ಖ್ಯಾತ ಉದ್ಯಮಿ ಬಾಬಿ ಚೆಮ್ಮಣ್ಣೂರ್ ಅವರು ನಟಿ ಹನಿ ರೋಸ್ ವಿರುದ್ಧ ನೀಡಿದ್ದ ನಿಂದನಾತ್ಮಕ ಹೇಳಿಕೆಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ತಮ್ಮ ಹೇಳಿಕೆಯಿಂದ ನಟಿಗೆ ನೋವಾಗಿದ್ದು, ಈ ಪ್ರಕರಣವನ್ನು ಹಿಂಪಡೆಯುವಂತೆ ಅವರು ವಿನಂತಿಸಿದ್ದಾರೆ.
ಖ್ಯಾತ ಮಲಯಾಳಂ ನಟಿ ಹನಿ ರೋಸ್ ಅವರ ವಿರುದ್ಧ ನೀಡಿದ್ದ ನಿಂದನಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಪ್ರಮುಖ ಉದ್ಯಮಿ ಬಾಬಿ ಚೆಮ್ಮಣ್ಣೂರ್ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಮಾತುಗಳಿಂದ ನಟಿ ಮತ್ತು ಅವರ ಕುಟುಂಬದ ಮಾನಹಾನಿಯಾಗಿದ್ದು, ನನ್ನ ಮಾತುಗಳಿಂದ ಆಕೆಯ ಕುಟುಂಬದ ಮಾನಹಾನಿ ಮಾಡಿದ ಏಕಾಂಗಿ ವ್ಯಕ್ತಿಯಾಗಿದ್ದೇನೆ. ಇದಕ್ಕೆ ನಾನೇ ಜವಾಬ್ದಾರ. ಈ ಬಗ್ಗೆ ಕ್ಷಮೆ ಕೇಳುತ್ತೇನೆ' ಎಂದು ಬಾಬಿ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
26
ಉದ್ದೇಶಪೂರ್ವಕವಾಗಿ ಯಾರಿಗೂ ನೋವು ಮಾಡಿಲ್ಲ ಎಂದ ಉದ್ಯಮಿ
ತಾವು ಸೋಶಿಯಲ್ ಮೀಡಿಯಾದಲ್ಲಿ ಕೇವಲ ಹಾಸ್ಯ ಮತ್ತು ಮನೋರಂಜನಾತ್ಮಕ ವಿಷಯಗಳನ್ನು ಮಾತ್ರ ಹಂಚಿಕೊಳ್ಳುವುದಾಗಿ ಬಾಬಿ ತಿಳಿಸಿದ್ದಾರೆ. "ನಾನು ಪ್ರತಿಯೊಬ್ಬರನ್ನೂ ಗೌರವಿಸುವ, ಪ್ರೀತಿಸುವ ವ್ಯಕ್ತಿ. ಯಾರನ್ನೂ ಉದ್ದೇಶಪೂರ್ವಕವಾಗಿ ಅವಮಾನಿಸುವ ಅಥವಾ ನೋಯಿಸುವ ಕೆಟ್ಟ ಚಿಂತನೆ ನನಗಿಲ್ಲ. ನನ್ನ ಹೇಳಿಕೆಯಿಂದ ನಟಿಗೆ ನೋವಾಗಿದ್ದು, ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ. ಅವರು ಈ ಕ್ಷಮೆಯನ್ನು ಸ್ವೀಕರಿಸಿ ಪ್ರಕರಣವನ್ನು ಹಿಂಪಡೆಯಬೇಕಾಗಿ ವಿನಂತಿಸುತ್ತೇನೆ" ಎಂದು ಬಾಬಿ ಕೋರಿದ್ದಾರೆ.
36
ದ್ವಂದ್ವಾರ್ಥದ ಮಾತಿನಿಂದ ಆರಂಭವಾದ ವಿವಾದ
ಉದ್ಘಾಟನಾ ಸಮಾರಂಭವೊಂದರಲ್ಲಿ ಭಾಗವಹಿಸಿದ್ದಾಗ ಬಾಬಿ ಚೆಮ್ಮಣ್ಣೂರ್ ಅವರು ದ್ವಂದ್ವಾರ್ಥದ (Double meaning) ಪದಗಳನ್ನು ಬಳಸಿ ತಮಗೆ ಅಪಮಾನ ಮಾಡಿದ್ದಾರೆ ಎಂದು ಹನಿ ರೋಸ್ ಈ ಹಿಂದೆ ಗಂಭೀರ ಆರೋಪ ಮಾಡಿದ್ದರು. ಈ ಘಟನೆಯ ನಂತರ ಆ ಉದ್ಯಮಿಯ ಯಾವುದೇ ಸಂಸ್ಥೆಯ ಕಾರ್ಯಕ್ರಮಗಳಲ್ಲೂ ಭಾಗವಹಿಸುವುದಿಲ್ಲ ಎಂದು ನಟಿ ಕಠಿಣ ನಿರ್ಧಾರ ಕೈಗೊಂಡಿದ್ದರು.
ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ನಿರಾಕರಿಸಿದ ನಂತರ, ಆ ಉದ್ಯಮಿ ತಮ್ಮ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರನ್ನು ಎಳೆದು ತರುತ್ತಿದ್ದಾರೆ ಎಂದು ಹನಿ ರೋಸ್ ಆರೋಪಿಸಿದ್ದರು. ತಮ್ಮ ಪೋಸ್ಟ್‌ನಲ್ಲಿ ಬಾಬಿ ಹೆಸರನ್ನು ನೇರವಾಗಿ ಉಲ್ಲೇಖಿಸದ ನಟಿ, ಆ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಮಹಿಳೆಗೆ ಧಕ್ಕೆ ತರುವಂತಹ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.
56
ಪೊಲೀಸ್ ದೂರು ಮತ್ತು ಬಾಬಿ ಚೆಮ್ಮಣ್ಣೂರ್ ಬಂಧನ
ಈ ವಿಷಯವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ನಟಿ ಹನಿ ರೋಸ್ ಕಾನೂನು ಹೋರಾಟದ ಹಾದಿ ಹಿಡಿದರು. ಬಾಬಿ ವಿರುದ್ಧ ಅವರು ಪೊಲೀಸರಿಗೆ ಅಧಿಕೃತ ದೂರು ನೀಡಿದ್ದರು. ನಟಿಯ ದೂರಿನ ಆಧಾರದ ಮೇಲೆ ಪೊಲೀಸರು ಇತ್ತೀಚೆಗೆ ಬಾಬಿ ಚೆಮ್ಮಣ್ಣೂರ್ ಅವರನ್ನು ಬಂಧಿಸಿದ್ದರು. ತದನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಪ್ರಕರಣದಿಂದ ಹೊರಬರಲು ಬಾಬಿ ನಟಿಯ ಬಳಿ ಕೇಸ್ ಹಿಂಪಡೆಯಲು ಮನವಿ ಮಾಡಿದ್ದಾರೆ.
66
ಏನಿದು ಘಟನೆ?
ಬಾಬಿ ಚೆಮ್ಮಣ್ಣೂರ್ ಅವರ ಉದ್ಯಮದ ಕಾರ್ಯಕ್ರಮದ ಉದ್ಘಾಟನೆಗೆ ಹನಿ ರೋಸ್ ಆಗಮಿಸಿದ್ದರು. ಈ ವೇಳೆ ವೇದಿಕೆಯ ಮೇಲೆ ಆಕೆಯ ಅನುಮತಿಯಿಲ್ಲದೆ ಮುಟ್ಟಿದ್ದಲ್ಲದೆ, ಆಕೆಯ ಕೈಹಿಡಿದು ಒಂದು ಸುತ್ತು ತಿರುಗಿಸಿದ್ದರು. ಅದಲ್ಲದೆ, ಹನಿ ರೋಸ್ ಬೇಡ ಎಂದರೂ ಆಕೆಗೆ ಚಿನ್ನದ ನಕ್ಲೇಸ್ ಅನ್ನು ಸ್ವತಃ ಬಾಬಿ ಚೆಮ್ಮಣ್ಣೂರ್ ಹಾಕಿದ್ದರು. ಅದಾದ ಬಳಿಕ ಆಕೆಯನ್ನು ಮಹಾಭಾರತದ ಕುಂತಿಗೆ ಹೋಲಿಸಿದ್ದು ಕೂಡ ವಿವಾದ ಸೃಷ್ಟಿಸಿತ್ತು. ಕಾರ್ಯಕ್ರಮದ ಬಳಿಕ ಹನಿ ರೋಸ್ ಇದಕ್ಕೆಲ್ಲಾ ಆಕ್ಷೇಪ ವ್ಯಕ್ತಪಡಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಬಳಿಕ ಆಕೆಯ ವಿರುದ್ಧ ನಿಂದನಾತ್ಮಕ ಕಾಮೆಂಟ್ ಪೋಸ್ಟ್ ಮಾಡಿದ್ದರು. ಸಣ್ಣ ರೀತಿಯಲ್ಲಿ ಆರಂಭವಾದ ವಿವಾದ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿ, ಬಾಬಿ ಚೆಮ್ಮಣ್ಣೂರ್ ಬಂಧನದವರೆಗೂ ಹೋಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.