ಕಡಲ ತೀರದಲ್ಲಿ ರಾಮಾಚಾರಿಯ ಬೆಡಗಿ ಚಾರು; ಸ್ವಲ್ಪ ತೂಕ ಇಳಿಸಿ ಮೇಡಂ ಎಂದ ಫ್ಯಾನ್ಸ್!

Published : May 23, 2024, 02:56 PM IST

ರಾಮಾಚಾರಿಯ ಬೆಡಗಿ ಚಾರು ಆಲಿಯಾಸ್ ಮೌನ ಗುಡ್ಡೆಮನೆ ಸಮುದ್ರ ತೀರದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.   

PREV
17
ಕಡಲ ತೀರದಲ್ಲಿ ರಾಮಾಚಾರಿಯ ಬೆಡಗಿ ಚಾರು; ಸ್ವಲ್ಪ ತೂಕ ಇಳಿಸಿ ಮೇಡಂ ಎಂದ ಫ್ಯಾನ್ಸ್!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್ ನಲ್ಲಿ ಚಾರು ಪಾತ್ರದಲ್ಲಿ ಮುದ್ದಾಗಿ ನಟಿಸುತ್ತಿರುವ ಮೌನ ಗುಡ್ಡೆಮನೆ (Mouna Guddemane) ಸದ್ಯ ತಮ್ಮ ಶೂಟಿಂಗ್ ಗೆ ಕೊಂಚ ಬ್ರೇಕ್ ಕೊಟ್ಟು ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ. ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

27

ಮಂಗಳೂರು ಮೂಲದ ಮೌನ ಗುಡ್ಡೆ ಮನೆ ತಮ್ಮ ಬಿಡುವಿನ ಸಮಯದಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದು, ಅಲ್ಲಿನ ಕಡನ ತೀರ, ಗುರುವಾಯನ ಕೆರೆಗೆ (Guruvayana kere) ಭೇಟಿ ನೀಡಿ, ಸಮುದ್ರ ತೀರದಲ್ಲಿ ಎಂಜಾಯ್ ಮಾಡುತ್ತಿರುವ ಸುಂದರ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. 
 

37

ಮಿನಿ ಡ್ರೆಸ್ ಧರಿಸಿ ಸಮುದ್ರದ ತಟದಲ್ಲಿ ಮೋಜು ಮಾಡುತ್ತಿರುವ ಮೌನರನ್ನು ನೋಡಿ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಹೆಚ್ಚಿನ ಜನರು ಮೇಡಂ ನೀವು ತುಂಬಾನೆ ಚೆನ್ನಾಗಿದ್ದೀರಿ, ಆದರೆ ದಪ್ಪ ಆಗಿದ್ದೀರಿ, ಸ್ವಲ್ಪ ತೂಕ ಇಳಿಸಿ ಎಂದೇ ಸಲಹೆ ನೀಡಿದ್ದಾರೆ. 
 

47

ಇತರರು ಮುಂದಿನ ಸ್ಯಾಂಡಲ್ ವುಡ್ ಕ್ವೀನ್ ನೀವೆ,  ಕಡಲ ಕಿನ್ನರಿ . ರಾಮಾಚಾರಿಯ (Ramachari) ಸುಂದರಿ. ಸಮುದ್ರ ರಾಣಿ.. ಹೊರಗಡೆ ಬಂದಿದೆ ನಿಮ್ ಅಂದ ಸೂಪರ್, ತುಂಬಾನೆ ಹಾಟ್ ಆಗಿ ಕಾಣಿಸ್ತಿದ್ದೀರಾ ಅಂದ್ರೆ ಇನ್ನೂ ಕೆಲವರು ಮೇಡಂ ನೀವು ಸೀರೆಯಲ್ಲಿ ತುಂಬಾನೆ ಮುದ್ದಾಗಿ ಕಾಣಿಸ್ತೀರ, ಇದು ಚೆನ್ನಾಗಿಲ್ಲ ಅಂದಿದ್ದಾರೆ. 
 

57

ಇನ್ನು ಮೌನ ಗುರುವಾಯನಕೆಯಲ್ಲಿನ ಹಳೆಯ ಮನೆಯೊಂದರಲ್ಲಿ ಕಿಟಕಿ ಮುಂದೆ ನಿಂತಿರುವ ಸುಂದರವಾದ ಫೋಟೋಗಳನ್ನು ಸಹ ಶೇರ್ ಮಾಡಿದ್ದಾರೆ. ಹಸಿರು ಬಣ್ಣದ ಚೆಕ್ಡ್ ಸೀರೆ ಮತ್ತು ಸ್ಲೀವ್ ಲೆಸ್ ಬ್ಲೌಸ್ ಧರಿಸಿರುವ ಮೌನ ಮುದ್ದಾಗಿಯೇ ಕಾಣಿಸುತ್ತಿದ್ದಾರೆ. 
 

67

ತಮ್ಮ ಮುದ್ದು ಮುದ್ದು ಅಭಿನಯ ಮತ್ತು ಸೌಂದರ್ಯದಿಂದಲೇ ಕನ್ನಡಿಗರ ಮನಸ್ಸು ಗೆದ್ದಿರುವ ಮೌನ, ಯುವಕರ ಕ್ರಶ್ ಕೂಡ ಆಗಿರೋದು ಸುಳ್ಳಲ್ಲ. ಸದ್ಯ ಸೀರಿಯಲ್ ನಲ್ಲಿ ಕೃಷ್ಣ ಮತ್ತು ದೀಪಾ ಮದುವೆ ಮಾಡುವ ಪ್ಲ್ಯಾನ್ ಮಾಡಿದ್ದಾಳೆ ಚಾರು. 
 

77

ರಾಮಾಚಾರಿ ಸೀರಿಯಲ್ ನಲ್ಲಿ ಮನೆಮಂದಿ ಎಲ್ಲಾ ಸೇರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮಾನ್ಯತಾ ಈ ಕುಟುಂಬಕ್ಕೆ ಕೇಡು ಬಯಸಲು ನಿಂತರೆ, ಕಿಟ್ಟಿ ಎಲ್ಲರನ್ನೂ ಕಾಪಾಡುವ ಪಣ ತೊಟ್ಟಿದ್ದಾನೆ. ಇನ್ನು ಚಾರು ತನ್ನಿಂದಾಗಿ ದೀಪ ಜೀವನ ಹಾಳಾಯಿತು ಎಂದು ಬೇಸರ ವ್ಯಕ್ತಪಡಿಸಿ, ಅವಳಿಗೂ ಕೃಷ್ಣನಿಗೂ ಮದುವೆ ಮಾಡುವ ಬಗ್ಗೆ ಅತ್ತೆ ಬಳಿ ತಿಳಿಸಿದ್ದಾಳೆ. ಮುಂದೇನಾಗುತ್ತೆ ಕಾದು ನೋಡಬೇಕು. 
 

Read more Photos on
click me!

Recommended Stories