'ಲಕ್ಷ್ಮಿ ಬಾರಮ್ಮ' ಸೇರಿದಂತೆ ಅನೇಕ ಜನಪ್ರಿಯ ಕನ್ನಡ ಧಾರಾವಾಹಿಯಲ್ಲಿ ನಟಿಸಿರುವ ಚಂದು ಗೌಡ ಹೊಸ ಬೈಕ್ ಖರೀದಿಸಿದ್ದಾರೆ.
ಪತ್ನಿ ಮತ್ತು ಅತ್ತೆ ಜೊತೆ ಹೊಸ ಬೈಕ್ ಮೇಲೆ ಕುಳಿತುಕೊಂಡಿರುವ ಫೋಟೋ ಹಂಚಿಕೊಂಡು ತಮ್ಮ ಆಪ್ತರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
Suzuki Hayabusa ಫಾಲ್ಕೂನ್ ರೀಬಾರ್ನ್ ಸೂಪರ್ ಬೈಕ್ ಎನ್ನಲಾಗಿದೆ. ಈ ಬೈಕ್‌ನ ಆನ್ ರೋಡ್ ಬೆಲೆ 13.7 ಲಕ್ಷ ರೂ ಯಿಂದ 16.5 ಲಕ್ಷ ರೂ.
'ಮೂರನೇ ಜನರೇಶನ್ ಫಾಲ್ಕೂನ್ ಬೈಕ್. ತುಂಬಾ ಅದ್ಭುತವಾಗಿ ಡೆಲಿವರಿ ಮಾಡಿದ್ದೀರಾ, ನಿಮಗೆ ಧನ್ಯವಾದಗಳು ಹೇಳಿದರೆ ಅದು ಸಣ್ಣ ಪದವಾಗುತ್ತದೆ'
'ಇದು ನನ್ನ ಜೀವನದ ಅತಿ ಅದ್ಭುತವಾದ ಕ್ಷಣ. ಬೈಕ್ ಬಂದ ದಿನ ನನ್ನ ಪಕ್ಕದಲ್ಲಿ ನನ್ನ ಫ್ಯಾಮಿಲಿ ಇದ್ದರು. ನನ್ನ ಸ್ನೇಹಿತರು ಎಕ್ಸ್‌ಟ್ರಾ ಸಪೋರ್ಟ್ ನೀಡಿದ್ದರು' ಎಂದು ಚಂದನ್ ಬರೆದುಕೊಂಡಿದ್ದಾರೆ.
300 ಕಿಲೋಮೀಟರ್ ಪರ್ ಸ್ಪೀಡ್‌ನಲ್ಲಿ ಈ ಬೈಕ್‌ನ ಓಡಿಸಬಹುದು. ಕಪ್ಪು ಮತ್ತು ಕೇಸರಿ ಬಣ್ಣದ ಕಾಂಬಿನೇಷನ್‌ನ ಚಂದನ್ ಆಯ್ಕೆ ಮಾಡಿಕೊಂಡಿದ್ದಾರೆ.