ಕಪ್ಪು ಬಿಳಿ ಕಾಟನ್ ಸೀರೆಯಲ್ಲಿ ಸಖತ್ ಆಗಿ ಮಿಂಚ್ತಿದ್ದಾರೆ ಅಶ್ವಿನಿ ನಕ್ಷತ್ರದ ಮಯೂರಿ

Published : Oct 16, 2023, 01:20 PM IST

ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿದ ನಟಿ ಮಯೂರಿ ಕ್ಯಾತರಿ ಇದೀಗ ಕಪ್ಪು ಬಿಳಿ ಕಾಟನ್ ಸೀರೆಯಲ್ಲಿ ಸೊಂಟ ಬಳುಕಿಸಿಕೊಂಡು ಫೋಟೋ ಶೂಟ್ ಮಾಡಿಸಿದ್ದು, ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ.   

PREV
17
ಕಪ್ಪು ಬಿಳಿ ಕಾಟನ್ ಸೀರೆಯಲ್ಲಿ ಸಖತ್ ಆಗಿ ಮಿಂಚ್ತಿದ್ದಾರೆ ಅಶ್ವಿನಿ ನಕ್ಷತ್ರದ ಮಯೂರಿ

ಕನ್ನಡ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಮಿಂಚಿದ್ದ ನಟಿ ಮಯೂರಿ ಕ್ಯಾತರಿ (Mayuri Kyatari) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಹೊಸ ಫೋಟೋ ಶೂಟಿನಲ್ಲಿ ಕಾಟನ್ ಸೀರೆಯುಟ್ಟೂ ಸಹ ಮೈಮಾಟ ತೋರಿಸುವ ಮೂಲಕ ಸದ್ದು ಮಾಡ್ತಿದ್ದಾರೆ. 
 

27

ವಿಭಿನ್ನ ಡಿಸೈನರ್ ಬಾಟಿಕ್ ಜಾಹೀರಾತಿನಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿರುವ ಮಯೂರಿ ಕಪ್ಪು ಡಿಸೈನ್ ಹೊಂದಿರುವ ಬಿಳಿ ಬಣ್ಣದ ಕಾಟಲ್ ಸೀರೆ (cotton saree) ಉಟ್ಟಿದ್ದಾರೆ. ಅದಕ್ಕೆ ಮ್ಯಾಚ್ ಆಗುವ ಮೆಟಲ್ ಇಯರಿಂಗ್ಸ್, ನೋಸ್ ಪಿನ್, ಜೊತೆಗೆ ಸೊಂಟಕ್ಕೆ ಪಟ್ಟಿ ಧರಿಸಿದ್ದಾರೆ. 
 

37

ಕಾಟನ್ ಸೀರೆ ಜೊತೆ ಕಪ್ಪು ಬಣ್ಣದ ಬ್ಲೌಸ್ ಜೊತೆಗೆ ಮೆಟಲ್ ಇಯರಿಂಗ್ಸ್ ಸಖತ್ತಾಗಿ ಮ್ಯಾಚ್ ಆಗಿದ್ದು, ಸೊಂಟ ಬಳುಕಿಸಿರುವ ಫೋಟೋ ಶೇರ್ ಮಾಡಿದ್ದು, ಸೀರೆಯಲ್ಲಿ ಹೀಗೂ ಕಾಣಬಹುದೇ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 
 

47

ಅಶ್ವಿನಿ ನಕ್ಷತ್ರ ಸೀರಿಯಲ್ (Ashwini Nakshatra) ಮೂಲಕ ನಟನೆಗೆ ಎಂಟ್ರಿ ಕೊಟ್ಟ ಮಯೂರಿಗೆ ಈ ಸೀರಿಯಲ್ ಸಿಕ್ಕಾಪಟ್ಟೆ ಹೆಸರು ತಂದು ಕೊಟ್ಟಿತು, ಇಂದಿಗೂ ಇವರನ್ನು ಜನರು ಅಶ್ವಿನಿ ಎಂದೇ ಗುರುತಿಸುತ್ತಾರೆ. ಇದಾದ ನಂತರ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳಲೇ ಇಲ್ಲ, ಇತ್ತೀಚೆಗೆ ರೇಣುಕಾ ಯಲ್ಲಮ್ಮ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದರು. 
 

57

ಕೃಷ್ಣ ಲೀಲಾ ಸಿನಿಮಾದ ಮೂಲಕ ಸಿನಿಮಾ ನಾಯಕಿಯಾಗಿ ಎಂಟ್ರಿ ಕೊಟ್ಟ ಮಯೂರಿ, ನಂತರ ಇಷ್ಟಕಾಮ್ಯ, ನಟರಾಜ ಸರ್ವೀಸ್, ಕರಿಯ 2, ರುಸ್ತುಂ, ಪೊಗರು, ವೀಲ್ ಚೇರ್ ರೋಮಿಯೋ ಸೇರಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. 
 

67

ಅಷ್ಟೇ ಅಲ್ಲ ಮಯೂರಿ ಬಿಗ್ ಬಾಸ್ ಸೀಸನ್ 9 ರಲ್ಲೂ (Bigg Boss season 9) ಕಾಣಿಸಿಕೊಂಡಿದ್ದರು. ಆದರೆ ಫ್ಯಾಮಿಲಿ ಮಗುವಿನ ಗುಂಗಲ್ಲೇ ನಟಿ ಇದ್ದುದರಿಂದ ಹೆಚ್ಚಾಗಿ ಆಕ್ಟೀವ್ ಆಗಿರದ ಕಾರಣ ಮೊದಲ ವಾರದಲ್ಲೇ ನಾಮಿನೇಟ್ ಆಗಿದ್ದರು. 
 

77

ಇನ್ನು 2020 ರಲ್ಲಿ ಮಯೂರಿ ತಮ್ಮ ಬಹುದಿನಗಳ ಗೆಳೆಯ ಅರುಣ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಒಬ್ಬ ಮಗ ಕೂಡ ಇದ್ದಾನೆ. ನಟಿ ಮಗನ ಜೊತೆಗಿನ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories