Golden Gang: ಈ ವಾರ 'ಗೋಲ್ಡನ್ ಗ್ಯಾಂಗ್' ಶೋಗೆ ನಟ ಸತೀಶ್ ನೀನಾಸಂ ಅಂಡ್ ಟೀಮ್ ಎಂಟ್ರಿ

Suvarna News   | Asianet News
Published : Mar 12, 2022, 01:05 PM IST

ಜೀ ಕನ್ನಡ ವಾಹಿನಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಸೂಪರ್ ಹಿಟ್ ಕಾರ್ಯಕ್ರಮವೇ 'ಗೋಲ್ಡನ್ ಗ್ಯಾಂಗ್'. ಪ್ರತಿ ವೀಕೆಂಡ್‌ನಲ್ಲಿ ಗೋಲ್ಡನ್ ಗ್ಯಾಂಗ್‌ಗೆ ಸ್ಯಾಂಡಲ್‌ವುಡ್‌ನ ಯಾವ ಗ್ಯಾಂಗ್ ಬರುತ್ತೆ ಅಂತ ಜನರು ಕಾದು ಕುಳಿತಿರುತ್ತಾರೆ. 

PREV
17
Golden Gang: ಈ ವಾರ 'ಗೋಲ್ಡನ್ ಗ್ಯಾಂಗ್' ಶೋಗೆ ನಟ ಸತೀಶ್ ನೀನಾಸಂ ಅಂಡ್ ಟೀಮ್ ಎಂಟ್ರಿ

ಈ ವಾರ ಜನರನ್ನು ರಂಜಿಸಲು ಗೋಲ್ಡನ್ ಗ್ಯಾಂಗ್‌ (Golden Gang) ಸೆಟ್‌ಗೆ ನೀನಾಸಂ ಸತೀಶ್ (Ninasam Satish) ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ತಮ್ಮ ಸ್ನೇಹಿತರನ್ನು ಕರೆತಂದಿದ್ದಾರೆ. ತಾವು ಹೀರೋ ಆಗಿ ನಟಿಸಿದ 'ಲೂಸಿಯಾ' (Lucia) ಮತ್ತು 'ಅಯೋಗ್ಯ' (ayogya) ತಂಡದ ಸದಸ್ಯರು ಕೂಡ ಈ ಶೋಗೆ ಬಂದಿದ್ದಾರೆ. 

27

ನಟಿ ಸಿಂಧು ಲೋಕನಾಥ್ (Sindhu Lokanath) ಅವರು ನೀನಾಸಂ ಜೊತೆ 'ಲವ್ ಇನ್ ಮಂಡ್ಯ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಯಶ್ (Yash) ಅಭಿನಯದ 'ಡ್ರಾಮಾ' ಚಿತ್ರದಲ್ಲೂ ನೀನಾಸಂ ಸತೀಶ್ ಹಾಗೂ ಸಿಂಧು ಲೋಕನಾಥ್ ಇಬ್ಬರು ಜೋಡಿಯಾಗಿ ನಟಿಸಿದ್ದರು.

37

ಸತೀಶ್​ಗೆ ಆತ್ಮೀಯರಾಗಿರೋ ಗಾಯಕ ನವೀನ್ ಸಜ್ಜು (Naveen Sajju) ತಮ್ಮ ಹಾಗೂ ಸತೀಶ್ ನಡುವಿನ ಕುಚುಕು ಗೆಳೆತನದ ಬಗ್ಗೆ ಗೋಲ್ಡನ್ ಗ್ಯಾಂಗ್​ನಲ್ಲಿ ಹಂಚಿಕೊಂಡಿದ್ದಾರೆ.

47

ಗೋಲ್ಡನ್ ಗ್ಯಾಂಗ್‌ಗೆ ಬರೋ ಗ್ಯಾಂಗ್‌ಗೆ ಪ್ರಶ್ನೆಗಳ ಸುರಿಮಳೆ ಸುರಿಸುವ ನಿರೂಪಕ  ಗೋಲ್ಡನ್ ಸ್ಟಾರ್ ಗಣೇಶ್ (Ganesh) ಸಹ ನೀನಾಸಂ ಸತೀಶ್ ಹಾಗೂ ಅವರ ತಂಡದ ಜೊತೆ ಎಂಜಾಯ್ ಮಾಡಿದ್ದಾರೆ.

57

'ಅಯೋಗ್ಯ' ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ (Mahesh Kumar), ನಟ ಶಿವರಾಜ್ ಕೆ.ಆರ್ ಪೇಟೆ (Shivaraj KR Pete) ಹಾಗೂ ಹಾಸ್ಯನಟ ಗಿರಿ (Giri) ಸಹ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.

67

ಗಾಯಕ ನವೀನ್ ಸಜ್ಜು ಸಹ ನೀನಾಸಂ ಸತೀಶ್ ಜೊತೆ ಒಳ್ಳೆಯ ಗೆಳೆತನವನ್ನು ಹೊಂದಿದ್ದಾರೆ. ಗೋಲ್ಡನ್ ಗ್ಯಾಂಗ್‌ಗೆ ಬಂದ ನವೀನ್ ಸಾಂಗ್ ಹಾಡಿ ಎಲ್ಲರನ್ನು ಖುಷಿಪಡಿಸಿದರು.

77

ವಿಶೇಷವಾಗಿ 'ಲೂಸಿಯಾ' ಚಿತ್ರದ ನಿರ್ದೇಶಕ ಪವನ್ ಕುಮಾರ್ (Pawan Kumar) ಹಾಗೂ ನಟ ಪೂರ್ಣಚಂದ್ರ ತೇಜಸ್ವಿ (Poornachandra Tejaswi) ಸಹ ಕಾರ್ಯಕ್ರಮಕ್ಕೆ ಬಂದಿದ್ದರು. 'ಲೂಸಿಯಾ' ಚಿತ್ರ ನೀನಾಸಂ ಸತೀಶ್ ಅಭಿನಯಿಸಿದ ಮೊದಲ ಚಿತ್ರವಾಗಿದೆ.

Read more Photos on
click me!

Recommended Stories