ಸುದರ್ಶನ್ ರಂಗಪ್ರಸಾದ್ (Sudarshan Rangaprasad)
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಗಂಡ ತಾಂಡವ್ ಸೂರ್ಯವಂಶಿ ಆಗಿ ನಟಿಸುತ್ತಿರುವ ಸುದರ್ಶನ್ ರಂಗಪ್ರಸಾದ್ ಪ್ರೇಕ್ಷಕರ ಫೇವರಿಟ್ ನಟ. ಇವರಿಗೆ ಹೆಂಡ್ತಿ ಭಾಗ್ಯನಿಗೆ ಮೋಸ ಮಾಡಿ, ಶ್ರೇಷ್ಠಾ ಜೊತೆ ಅಫೇರ್ ಇಂಡ್ಕೋಡಿದ್ದಾರೆ. ಜನರು ಇವರಿಗೆ ಹಿಡಿ ಶಾಪ ಹಾಕಿದ್ರೂ, ಅವರ ನಟನೆಗೆ ಮನ ಸೋತಿದ್ದಾರೆ.
ತನ್ವಿ ರಾವ್ (Tanvi Rao)
ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಕೀರ್ತಿ ಪಾತ್ರ ನಿರ್ವಹಿಸುತ್ತಿರುವ ತನ್ವಿ ರಾವ್ ಪಾತ್ರವೂ ಅಷ್ಟೇ ಜನರಿಗೆ ತುಂಬಾನೆ ಇಷ್ಟ. ಆಕೆ ಒಂದು ರೀತಿಯಲ್ಲಿ ವಿಲನ್ ಅಲ್ವೇ ಅಲ್ಲ. ಆದರೆ ತನ್ನ ಪ್ರೀತಿಯನ್ನು ವಾಪಾಸ್ ಪಡೆಯಲು ಏನು ಬೇಕಾದರೂ ಮಾಡುವ ಆಕೆಯ ಹುಚ್ಚು ಪ್ರೀತಿ ನೋಡಿ ಜನರು ಅದ್ಭುತ ನಟಿ ಎಂದಿದ್ದಾರೆ.
ರಮೋಲ (Ramola)
ಈ ಹಿಂದೆ ಕನ್ನಡತಿ ಸೀರಿಯಲ್ ನಲ್ಲಿ ವಿಲನ್ ಆಗಿ ನಟಿಸಿದ್ದ ರಮೋಲ, ಇದೀಗ ಅಂತರಪಟ ಸೀರಿಯಲ್ ನಲ್ಲೂ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದಾರೆ. ಇವತ್ತಿಗೂ ಜನರು ರಮೋಲ ಅವರನ್ನು ನೆಗೆಟಿವ್ ಪಾತ್ರದಲ್ಲಿ ನೋಡಲು ತುಂಬಾನೆ ಇಷ್ಟ ಪಡ್ತಾರೆ.
ಅನುಪಲ್ಲವಿ ಗೌಡ (Anupallavi Gowda)
ಹೊಸ ಸೀರಿಯಲ್ ಬೃಂದಾವನದಲ್ಲಿ ಪುಷ್ಫಾ ಅತ್ತಿಗೆ ಗಿರಿಜಾ ಆಗಿ ನಟಿಸುತ್ತಿರುವ ಅನುಪಲ್ಲವಿ ಗೌಡ ಸಹ ಕೆಲವೇ ದಿನಗಳಲ್ಲಿ ತಮ್ಮ ನಟನೆಯಿಂದ ಪ್ರೇಕ್ಷಕರನ್ನು ಗೆದ್ದಿದ್ದಾರೆ. ಧನ ಪಿಶಾಚಿ ಘಾಟಿ ಅತ್ತಿಗೆ ಪಾತ್ರವನ್ನು ಇವರು ಸಖತ್ತಾಗಿ ನಿರ್ವಹಿಸುತ್ತಿದ್ದಾರೆ ಎನ್ನುತ್ತಿದ್ದಾರೆ ಜನ.
ಅಮೃತಾ ರಾಮ್ ಮೂರ್ತಿ (Amrutha Ramamoorthy)
ಕೆಂಡಸಂಪಿಗೆ ಸೀರಿಯಲ್ ನಲ್ಲಿ ವಿಲನ್ ಸಾಧನಾ ಪಾತ್ರದಲ್ಲಿ ಮಿಂಚುತ್ತಿರುವ ಅಮೃತಾ ರಾಮೂರ್ತಿಯ ನಟನೆಗೂ ಜನ ಮನ ಸೋತಿದ್ದಾರೆ. ಕುಟುಂಬದ ಜೊತೆ ಮುಂದಿನಿಂದ ಒಳ್ಳೆಯವಳಂತೆ ನಟಿಸುತ್ತಾ, ಹಿಂದಿನಿಂದ ಚೂರಿ ಹಾಕುವ ಕೆಲಸ ಮಾಡುವ ಅಮೃತಾ ನಟನೆ ನೋಡಿ, ಎಂಥಹ ನಟನೆ ಎನ್ನುತ್ತಿದ್ದಾರೆ ಜನ.
ರಜನಿ (Rajani)
ಈ ಹಿಂದೆ ನಾಯಕಿಯಾಗಿ ನಟಿಸಿದ್ದರೂ ಸಹ ಸದ್ಯ ಸೀರಿಯಲ್ ಗಳಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ರಜನಿ. ಸದ್ಯ ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ಅಂತರಾ ಪಾತ್ರದಲ್ಲಿ ನಟಿಸುತ್ತಿರುವ ಇವರಿಗೆ ಅಭಿಮಾನಿಗಳ ಬಳಗ ಜಾಸ್ತಿನೇ ಇದೆ.
ನೇತ್ರಾ ಜಾಧವ್ (Netra Jadhav)
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು, ಶುಭಮಸ್ತು ಸೀರಿಯಲ್ ನ ಶಾರ್ವರಿ ಪಾತ್ರ ಕಣ್ಣಲ್ಲೇ ಎಲ್ಲವನ್ನೂ ಹೇಳಿ ಬಿಡುವಂತಹ, ತಾನೆಷ್ಟು ದೊಡ್ಡ ಕಿರಾತಕಿ ಎಂದು ಕಣ್ಣುಗಳ ಮೂಲಕವೇ ಮಾತನಾಡುವ ಪಾತ್ರ. ಈ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿರುವ ನೇತ್ರಾ ಜಾಧವ್ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿದೆ.
ಪೂಜಾ ಲೋಕೇಶ್ (Pooja Lokesh)
ಪೂಜಾ ಲೋಕೇಶ್ ಅತ್ಯುತ್ತಮ ನಟಿ ಅನ್ನೋದು ನಮಗೆ ಗೊತ್ತಿದೆ. ಇದೀಗ ಸೀತಾ ರಾಮ ಸೀರಿಯಲ್ ನಲ್ಲಿ ಖಡಕ್ ವಿಲನ್ ಆಗಿ, ಕುಟುಂಬಕ್ಕೆ ಮೋಸ ಮಾಡುವ ರಾಮನ ಚಿಕ್ಕಮ್ಮನ ಪಾತ್ರವನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತಿದ್ದಾರೆ ಎನ್ನುತ್ತಾರೆ ಅಭಿಮಾನಿಗಳು.