ಇಂಡಿಯಾ ವಿಶ್ವಕಪ್ ಸೋತಿದ್ದ ಬೇಜಾರು , ಕಂಠಿ ನೀನು ಕುಸ್ತಿ ಗೆದ್ದು ಮರೆಸಿಬಿಟ್ಟೆ!

Published : Nov 22, 2023, 08:29 PM IST

ಬೆಂಗಳೂರು (ನ.22): ಭಾರತ ತಂಡ ಕ್ರಿಕೆಟ್‌ ವಿಶ್ವಕಪ್‌ 2023ರ ಫೈನಲ್‌ ಪಂದ್ಯದಲ್ಲಿ ಸೋತಿದ್ದರಿಂದ ತೀವ್ರ ಬೇಸರವಾಗಿತ್ತು. ಆದರೆ, ಪುಟ್ಟಕ್ಕನ ಮಕ್ಕಳು ಧಾರವಾಹಿಯ ಕಂಠಿ ರಾಜ್ಯಮಟ್ಟದ ಕುಸ್ತಿ ಪಂದ್ಯದಲ್ಲಿ ಗೆದ್ದು, ಕ್ರಿಕೆಟ್‌ ಸೋಲಿನ ಬೇಸರವನ್ನು ಮರೆಸಿದ್ದಾನೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.  

PREV
110
ಇಂಡಿಯಾ ವಿಶ್ವಕಪ್ ಸೋತಿದ್ದ ಬೇಜಾರು , ಕಂಠಿ ನೀನು ಕುಸ್ತಿ ಗೆದ್ದು ಮರೆಸಿಬಿಟ್ಟೆ!

ಕ್ರಿಕೆಟ್‌ ವಿಶ್ವಕಪ್‌ 2023ರ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಸೋತಿದ್ದರಿಂದ ಬೇಸರವಾಗಿತ್ತು. ಪುಟ್ಟಕ್ಕನ ಮಕ್ಕಳು ಧಾರವಾಹಿಯ ಕಂಠಿ ಕುಸ್ತಿ ಪಂದ್ಯದಲ್ಲಿ ಗೆದ್ದು, ಕ್ರಿಕೆಟ್‌ ಸೋಲಿನ ಬೇಸರವನ್ನು ಮರೆಸಿದ್ದಾನೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.

210

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸದ್ಯ ಕುಸ್ತಿಯದೇ ಮಸ್ತಿ ನಡೆದಿದೆ. ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರವರೆಗೆ ಪ್ರಸಾರವಾಗೋ ಟಿಆರ್‌ಪಿಯಲ್ಲಿ ನಂಬರ್ ಒನ್ ಸ್ಥಾನ ಕಾಯ್ದುಕೊಮಡಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲೀಗ ಕುಸ್ತಿಯ ಬಾಜಿಯದ್ದೇ ಗಮ್ಮತ್ತು. 

310

ಕಂಠಿ ಹಾಗೂ ಮಾರನ ನಡುವೆ ಕುಸ್ತಿ ನಡೆದಿದೆ. ಅದರಲ್ಲಿ ಕಂಠಿ ತನ್ನ ಹೆಂಡತಿ ಸ್ನೇಹಾ ಹಾಗೂ ತಾಯಿ ಬಂಗಾರಮ್ಮನ ಆಸೆಗೆ ವಿರುದ್ಧವಾಗಿ ಕುಸ್ತಿ ಅಖಾಡಕ್ಕೆ ಇಳಿದಿದ್ದಾನೆ. ಈತನ ವಿರುದ್ಧವಾಗಿ ಮಾರ ಕುಸ್ತಿಯಲ್ಲಿ ಭಾಗವಹಿಸಿದ್ದನು. 

410

'ನೀನು ಈ ಕುಸ್ತಿ ಆಟದಲ್ಲಿ ಆಡಲೇಬೇಕು ಹಾಗೆಯೇ ನೀನು ಕೊಟ್ಟಂತಹ ಮಾತನ್ನ ನಡೆಸಿಕೊಡಬೇಕು. ಈ ಕುಸ್ತಿ ಆಟದಲ್ಲಿ ನೀನು ಗೆದ್ದೇ ಗೆಲ್ಲುತ್ತೀಯ' ಎಂದೆಲ್ಲಾ ಪ್ರೋತ್ಸಾಹದ ಮಾತುಗಳನ್ನ ಹೇಳಿ ಪುಟ್ಟಕ್ಕ ಕಂಠಿಯನ್ನು ಹುರಿದುಂಬಿಸುತ್ತಾಳೆ.
 

