ಕನ್ನಡದ ಕಿರುತೆರೆ ಜಗತ್ತಿನಲ್ಲಿ ಬಹುಸಮಯದಿಂದ ತಮ್ಮ ಸ್ಥಾನ ಭದ್ರಪಡಿಸಿಕೊಂಡಿರುವ ನಟಿ ವೈಷ್ಣವಿ ಗೌಡ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ವೈಷ್ಣವಿ ಸದ್ಯ ಸೀತಾರಾಮ ಸೀರಿಯಲ್‌ನಲ್ಲಿ ಸೀತಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ಇದೀಗ ವೈಷ್ಣವಿ ಗೌಡ ಚೂಡಿದಾರ್‌ನಲ್ಲಿ ಸಕ್ಕತ್ತಾಗಿ ಕಾಣಿಸುತ್ತಿದ್ದಾರೆ. ಅವರ ಫೋಟೋ ನೋಡಿದ ಅಭಿಮಾನಿಗಳು ಬಹಳ ಖುಷಿಪಟ್ಟಿದ್ದಾರೆ. ಅವರ ನಟನೆಗೆ ಮಾರುಹೋಗದವರೇ ಇಲ್ಲ ಅಷ್ಟು ಅದ್ಭುತವಾಗಿ ಅಭಿನಯ ಮಾಡುತ್ತಾರೆ. ಇದೀಗ ಮತ್ತೊಮ್ಮೆ ಫೋಟೋಶೂಟ್ ಮಾಡಿಸಿಕೊಂಡಿರುವುದು ಅಭಿಮಾನಿಗಳಿಗೆ ಬಹಳಷ್ಟು ಖುಷಿ ನೀಡಿದೆ.
ವೈಷ್ಣವಿ ಗೌಡ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚೂಡಿದಾರ್‌ನಲ್ಲಿ ವೈಷ್ಣವಿ ಗೌಡ ಅವರನ್ನು ನೋಡಿದ ಅಭಿಮಾನಿಗಳು ಅವರ ಸರಳತೆಗೆ ಫಿದಾ ಆಗಿದ್ದಾರೆ. ಫೋಟೋಗೆ ಸಾಕಷ್ಟು, ಲೈಕ್ ಕಾಮೆಂಟ್ ಬರುತ್ತಿದೆ.
ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ಆ್ಯಕ್ಟೀವ್ ಆಗಿದ್ದಾರೆ. ರೀಲ್ಸ್ ಮಾಡೋದ್ರಲ್ಲೂ ಹೆಚ್ಚಿನ ಆಸಕ್ತಿಯನ್ನೆ ಹೊಂದಿದ್ದಾರೆ. ಹಾಗಾಗಿಯೇ ವೈಷ್ಣವಿ ಗೌಡ ಅವರನ್ನ ರೀಲ್ಸ್ ಸ್ಟಾರ್ ಅಂತಲೂ ಹೇಳಬಹುದು. ವಿಶೇಷವಾಗಿ ವೈಷ್ಣವಿ ಸಖತ್ ಆಗಿಯೇ ಡ್ಯಾನ್ಸ್ ಮಾಡುತ್ತಾರೆ.
ವೈಷ್ಣವಿ ಗೌಡ ಸಿನಿಮಾಗಳಲ್ಲಿ ಹೆಚ್ಚು ಮಿಂಚಲಿಲ್ಲ ಬಿಡಿ. ಆದರೆ ಸೀರಿಯಲ್ ಇವರ ಕೈ ಹಿಡಿದಿದೆ. ವಿಶೇಷವಾಗಿ ಸೀತಾ ರಾಮ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ಜೊತೆಗೆ ನೋಡುಗರು ಸೀತಾ ಮತ್ತು ರಾಮನ ಪಾತ್ರಗಳನ್ನ ಮೆಚ್ಚಿಕೊಳ್ಳುತ್ತಿದ್ದಾರೆ.
ನಟಿ ವೈಷ್ಣವಿ ಗೌಡ, ಕನ್ನಡದ ಖ್ಯಾತ ಕಿರುತರೆ ಕಾರ್ಯಕ್ರಮ, ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ನಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ತಮ್ಮ ಪ್ರಬುದ್ಧತೆ, ನಾಜೂಕಿನ ಸ್ವಭಾವದ ಮೂಲಕ ಕನ್ನಡಿಗರನ್ನು ಆಕರ್ಷಿಸಿದರು. ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು.
ವೈಷ್ಣವಿ ಗೌಡ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹೊಸ ರೀತಿಯ ಫೋಟೋಗಳನ್ನ ಶೇರ್ ಮಾಡಿಕೊಳ್ಳುತ್ತಾರೆ. ವಿವಿಧ ವಿಡಿಯೋಗಳನ್ನ ಇಲ್ಲಿ ಹಂಚಿಕೊಳ್ಳುತ್ತಾರೆ. ವಿಶೇಷವಾಗಿ ಸೀತಾ ರಾಮ ಸೆಟ್‌ನ ಕೆಲವು ವಿಡಿಯೋಗಳನ್ನೂ ಶೇರ್ ಮಾಡಿಕೊಂಡು ಖುಷಿಪಟ್ಟಿದ್ದಾರೆ ಅಂತಲೂ ಹೇಳಬಹುದು.