ಬಿಗ್ ಬಾಸ್ ಕನ್ನಡ 11: ಬಲಿಷ್ಠ 7 ಮಂದಿ ನಾಮಿನೇಟ್‌, ತ್ರಿವಿಕ್ರಮ್-ಭವ್ಯಾ ಕ್ಯಾಷ್ಟನ್ಸಿ ಟಾಸ್ಕ್‌ಗೆ ಆಯ್ಕೆ

First Published | Nov 8, 2024, 12:26 AM IST

ಬಿಗ್ ಬಾಸ್ ಕನ್ನಡ 11ರಲ್ಲಿ ಈ ವಾರ 7 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಆದರೆ, ಓಟಿಂಗ್ ಲೈನ್‌ಗಳು ಓಪನ್ ಇಲ್ಲದ ಕಾರಣ ಯಾರೂ ಹೊರಹೋಗುತ್ತಿಲ್ಲ. ಭವ್ಯಾ ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಡುತ್ತಿದ್ದು, ಮುಂದಿನ ನಾಯಕ ಯಾರು ಎಂಬುದು ಕುತೂಹಲಕಾರಿಯಾಗಿದೆ.

ಬಿಗ್ ಬಾಸ್ ಕನ್ನಡ 11ರಲ್ಲಿ ಈ ವಾರ ಮನೆಯಿಂದ ಹೊರಹೋಗಲು ಘಟಾನುಘಟಿ ಸ್ಪರ್ಧಿಗಳೇ ನಾಮಿನೇಟ್ ಆಗಿದ್ದಾರೆ. ಒಟ್ಟು 7 ಮಂದಿ ಮನೆಯಲ್ಲಿ ನಾಮಿನೇಟ್‌ ಆಗಿದ್ದಾರೆ. ಚೈತ್ರಾ ಕುಂದಾಪುರ, ಭವ್ಯಾ ಗೌಡ, ಧರ್ಮ ಕೀರ್ತಿರಾಜ್, ತ್ರಿವಿಕ್ರಮ್ , ಗೋಲ್ಡ್ ಸುರೇಶ್,  ಮೋಕ್ಷಿತಾ ಪೈ ಮತ್ತು ಧನ್‌ರಾಜ್  ಅವರು ನಾಮಿನೇಟ್‌ ಆಗಿದ್ದಾರೆ. ಎಲ್ಲರೂ ಕೂಡ ಬಲಿಷ್ಠ ಸ್ಪರ್ಧಿಗಳೇ ಆಗಿದ್ದಾರೆ. ಆದರೆ ಈ ವಾರ ಓಟಿಂಗ್ ಲೈನ್‌ ಗಳು ಓಪನ್‌ ಇಲ್ಲ. ಹೀಗಾಗಿ ಈ ವಾರ ಮನೆಯಿಂದ ಯಾರೂ ಕೂಡ ಹೊರ ಹೋಗುತ್ತಿಲ್ಲ. ಆದರೆ ಇದು ಮನೆಯಲ್ಲಿ ಇರುವ ಯಾವ ಸ್ಪರ್ಧಿಗಳಿಗೂ ಗೊತ್ತಿಲ್ಲ.
 

ಈ ವಾರ ಯಾವ ಉದ್ದೇಶಕ್ಕೆ ಓಟಿಂಗ್‌ ಲೈನ್‌ಗಳು ಓಪನ್‌ ಇಲ್ಲ ಎಂಬುದು ತಿಳಿದುಬಂದಿಲ್ಲ. ವೀಕೆಂಡ್‌ ಶೋ ನಲ್ಲಿ ಕಿಚ್ಚ  ಸುದೀಪ್ ಅವರೇ ಇದನ್ನು ತಿಳಿಸಬೇಕಿದೆ. ಮನೆಯ ಬಲಿಷ್ಠ ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ ಎಂಬ ಕಾರಣಕ್ಕೋ ಅಥವಾ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯೋ ಗೊತ್ತಿಲ್ಲ. ಶನಿವಾರದ ಎಪಿಸೋಡ್‌ ನಲ್ಲಿ ಎಲ್ಲದಕ್ಕೂ ಉತ್ತರ ಸಿಗುವ ನಿರೀಕ್ಷೆ ಇದೆ.
 

