ಗಿಲ್ಲಿಗೆ ಚಿನ್ನದ ಸರ ಹಾಕಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಶರವಣ, ರಕ್ಷಿತಾಗೂ ಸಿಕ್ತು ಭರ್ಜರಿ ಗಿಫ್ಟ್

Published : Jan 24, 2026, 03:17 PM IST

ಗಿಲ್ಲಿಗೆ ಚಿನ್ನದ ಸರ ಹಾಕಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಶರವಣ, ನೂತನ ಚಿನ್ನದ ಮಳಿಗೆ ಉದ್ಘಾಟನೆ ವೇಳೆ ಗಿಲ್ಲಿಗೆ ಚಿನ್ನದ ಸರ ಹಾಕಿದ್ದಾರೆ. ಇತ್ತ ರನ್ನರ್ ಅಪ್ ರಕ್ಷಿತಾಗೂ ಚಿನ್ನದ ಸರ ಹಾಕಿದ್ದಾರೆ. ಇದಕ್ಕೆ ಕಾರಣವನ್ನೂ ಬಹಿರಂಗಪಡಿಸಿದ್ದಾರೆ. 

PREV
16
ಚಿನ್ನದ ಮಳಿಗೆ ಉದ್ಘಾಟನೆಗೆ ಗಿಲ್ಲಿ

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಎಲ್ಲೆಡೆಗಳಿಂದ ಭರಪೂರ ಅಭಿನಂದನೆಗಳು, ಭರ್ಜರಿ ಸ್ವಾಗತ ಸಿಗುತ್ತಿದೆ. ಇತ್ತೀಚೆಗೆ ಎಂಎಲ್‌ಸಿ ಹಾಗೂ ಸಾಯಿ ಗೋಲ್ಡ್ ಪ್ಯಾಲೇಸ್ ಮಳಿಗೆ ಮಾಲೀಕ ಟಿಎ ಶರವಣ ತಮ್ಮ ನೂತನ ಮಳಿಗೆ ಉದ್ಘಾಟನೆಗೆ ಗಿಲ್ಲಿಗೆ ಆಹ್ವಾನ ನೀಡಲಾಗಿತ್ತು. ಗಿಲ್ಲಿ ಆಗಮನದಿಂದ ಕಿಕ್ಕಿರಿದ ಜನ ಸೇರಿದ್ದರು. ಮಳಿಗೆಯನ್ನು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಉದ್ಘಾಟನೆ ಮಾಡಿದ್ದರು, ಇತ್ತ ಗಿಲ್ಲಿ ನಟ ಸೇರಿದಂತೆ ಹಲವರು ಆಗಮಿಸಿದ್ದರು.

26
ಗಿಲ್ಲಿಗೆ ಚಿನ್ನದ ಸರ ಹಾಕಿದ ಶರವಣ

ಟಿಎ ಶರವಣ ಗಿಲ್ಲಿ ಆಗಮಿಸುತ್ತಿದ್ದಂತೆ ಕೆಜಿ ಗಟ್ಟಲೇ ಚಿನ್ನದ ಸರವನ್ನು ಗಿಲ್ಲಿ ಕೊರಳಿಗೆ ಹಾಕಿದ್ದಾರೆ. ಗಿಲ್ಲಿ ಬಂಗಾರಕ್ಕಿಂತ ಕಡಿಮೆ ಇಲ್ಲ. ಗಿಲ್ಲಿ ಅಪ್ಪ ಬಂಗಾರ ಎಂದಿದ್ದರು. ಗಿಲ್ಲಿ ಕೊರಳಿನ ಚಿನ್ನದ ಸರ ಭಾರಿ ಸದ್ದು ಮಾಡಿತ್ತು. ಇದೀಗ ಶರವಣ ಗಿಲ್ಲಿಗೆ ಯಾಕೆ ಚಿನ್ನದ ಸರ ಹಾಕಿದ್ದೇನೆ ಅನ್ನೋದು ಬಹಿರಂಗಪಡಿಸಿದ್ದಾರೆ.

