ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಲಕ್ಷಣದಲ್ಲಿ ಮಿಂಚುತ್ತಿದ್ದ ವಿಜಯಲಕ್ಷ್ಮಿ ಮೊದಲ ಸಲ ಸಿಕ್ಕಾಪಟ್ಟೆ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರಿನ ಸಖತ್ ಪಾಫ್ಯೂಲರ್ ರಸ್ತೆ ಕಮರ್ಷಿಯಲ್ ಸ್ಕ್ರೀಟ್‌ನಲ್ಲಿ ಫೋಟೋ ಕ್ಲಿಕ್ ಮಾಡಿಕೊಂಡು. ಕ್ಲಿಕ್, ಫೋಟೋ ಬಾಂಬ್, ಸೆಲ್ಫ್ ದಿನ ಮುಗಿಯಿತ್ತು ಎಂದು ಬರೆದುಕೊಂಡಿದ್ದಾರೆ.
ವೈಟ್ ಬಣ್ಣದ ಶರ್ಟ್‌ಗೆ ಕ್ರೀಮ್ ಬಣ್ಣದ ಸ್ವೆಟರ್ ಧರಿಸಿದ್ದಾರೆ ಧರಿಸಿದ್ದಾರೆ. ಕಪ್ಪು ಬಣ್ಣದ ಪ್ಯಾಂಟ್‌ಗೆ ಕಪ್ಪು ಬಣ್ಣದ ಕೂಲಿಂಗ್ ಗ್ಲಾಸ್ ಧರಿಸಿದ್ದಾರೆ.
ಸದ್ಯ ವಿಜಯಲಕ್ಷ್ಮಿ ಯಾವ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಸುಳಿವು ನೀಡಿಲ್ಲ. ಆದರೆ ಲಕ್ಷಣ ಧಾರಾವಾಹಿ ಮುಗಿಸಿರುವುದರ ಬಗ್ಗೆ ಸಖತ್ ಬೇಸರವಿದೆ.
ಸಖತ್ Introvert ಅಗಿದ್ದ ನಾನು extrovert ಆಗಲು ಲಕ್ಷಣ ಧಾರಾವಾಹಿ ತುಂಬಾ ಸಹಾಯ ಮಾಡಿದೆ ಹಾಗೂ ನನ್ನ ವ್ಯಕ್ತಿತ್ವವನ್ನು ಶೇಪ್ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ಲಕ್ಷಣ ಅನ್ನೋ ಸೀರಿಯಲ್ ನನ್ನ ಜೀವನದಲ್ಲಿ ಬಂದಿದ್ದಕ್ಕೆ ಖುಷಿ ಇದೆ ಒಳ್ಳೆ ಸ್ನೇಹಿತರು ಮತ್ತು ಕಲಿಯುವುದಕ್ಕೆ ತುಂಬಾ ಅವಕಾಶ ಸಿಕ್ಕಿದೆ ಎಂದಿದ್ದಾರೆ.