Tap to resize

ಇನ್ನು ಭವ್ಯ ಅವರು ಟಾಸ್ಕ್  ನಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ನಿನ್ನೆಯ ಆಟವಂತು ತುಂಬಾ ಚೆನ್ನಾಗಿಯೇ ಆಡಿದ್ದರು. ಇಂದಿನ ಕ್ಯಾಪ್ಟನ್ಸಿ ಆಯ್ಕೆ ಟಾಸ್ಕ್‌ ನಲ್ಲೂ ಭವ್ಯ ಅವರ ಆಟ ತುಂಬಾ ಚೆನ್ನಾಗಿತ್ತು. ಇಂದು ನಡೆದ ಕ್ಯಾಪ್ಟನ್ಸಿ ಆಯ್ಕೆ ಟಾಸ್ಕ್‌ ನಲ್ಲಿ ಕೊನೆಯದಾಗಿ ಆತ್ಮೀಯರಾದ ತ್ರಿವಿಕ್ರಮ್ ಮತ್ತು ಭವ್ಯಾ ಉಳಿದುಕೊಂಡಿದ್ದು, ಇವರಿಬ್ಬರ ಮಧ್ಯೆ ನಾಳೆ ಮನೆಯ ನಾಯಕ ಯಾರು ಎಂಬುದು ನಿರ್ಧಾರವಾಗಲಿದೆ.
 

ಇನ್ನು ಮನೆಯ ನಾಯಕ ಹನುಮಂತ ಅವರು ಗೋಲ್ಡ್‌ ಸುರೇಶ್ ಕಾಲಿಗೆ ಗಾಯ ಮಾಡಿಕೊಂಡಿರುವುದರಿಂದ ಕ್ಯಾಪ್ಟನ್ಸಿ ಟಾಸ್ಕ್‌ ಆಯ್ಕೆ ಟಾಸ್ಕ್‌ ನಲ್ಲಿ ಸುರೇಶ್ ಪರ ಆಟ ಆಡಿದರು. ಅದ್ಭುತವಾಗಿ ಆಡಿದ ಹನುಮಂತ ಟಾಪ್‌ 3ರವರೆಗೆ ಆಡಿದರು. ಬೇರೆಯವರಿಗೆ ಇಷ್ಟು ಚಂದ ಆಡಿದ ಹನುಮಂತ ಇನ್ನು ತನ್ನ ಸ್ವಂತಕ್ಕೆ ಎಷ್ಟು ಆಟ ಆಡಲಾರ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಮೀಮ್ಸ್ ಓಡಾಡುತ್ತಿದೆ.

ಇದಕ್ಕೂ ಮುನ್ನ ನಡೆದ ಕ್ಯಾಪ್ಟನ್ಸಿ ಓಟದಲ್ಲಿ ಯಾರಿರಬಾರದು  ಎಂಬುದನ್ನು ಪೋಟೋವನ್ನು ಬೋರ್ಡ್ ಮೇಲೆ ಹಾಕಿ ಕಾರಣ ನೀಡಬೇಕಿತ್ತು. ಇದರಲ್ಲಿ ಎಲ್ಲರೂ ಧನ್‌ರಾಜ್‌ ಅವರನ್ನೇ ಟಾರ್ಗೆಟ್‌ ಮಾಡಿದರು. ನೀವು ಕೊಟ್ಟ ಕಾರಣ ಸಿಲ್ಲಿ. ನಿಮಗೆ ಕ್ಯಾಪ್ಟನ್‌ ನಿಭಾಯಿಸಲು ಸಾಮರ್ಥ್ಯ ಇಲ್ಲ. ಕ್ಯಾಪ್ಟನ್‌ ಆದಾಗ ಧ್ವನಿ ಎತ್ತಬೇಕು. ನಿಮಗೆ ಆ ಅರ್ಹತೆ ಇಲ್ಲ ಎಂದು ಹಲವರು ಕಾರಣ ನೀಡಿದರು.
 

