ದೃಷ್ಟಿ ತಾಗೋವಷ್ಟು ಸುಂದರವಾಗಿ ಕಾಣಿಸ್ತಿದ್ದಾರೆ ಕನ್ನಡ ಕಿರುತೆರೆಯ ಮುದ್ದು ಗೊಂಬೆ ಮೌನ ಗುಡ್ಡೆಮನೆ

Published : Nov 08, 2024, 06:39 AM ISTUpdated : Nov 08, 2024, 07:43 AM IST

ರಾಮಾಚಾರಿಯ ಬೆಡಗಿ ಮೌನ ಗುಡ್ಡೆಮನೆ ಹೊಸ ಫೋಟೊ ಶೂಟ್ ಮಾಡಿಸಿದ್ದು, ನೀಲಿ ಬಣ್ಣದ ಸೀರೆಯಲ್ಲಿ ಸಖತ್ತಾಗಿ ಮಿಂಚಿದ್ದಾರೆ. ಸದ್ಯ ಫೋಟೋಸ್ ವೈರಲ್ ಆಗುತ್ತಿದೆ.   

PREV
17
ದೃಷ್ಟಿ ತಾಗೋವಷ್ಟು ಸುಂದರವಾಗಿ ಕಾಣಿಸ್ತಿದ್ದಾರೆ ಕನ್ನಡ ಕಿರುತೆರೆಯ ಮುದ್ದು ಗೊಂಬೆ ಮೌನ ಗುಡ್ಡೆಮನೆ

ಕನ್ನಡ ಕಿರುತೆರೆಯ ನೆಚ್ಚಿನ ಸೀರಿಯಲ್ ರಾಮಾಚಾರಿ, ಅದರಲ್ಲೂ ಜನರಿಗೆ ಚಾರು ಮತ್ತು ಚಾರಿ ಜೋಡಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಕಥೆ ಈಗ ಬೇರೆ ಟ್ರಾಕ್ ಅಲ್ಲಿ ಸಾಗುತ್ತಿದೆ ನಿಜಾ, ಆದರೆ ರಾಮಾಚಾರಿ -ಚಾರುಗಾಗಿ ಜನ ಇಷ್ಟ ಪಟ್ಟು ಸೀರಿಯಲ್ ನೋಡ್ತಾರೆ. ಅದರಲ್ಲೂ ಚಾರು ಪಾತ್ರಧಾರಿ ಮೌನ ಗುಡ್ಡೆಮನೆ (Mouna Guddemane) ಜನರ ಫೇವರಿಟ್ ಆಗಿದ್ದಾರೆ. 
 

27

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಮೌನ ಗುಡ್ಡೆಮನೆ ಪ್ರತಿದಿನ ತಮ್ಮ ಹೊಸ ಹೊಸ ಫೋಟೊ ಶೂಟ್ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಮೌನ ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತುಂಬಾನೆ ಇಷ್ಟವಾಗ್ತಾರೆ. 
 

37

ಇದೀಗ ಮೌನ ಗುಡ್ಡೆಮನೆ ಕಡು ನೀಲಿ ಬಣ್ಣದ, ಮೇಲೆ ಸಿಲ್ವರ್ ವರ್ಕ್ ಇರುವ ಸೀರೆಯಲ್ಲಿ ಫೋಟೊ ಶೂಟ್ ಮಾಡಿಸಿದ್ದು, ನಟಿ ಎಷ್ಟೊಂದು ಸುಂದರವಾಗಿ ಕಾಣಿಸ್ತಿದ್ದಾರೆ ಅಂದ್ರೆ, ದೃಷ್ಟಿಯೇ ತಾಕುವಂತಹ ಗೊಂಬೆಯಂತೆ ಕಾಣಿಸ್ತಿದ್ದಾರೆ ಮೌನ ಗುಡ್ಡೆಮನೆ. 
 

47

ಈ ಫೋಟೊ ನೋಡಿ ಅಭಿಮಾನಿಗಳು ಸಹ ತುಂಬಾನೆ ಖುಷಿಯಾಗಿದ್ದಾರೆ. ಮುದ್ದು ಗೊಂಬೆ. ಕನ್ನಡದ ಹುಡುಗೀರಂದ್ರೆನೇ ಹಾಗೇ, ಸೀರೆ ಉಟ್ಟರೇನೆ ಅಂದ. ಅಬ್ಬಬ್ಬಾ ಚಾರು. ಮುದ್ದು ಮೌನ ದೇವತೆ ತರ ಕಾಣಿಸ್ತಾ ಇದಿಯಾ ಅಂತಾನೂ ಕಾಮೆಂಟ್ ಮೂಲಕ ತಿಳಿಸಿದ್ದಾರೆ. 
 

57

ಅಷ್ಟೇ ಅಲ್ಲ ರಾಯಲ್ ಪ್ರಿನ್ಸಸ್ (royal princes) ಚಾರುಲತಾ, ನಿಮ್ಮ ನಗುವಿಗೆ ಫಿದಾ ಆಗಿದ್ದೇವೆ ನಾವು, ರಾಯಲ್ ಬ್ಯೂಟಿ ಇನ್ ರಾಯಲ್ ಬ್ಲೂ, ಪ್ರೆಟಿ ಗರ್ಲ್, ಸುಂದರಿ, ಕ್ವೀನ್, ಬ್ಯೂಟಿ, ಗಾರ್ಜಿಯಸ್, ಕನ್ನಡದ ಗೊಂಬೆ , ಸೌಂದರ್ಯ ದೇವತೆ ನೀವು… ಇಷ್ಟು ಚೆನ್ನಾಗಿ ಕಾಣಿಸಿದ್ರೆ, ನಾವು ಬದುಕೋದು ಹೇಗೆ ಅಂತಾನೂ ಕಾಮೆಂಟ್ ಮೂಲಕ ಕೇಳಿದ್ದಾರೆ. 
 

67

ಇದರ ಜೊತೆಗೆ ಇನ್ನಷ್ಟು ಜನ ಕಾಮೆಂಟ್ ಮಾಡಿ ಪದಗಳಿಗೆ ನಿಲುಕದ ಸೌಂದರ್ಯ ನಿಮ್ಮದು , ನೀವು ಹೀರೋಯಿನ್ ಮಟೀರಿಯಲ್, ಆದ್ರೆ ಇಲ್ಲಿವರೆಗೂ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸೋಕೆ ಚಾನ್ಸ್ ಸಿಕ್ಕಿಲ್ಲ ಅನ್ನೋದೆ ಬೇಜಾರ್ ಅಂತಿದ್ದಾರೆ. ಒಟ್ಟಲ್ಲಿ ಮೌನ ಫೋಟೊಗಳಿಗೆ ಅಭಿಮಾನಿಗಳಿಂದ ಕಾಮೆಂಟ್ ಗಳ ಸುರಿಮಳೇಯೇ ಸುರಿದಿದೆ. 
 

77

ರಾಮಾಚಾರಿ ಸೀರಿಯಲ್ (Ramachari serial) ನಲ್ಲಿ ನಟಿಸುತ್ತಿರೋ ಚಾರು ಆಲಿಯಾಸ್ ಮೌನ ಗುಡ್ಡೆಮನೆಗೆ ಸಿನಿಮಾದಲ್ಲೂ ಅವಕಾಶ ಸಿಕ್ಕಿದೆ. ಯೋಗರಾಜ್ ಭಟ್ ಅವರ ಯೋಗರಾಜ್ ಸಿನಿಮಾಸ್ ಅರ್ಪಿಸುವ ಹೊಸ ಸಿನಿಮಾದಲ್ಲಿ ಮಡೆನೂರು ಮನುಗೆ ನಾಯಕಿಯಾಗಿ ಮೌನ ಗುಡ್ಡೆಮನೆ ನಟಿಸುತ್ತಿದ್ದಾರೆ. ನಟಿ ಮತ್ತಷ್ಟು ಸಿನಿಮಾ ಆಫರ್ ಗಳು ಸಿಗಲಿ ಅನ್ನೋದು ಅಭಿಮಾನಿಗಳ ಹಾರೈಕೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories