಯೇ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅಪ್ಪ-ಅಮ್ಮನಿಗೆ ಬೇಡವಾಗಿ ಹೆಣ್ಣುಮಗಳೊಬ್ಬಳು ಗೌತಮ್ ಕೈ ಸೇರಿದ್ದಾಳೆ. ಮಗುವನ್ನು ಕರೆದುಕೊಂಡು ದಂಪತಿ ಗೌತಮ್ನ ಕಾರಿನಲ್ಲಿ ಬಂದಿದ್ದರು. ಅವರು ಬ್ಯಾಗ್ ಬಿಟ್ಟುಹೋದರು ಎನ್ನುವ ಕಾರಣಕ್ಕೆ ಗೌತಮ್ ವಾಪಸ್ ಬಂದು ಅದನ್ನು ಕೊಡಲು ಮುಂದಾದಾಗ ಆ ಮನೆಯ ಮುಂದೆ ಜನರು ಜಮಾಯಿಸಿದ್ದರು. ಕೊನೆಗೆ ಆ ದಂಪತಿ ತಮಗೆ ಬೇಡದಿರುವ ಮಗುವನ್ನು ಬಿಟ್ಟು ಹೋಗಿರುವುದಾಗಿ ಹೇಳಿದಾಗ, ಗೌತಮ್‌ಗೆ ತನ್ನ ಮಗಳೇ ನೆನಪಾಗಿದ್ದಾಳೆ.