ಆದರೆ ಈ ವಿಚಾರದಲ್ಲಿ ಮೋಕ್ಷಿತಾ, ಗೌತಮಿ, ಅನುಷಾ ಮತ್ತು ಚೈತ್ರಾ ಕುಂದಾಪುರ ಅವರು ಧನ್‌ರಾಜ್‌ ಮೇಲೆ ಕ್ಯಾಪ್ಟನ್‌ ಓಟದಿಂದ ಹೊರಗಿರುವಂತೆ ಮುಗಿ ಬಿದ್ದು ಮಾತನಾಡಿದರು. ಕೊನೆಗೆ ಮೋಕ್ಷಿತಾ ಮತ್ತು ಧರ್ಮ ಅವರ ಫೋಟೋ ಬೋರ್ಡ್ ನಲ್ಲಿ ಉಳಿಯಿತು. ಅವರು ಕ್ಯಾಪ್ಟನ್ಸಿ ಟಾಸ್ಕ್‌ ನಿಂದ ಹೊರ ಉಳಿಯಬೇಕಾಯಿತು. 

ಮನೆಯ ರೂಲ್ಸ್ ಬಂದಾಗ ಅರ್ಥ ಮಾಡಿಕೊಳ್ಳುವುದರಲ್ಲಿ ಎಡವುತ್ತಾರೆ. ಅವರಲ್ಲಿ ಗೊಂದಲ ಇರುತ್ತೆ ಎಂದು ಧನ್‌ರಾಜ್ ಅವರು ಮೋಕ್ಷಿತಾ ಬಗ್ಗೆ ಕಾರಣ ನೀಡಿದರು. ಇದಕ್ಕೆ ಸಿಟ್ಟಿಗೆದ್ದ ಮೋಕ್ಷಿತಾ ನಿಮಗೆ ಸೆನ್ಸಿಬಲ್‌ ಇಲ್ಲ. ಬರೇ ಹನುಮಂತು ಜೊತೆಗೆ ಇರುತ್ತೀರಿ. ಮನೆಯ ಬಗ್ಗೆ ನಿಮಗೆ ಏನೂ ತಿಳಿದಿಲ್ಲ ಅನ್ನುವ ರೀತಿಯಲ್ಲಿ ಮಾತನಾಡಿದರು. ಇದಕ್ಕೆ ಉತ್ತರ ಕೊಟ್ಟ ಧನ್‌ರಾಜ್ ನೀವು, ಗೌತಮಿ, ಮಂಜು ಜೊತೆಯಲ್ಲಿ ಗುಂಪುಗೂಡಿ ಮಾತನಾಡುವುದಿಲ್ಲವೇ ಎಂದು ಪ್ರಶ್ನಿಸಿದರು. ಮೋಕ್ಷಿತಾ ಅವರು ಧನ್‌ರಾಜ್ ವಿರುದ್ಧ ಮಾತನಾಡಿದ ರೀತಿಯೇ ಆಶ್ಚರ್ಯಕರವಾಗಿತ್ತು. 30 ನಿಮಿಷದ ಚಟುವಟಿಕೆಯಲ್ಲಿ ಮೋಕ್ಷಿತಾ  ಮತ್ತು ಚೈತ್ರಾ ಕುಂದಾಪುರ ಅವರ ಮಾತುಕತೆಯೇ ಮುಕ್ಕಾಲು ಭಾಗ ಇತ್ತು.