510

ಪುಟ್ಟಕ್ಕನ ಪ್ರಯತ್ನದಿಂದ ಬಂಗಾರಮ್ಮ ಮಗನ ಬೆಂಬಲಕ್ಕೆ ನಿಂತಿದ್ದಾಳೆ. 'ಬಂಗಾರಮ್ಮನ ಮಗನಿಗೆ ಸೋಲೆಂಬುದೇ ಇಲ್ಲ' ಅಂದಿದ್ದಾಳೆ. ಪತ್ನಿ ಸ್ನೇಹಾಳೂ ಕಂಠಿಯನ್ನು ಉತ್ತೇಜಿಸಿದ್ದಾಳೆ. ಊಹೆಯಂತೇ ಕಂಠಿ ಮಾರನನ್ನು ಮಣ್ಣು ಮುಕ್ಕಿಸಿ ಗೆಲುವಿನ ಗದೆ ಎತ್ತಿ ಹಿಡಿದಿದ್ದಾನೆ.

610

ಕಂಠಿಗೆ ಮನೆಯಲ್ಲಿ ಯಾರ ಸಪೋರ್ಟ್ ಕೂಡ ಇಲ್ಲ. ಹೆಂಡತಿ ಹಾಗೂ ತಾಯಿ ಇಬ್ಬರು ಕೂಡ ಕುಸ್ತಿ ಆಟ ಆಡೋದೇ ಬೇಡ ಎಂದು ಹಠ ಹಿಡಿದಿದ್ದಾರೆ. ಆದರೆ ಪುಟ್ಟಕ್ಕ ಮಾತ್ರ ಕಂಠಿಗೆ ಧೈರ್ಯ ಹೇಳಿದ್ದಾರೆ. ಈ ಧೈರ್ಯದ ಮೇಲೆ ಕುಸ್ತಿ ಅಖಾಡಕ್ಕೆ ಇಳಿದ ಕಂಠಿ ಗೆದ್ದು ಬೆಳ್ಳಿ ಗದೆ ತನ್ನದಾಗಿಸಿಕೊಂಡಿದ್ದಾನೆ.

710

ಇನ್ನು ಭಾರತ ಕ್ರಿಕೆಟ್‌ ತಂಡವು ವಿಶ್ವಕಪ್‌ ಕ್ರಿಕೆಟ್ 2023ರಲ್ಲಿ ಸೋತು ನಮಗೆ ಬೇಜಾರು ಮಾಡಿದರೂ, ಕಂಠಿ ಕುಸ್ತಿಯಲ್ಲಿ ಗೆದ್ದು ನಮ್ಮ ಬೇಸರ ದೂರ ಮಾಡಿದ್ದಾನೆ ಎಂದು ಅಭಿಮಾನಿಗಳು ಹೇಳಿದ್ದಾರೆ.

810

ಇದು ಉಸ್ತಾದ್ ಸೇರಿ ಎಲ್ಲರಿಗೂ ಖುಷಿ (happiness) ಕೊಟ್ಟಿದೆ. ಆದರೆ ಕಂಠಿ ನನ್ನ ಈ ಗೆಲುವಿಗೆ ಕಾರಣ ನಮ್ಮೋರು ಎಂದು ತನ್ನ ಗೆಲುವನ್ನು ಪತ್ನಿ ಸ್ನೇಹಾಗೆ ಅರ್ಪಿಸುತ್ತಾನೆ.
 

910

'ಉಸ್ತಾದ್ ನೀವು ಹೆಣ್ಮಕ್ಕಳಿಂದ ದೂರ ಇರಬೇಕು, ಅವರು ಜೊತೆಗಿದ್ರೆ ಕುಸ್ತಿ ಮೇಲೆ ಆಸಕ್ತಿ ಇರಲ್ಲ ಅಂದಿದ್ರಿ. ಆದರೆ ಇದು ನನ್ನ ವಿಚಾರದಲ್ಲಿ ಸುಳ್ಳು. ಹೆಣ್ಣುಮಕ್ಕಳೇ ನನ್ನ ಬದುಕಿನ (life) ಆಧಾರ ಸ್ತಂಭ' ಎನ್ನುತ್ತಾನೆ.

1010

ತನ್ನ ಉಸಿರೇ ತನ್ನ ಮಗ ಅಂದುಕೊಂಡಿರುವ ಬಂಗಾರಮ್ಮನ ಬಗ್ಗೆ ಕಂಠಿ ಹೆಚ್ಚು ಗೌರವ ನೀಡದಿರುವುದು ವೀಕ್ಷಕರಿಗೆ ಬೇಸರ ತರಿಸಿದೆ. ಹೆಂಡತಿ ಬಂದಮೇಲೆ ತಾಯಿನ ಮರೀಬೇಡ ಕಂಠಿ ಎಂದು ಅವರು ಬುದ್ಧಿವಾದ ಹೇಳಿದ್ದಾರೆ.

Read more Photos on
click me!

Recommended Stories