ರಾಮಚಾರಿ ಸೀರಿಯಲ್‌ನಲ್ಲಿ ಚಾರು ಪಾತ್ರದಲ್ಲಿ ನಟಿಸಿರುವ ಮೌನಾ ಗುಡ್ಡೆಮನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್. ನಟನೆಯಲ್ಲಿ ಮಾತ್ರವಲ್ಲ, ಅಂದದ ಮೂಲಕವೂ ಅವರು ಜನರ ಮನಗೆದ್ದಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ಅಪಾರ ಜನಮನ್ನಣೆ ಪಡೆದಿರುವವ ರಾಮಚಾರಿ ಸೀರಿಯಲ್‌ನಲ್ಲಿ ನಟಿಸುತ್ತಿರುವುದು ಮೌನ ಗುಡ್ಡೆಮನೆ.
ಇತ್ತೀಚೆಗೆ ನವರಾತ್ರಿ ಸಂಭ್ರಮಕ್ಕೆ ಅವರು ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು, ಅದನ್ನು ಅವರ ಅಭಿಮಾನಿಗಳು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ.
ಚಿನ್ನದ ಬಣ್ಣದ ಅಂಚು ಹೊಂದಿರುವ ಬಿಳಿ ಸೀರಿಯೊಂದಿಗೆ ಹೆಚ್ಚಿನ ಚಿನ್ನಾಭರಣಗಳಿಲ್ಲದ ಸಿಂಪಲ್ ಆಗಿ ಅವರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಪ್ರಶಾಂತ್ ಮೇಕ್‌ಓವರ್‌ನಲ್ಲಿ ಮಾಡಿರುವ ಈ ಫೋಟೋಶೂಟ್‌ಗೆ ಔಟ್‌ಫಿಟ್‌ಅನ್ನು ನೀಡಿದ್ದು, ವಿಭಿನ್ನ. ಅರುಣ್ ಕುಮಾರ್ ಇದರ ಚಿತ್ರಗಳನ್ನು ತೆಗೆದಿದ್ದು, ಚಿನ್ನಾಭರಣಗಳನ್ನು ಬೀಡೆಡ್ ಟ್ರೆಶರ್ಸ್ ಜ್ಯೂವೆಲ್ಸ್ ನೀಡಿದೆ ಎಂದು ಮೌನ ಬರೆದುಕೊಂಡಿದ್ದಾರೆ.
ಮೌನ ಪೋಸ್ಟ್ ಮಾಡಿರುವ ಈ ವಿಡಿಯೋವನ್ನು ಈಗಾಗಲೇ 5 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹೆಚ್ಚಿನವರು ಈ ಫೋಟೋಶೂಟ್‌ನಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.
'ನಿಜವಾಗಿಯೂ ದೇವತೆ ಥರನೇ ಕಾಣುತ್ತಾ ಇದೀರ ಮೌನ..' ಎಂದು ಹೆಚ್ಚಿನವರು ಮೌನ ಗುಡ್ಡೆಮನೆ ಅವರ ಚಿತ್ರಕ್ಕೆ ಕಾಮೆಂಟ್ ಮಾಡಿದ್ದಾರೆ.
16ನೇ ವಯಸ್ಸಿಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿರುವ ಮೌನ ಗುಡ್ಡೆಮನೆ, ರಾಮಚಾರಿ ಸೀರಿಯಲ್‌ನಲ್ಲಿ ವಯಸ್ಸಿಗೆ ಮೀರಿದ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.
ನವರಾತ್ರಿ ಟೈಮ್‌ನಲ್ಲಿ ಇದೇ ಫೋಟೋಗಳನ್ನು ನೋಡ್ತಾ ಇದ್ರೆ ದೇವತೆಯೇ ಬಂದಂತೆ ಅನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದು, ಕೆಲವು ಬಹಳ ಸುಂದರವಾಗಿ ಕಾಣ್ತಾ ಇದ್ದೀರಿ ಎಂದು ಬರೆದಿದ್ದಾರೆ.
'ಇದುವರೆಗೂ ನಾನು ಯಾವುದೇ ಹೀರೋಯಿನ್‌ಗೂ ಫ್ಯಾನ್ ಆಗಿರಲಿಲ್ಲ ಅದರೆ ರಾಮಾಚಾರಿ ಸೀರಿಯಲ್ ಅಲ್ಲಿ ನಿಮ್ಮ ಮತ್ತೆ ನಿಮ್ಮ ನಟನೆ ನೋಡಿ ಹೀರೋಯಿನ್‌ಗೆ ಫ್ಯಾನ್ ಆಗಿರೋದು ಇದೇ ಮೊದಲು ಮೌನ..' ಎಂದು ಇನ್ನೊಬ್ಬರು ಬರೆದಿದ್ದಾರೆ.
ಮೊದಲ ಬಾರಿಗೆ ಈ ಫೋಟೋಗಳನ್ನು ನೋಡಿದಾಗ ಮಾಳವಿಕಾ ಅವರನ್ನು ನೋಡಿದ ರೀತಿಯ ಆಯ್ತು. ಸರಿಯಾಗಿ ನೋಡಿದಾಗಲೇ ನೀವು ಎಂದನಿಸಿತು ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
16ನೇ ವಯಸ್ಸಿಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಮೌನ ಗುಡ್ಡೆಮನೆ ಆ ವೇಳೆ ತಮ್ಮ ವಯಸ್ಸನ್ನು 17 ಎಂದು ಹೇಳಿದ್ದರಂತೆ.. ಈ ಬಗ್ಗೆ ಮೌನ ಅವರೇ ಹಿಂದೊಮ್ಮೆ ಹೇಳಿದ್ದರು.
2020ರಲ್ಲಿ ನಡೆದ ಮಿಸ್ ಟೀನ್ ತುಳುನಾಡು ಬ್ಯೂಟಿ ಕಾಂಟೆಸ್ಟ್‌ನಲ್ಲಿ ಮೌನ ಗುಡ್ಡೆಮನೆ 2ನೇ ರನ್ನರ್‌ಅಪ್ ಸ್ಥಾನವನ್ನು ಪಡೆದುಕೊಂಡಿದ್ದರು.
ರಾಮಾಚಾರಿ ಸೀರಿಯಲ್‌ನಲ್ಲಿ ತಮ್ಮ ಪಾತ್ರ ಜನಪ್ರಿಯವಾಗಿರೋದ್ರಿಂದ ಹಾಗೂ ಸೀರಿಯಲ್ ಟಿಆರ್‌ಪಿ ಕೂಡ ಚೆನ್ನಾಗಿರುವ ಕಾರಣ ಮಾಡೆಲಿಂಗ್‌ನಿಂದ ಅವರು ಗ್ಯಾಪ್ ಪಡೆದುಕೊಂಡಿದ್ದಾರೆ.