ಯಾವಾಗ ಟಾಸ್ಕ್‌ ನಿಂದ ಮೋಕ್ಷಿತಾ ಅವರು ಹೊರಗುಳಿದರು. ಸರಿಯಾಗಿ ಕಾರಣ ನೀಡಲು ಬರುವುದಿಲ್ಲ. ಸಿಲ್ಲಿ ರೀಸನ್‌ ಕೊಡ್ತೀರಾ. ನಿಮಗೆ ಏನಾದ್ರೂ ಸೆನ್ಸ್ ಇದೆಯಾ ತಲೆಯಲ್ಲಿ. ನಿಮಗೆ ನಿಮ್ಮ ಮೇಲೆ ಕಾನ್ಫಿಡೆನ್ಸ್ ಇಲ್ಲ. ನೀವು ಕೊಡೋ ರೀಸನ್‌ ಗೆ ತಲೆ ಬುಡ ಇಲ್ಲ ಅನ್ನೋದು ಇಡೀ ಮನೆಗೆ ಗೊತ್ತು. ನೀವು ಮೋಸದ ಆಟ ಆಡುತ್ತೀರಿ ಎಂದು ಮಂಜು ಜೊತೆಗೆ ಟೀಂ ನಲ್ಲಿ ಆಡಿದ್ದನ್ನು ತಂದು ಕೂಡ ಬೈದರು.

ಇದಕ್ಕೆ ಮಂಜು, ಶಿಶರ್ ಮೋಕ್ಷಿತಾ ವಿರುದ್ಧ ಕ್ಲಾರಿಟಿ ಕೊಟ್ಟರು. ಮೋಕ್ಷಿತಾಗೆ ಅನುಷಾ ರೈ ಕೂಡ ದನಿಗೂಡಿಸಿ ಧನ್‌ರಾಜ್‌ ರನ್ನು ಹಿಗ್ಗಾಮುಗ್ಗಾ ಬೈದರು. ಮುಖ್ಯವಾಗಿ ಕ್ಯಾಪ್ಟನ್ಸಿ ಟಾಸ್ಕ್‌ ಗೆ ಆಯ್ಕೆ ಆಗಿಲ್ಲ ಎಂಬುದು ಮೋಕ್ಷಿತಾ ಅವರಿಗೆ ಉರಿ ಹೆಚ್ಚಿಸಿದೆ.

ಇಷ್ಟೆಲ್ಲ ಮಾತು ಕೇಳಿದ ಧನ್‌ರಾಜ್‌ ಬಾತ್‌ರೂಂ ನಲ್ಲಿ ಹನುಮಂತು ಜೊತೆಗೆ ಬೇಸರ ಮಾಡಿಕೊಂಡು ಅತ್ತರು. ನಾನಿನ್ನೂ ಸ್ಟ್ರಾಂಗ್‌ ಆಗಿಲ್ಲ ಎಂದು ಬೇಸರ ಮಾಡಿಕೊಂಡು ಅತ್ತರು. ನೀನು ಬೇಸರ ಮಾಡಿಕೊಂಡರೆ ನನಗೂ ಬೇಸರ ಆಗುತ್ತೆ ಎಂದು ಹನುಮಂತ ಹೇಳಿದರು. ಇದೇ ವೇಳೆ ಭವ್ಯಾ ಕೂಡ ಬಂದಿದ್ದು ಸಮಾಧಾನ ಮಾಡಿದರು. ಇನ್ನು ತ್ರಿವಿಕ್ರಮ್ ಜೊತೆಗೆ ಧರ್ಮ ಅವರು ಧನ್‌ರಾಜ್‌ಗೆ ಹಾರ್ಷ್ ಆಗಿ ಮಾತನಾಡಿದರು ಎಂದದರು. ಅದಕ್ಕೆ ತ್ರಿವಿಕ್ರಮ್ ಅದನ್ನು ಅವರು ಡಿಫೆಂಡ್‌ ಮಾಡಿಕೊಳ್ಳಬೇಕಿತ್ತು ಎಂದರು.

Latest Videos

click me!