ತಾಯಿ ಅಗುತ್ತಿರುವ ಸಂಭ್ರಮದಲ್ಲಿ ನಟಿ ಅತಿರಾ ಮಾಧವ್, ಸೀಮಂತ ಫೋಟೋ ವೈರಲ್!

Suvarna News   | Asianet News
Published : Mar 14, 2022, 01:44 PM IST

ಮಗು ಹೇಗಿರುತ್ತೆ, ಏನ್ ಆಗುವುದಕ್ಕೆ ಇಷ್ಟವಿದೆ ಗೊತ್ತಿಲ್ಲ ಆದರೆ ನಾವು ಹೊಸ ಅತಿಥಿ ಸ್ವಾಗತಿಸಲು ರೆಡಿಯಾಗಿದ್ದೀವಿ ಎಂದ ನಟಿ.

PREV
16
ತಾಯಿ ಅಗುತ್ತಿರುವ ಸಂಭ್ರಮದಲ್ಲಿ ನಟಿ ಅತಿರಾ ಮಾಧವ್, ಸೀಮಂತ ಫೋಟೋ ವೈರಲ್!

ಮಲಯಾಳಂ ಕುಟುಂಬವಿಲಕ್ಕು ಖ್ಯಾತಿಯ ನಟಿ ಅತಿರಾ ಮಾಧವ್ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳಲು ಸಿದ್ಧವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸೀಮಂತದ ಫೋಟೋ ಹಂಚಿಕೊಂಡಿದ್ದಾರೆ. 

26

ಹಳದಿ ಮತ್ತು ಪರ್ಪಲ್ ಬಣ್ಣ ಕಸವು ಸೀರೆ ಧರಿಸಿರುವ ನಟಿ ಅತಿರಾ ಮಾಧವ್ ಸೀಮಂತದ ಫೋಟೋ ಹಂಚಿಕೊಂಡಿದ್ದು ತುಂಬಾನೇ ಗ್ಲೋ ಆಗುತ್ತಿದ್ದಾರೆ.

36

'ಈ ಹೊಸ ಪ್ರಪಂಚಕ್ಕೆ ನಮ್ಮ ಕಂದಮ್ಮ ಬರ ಮಾಡಿಕೊಳ್ಳಲು ರೆಡಿಯಾಗಿದ್ದೀವಿ. ಹುಟ್ಟಿದಾಗ ನೀನು ಹೇಗಿರುತ್ತೀಯಾ ನಮಗೆ ಗೊತ್ತಿಲ್ಲ,  ದೊಡ್ಡವರಾದ ಮೇಲೆ ನಿಮ್ಮ ಇಂಟ್ರೆಸ್ಟ್‌ಗಳು ನಮಗೆ ಗೊತ್ತಿಲ್ಲ ಆದರೆ ನಿನಗೆ ಬ್ಯೂಟಿಫುಲ್ ಲೈಫ್‌ ನೀಡಲು ನಾವು ಸಿದ್ಧ' ಎಂದು ಅತಿರಾ ಬರೆದುಕೊಂಡಿದ್ದಾರೆ.

46

'ಡ್ಯಾಡಿ ಮತ್ತು ಅಮ್ಮ ನಿನ್ನ ಆಗಮನಕ್ಕೆ ಕಾಯುತ್ತಿದ್ದೀವಿ' ಎಂದು ಹೇಳಿಕೊಂಡಿದ್ದಾರೆ. ಅತಿರಾ ಪತಿ ಕೆಂಪು ಬಣ್ಣದ ಶೇರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. 

56

 'ಈ ವರ್ಷ ವುಮೆನ್ಸ್‌ ಡೇ ನನಗೆ ತುಂಬಾನೇ ಸ್ಪೆಷಲ್ ಏಕೆಂದರೆ ನಾನು ತಾಯಿ ಆಗುತ್ತಿರುವೆ. 
ನಿಮ್ಮ ಸ್ವಂತ ಸ್ಥಳವನ್ನು ನಿರ್ಮಿಸಲು ಮತ್ತು ನಿಮ್ಮ ಕುಟುಂಬವನ್ನು ನೋಡಿಕೊಳ್ಳಲು ನೀವು ಎದುರಿಸುತ್ತಿರುವ ಅಡಚಣೆಗಳು ನಿಮ್ಮನ್ನು ಅಗಾಧವಾಗಿವೆ ಎಂದು ನಂಬುತ್ತಾರೆ.' ಎಂದಿದ್ದರು.

66

ಟಿವಿ ನಿರೂಪಕಿಯಾಗಿ ಅತಿರಾ ಮಾಧವ್ ವೃತ್ತಿ ಜೀವನ ಆರಂಭಿಸಿದ್ದರು. ಜನಪ್ರಿಯತೆ ಪಡೆದು ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟು ತಮ್ಮ ಮೊದಲ ವಿವಾಹ ವರ್ಷಿಕೋತ್ಸವದ ದಿನ ತಾಯಿ ಆಗುತ್ತಿರುವ ವಿಚಾರ ರಿವೀಲ್ ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories