ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾದ ನಟಿ -ಮಾಡೆಲ್ ಹುಮೈರಾ ಅಸ್ಗರ್ ಅಲಿ

Published : Jul 09, 2025, 01:38 PM IST

ಖ್ಯಾತ ನಟಿ, ಮಾಡೆಲ್, ಸೋಶಿಯಲ್ ಮೀಡಿಯಾ ಮೂಲಕ ಭಾರಿ ಸದ್ದು ಮಾಡಿದ್ದ ಹುಮೈರಾ ಅಸ್ಗರ್ ಅಲಿ ಶವವಾಗಿ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದ್ದಾರೆ.

PREV
15

ಪಾಕಿಸ್ತಾನದ ಖ್ಯಾತ ನಟಿ ಹುಮೈರಾ ಅಸ್ಗರ್ ಅಲಿ ಕರಾಚಿ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 32ರ ಹರೆಯದ ಈ ನಟಿ ಮೃತದೇಹ ಆಕೆಯ ಕರಾಚಿಯ ಡಿಫೆನ್ಸ್ ಹೌಸಿಂಗ್ ಸೊಸೈಟಿ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಗಬ್ಬುವಾಸನೆ ಬೀರುತ್ತಿದ್ದ ಕಾರಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ನಟಿ ಶವ ಪತ್ತೆಯಾಗಿದೆ.ನಟಿ ಸಾವಿಗೆ ಕಾರಣ ಕುರಿತು ಕೆಲ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ.

25

ಹುಮೈರಾ ಅಸ್ಗರ್ ಆಲಿ ಮೃತಪಟ್ಟು 2 ವಾರ ಕಳೆದಿದೆ. ಆಕೆಯ ಮೃತದೇಹ ಕೊಳೆತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಕಳೆದ 2 ವಾರದಿಂದ ಹುಮೈರ್ ಮೃತಪಟ್ಟಿರುವ ಕುರಿತು ಗೊತ್ತೆ ಆಗಿಲ್ಲ. ಆಕೆಯ ಆಪ್ತರು, ಕುಟುಂಬಸ್ಥರು ನಟಿ ಸ್ಪಂದನೆ ಇಲ್ಲದ ಕುರಿತು ಯಾವುದೇ ಮಾಹಿತಿಯನ್ನು ಪೊಲೀಸರಿಗೆ ನೀಡಿಲ್ಲ.

35

ಸ್ಥಳೀಯರು ನೀಡಿದು ದೂರಿನ ಆಧಾರದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಪಾರ್ಟ್‌ಮೆಂಟ್‌ನಲ್ಲಿ ಹುಮೈರಾ ಮನೆಯ ಬಾಗಿಲು ಒಡೆದ ಪೊಲೀಸರು ಒಳ ಪ್ರವೇಶಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ಕಳೆದ 7 ವರ್ಷದಿಂದ ಇದೇ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಹುಮೈರಾ ಇದೀಗ ಏಕಾಏಕಿ ಸಾವನ್ನಪ್ಪಿರುವ ಮಾಹಿತಿ ಅಭಿಮಾನಿಗಳಿಗೆ ಆಘಾತ ತಂದಿದೆ.

45

ಹುಮೈರಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಹೇಳಲಾಗುತ್ತಿದೆ. ಸಿನಿಮಾ ಅವಕಾಶ ಕಡಿಮೆಯಾದ ಬಳಿಕ ಪಾಕಿಸ್ತಾನದ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಹುಮೈರಾಗೆ ಟಿವಿ ಸ್ಕ್ರೀನ್ ಮೇಲೂ ಅವಕಾಶ ಕಡಿಮೆಯಾಗಿತ್ತು. ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ನೀಡುತ್ತಿದ್ದ ಹುಮೈರಾ ಕಳೆದೊಂದು ವರ್ಷದಿಂದ ಬಾಡಿಗೆ ನೀಡರಿಲಿಲ್ಲ.

55

ಕಳೆದ ವರ್ಷ ಬಾಡಿಗೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ತಕ್ಷಣವೇ ಮನೆ ಖಾಲಿ ಮಾಡುವಂತೆ ಕೋರ್ಟ್ ಕೂಡ ಹುಮೈರಾಗೆ ಸೂಚಿಸಿತ್ತು. ಆದರೆ ಹುಮೈರಾ ಮನೆ ಬಿಟ್ಟು ತೆರಳಿರಲಿಲ್ಲ. ಆರ್ಥಿಕ ಸಂಕಷ್ಟದಿಂದ ತೀವ್ರ ಬಳಲಿದ್ದ ಹುಮೈರಾ ಇದೇ ಕಾರಣದಿಂದ ಬದುಕು ಅಂತ್ಯಗೊಳಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Read more Photos on
click me!

Recommended Stories