36
ಗಿಲ್ಲಿಗೆ ಶರವಣ ಚಿನ್ನದ ಸರ ಹಾಕಿದ್ದೇಕೆ?

ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಚಿನ್ನದ ಸರ ಹಾಕಿದ ಹಿಂದಿನ ಕಾರಣ ಬಹಿರಂಗವಾಗಿದೆ. ನಾನು ಅತ್ಯಂತ ಪ್ರೀತಿಯಿಂದ ಗಿಲ್ಲಿಗೆ ಚಿನ್ನದ ಸರ ಹಾಕಿದ್ದೇನೆ. ರೈತನ ಮಗನಿಗೆ ನನ್ನ ಕಡೆಯಿಂದ ಸಣ್ಣ ಉಡುಗೊರೆ ಎಂದು ಟಿಎ ಶರವಣ ಹೇಳಿದ್ದಾರೆ. ಇದು ಗಿಲ್ಲಿ ಮೇಲಿನ ಪ್ರೀತಿ, ರೈತನ ಮಗನ ಮೇಲಿನ ಅಭಿಮಾನದಿಂದ ಸರ ಹಾಕಿದ್ದೇನೆ ಎಂದು ಶರವಣ ಹೇಳಿಕೆಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

46
ರಕ್ಷಿತಾಗೂ ಸಿಕ್ತು ಬಿಗ್ ಗಿಫ್ಟ್

ಇತ್ತ ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೂ ಪರಿಷತ್ ಸದಸ್ಯ ಟಿಎ ಶರವಣ ಚಿನ್ನದ ಸರ ಉಡುಗೊರೆ ನೀಡಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಿಂದ ತನಗೆ ಉತ್ತಮ ಲಾಭಾಂಶ ಬಂದಿದೆ. ವಿನ್ನರ್ ಹಾಗೂ ರನ್ನರ್ ಅಪ್‌ಗೆ ಚಿನ್ನದ ಸರ ಉಡುಗೊರೆ ಮಾಡಿದ್ದೇನೆ ಎಂದು ಟಿಎ ಶರವಣ ಹೇಳಿದ್ದಾರೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

56
ಗಿಲ್ಲಿಗೆ ಭಾರಿ ಬೇಡಿಕೆ

ಗಿಲ್ಲಿ ನಟನಿಗೆ ಇದೀಗ ರಾಜ್ಯಾದ್ಯಂತ ಭಾರಿ ಬೇಡಿಕೆ ವ್ಯಕ್ತವಾಗಿದೆ. ಶರವಣ ಅವರ ಚಿನ್ನದ ಮಳಿಗೆ ಕಾರ್ಯಕ್ರಮದ ಬೆನ್ನಲ್ಲೇ ಇದೀಗ ಹಲವು ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ಆಹ್ವಾನಗಳು ಬರುತ್ತಿದೆ. ಇದೇ ವೇಳೆ ಗಿಲ್ಲಿ ನಟನಿಗೆ ಸಂಭಾವನೆಗಳು ಹರಿದಬರುತ್ತಿದೆ. ಈ ಮೂಲಕ ಗಿಲ್ಲಿ ಭಾರಿ ಬ್ಯೂಸಿಯಾಗಿದ್ದಾರೆ

66
ಗಿಲ್ಲಿ ನಟನ ಸ್ಪರ್ಧೆಗೆ ರಾಜ್ಯದಲ್ಲಿ ಭಾರಿ ಮೆಚ್ಚುಗೆ

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ ಸ್ಪರ್ಧೆಗೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸರಿಸುಮಾರು 40 ಕೋಟಿ ಮತಗಳು ಗಿಲ್ಲಿ ಪಡೆದು ಹೊಸ ದಾಖಲೆ ಸೃಷ್ಟಿಸಿದ್ದರು. ಇಷ್ಟೇ ಅಲ್ಲ ಗಿಲ್ಲಿ ನಟನ ಪರ ಅನ್ನದಾನ, ಪೂಜೆ, ಮೆರವಣಿಗೆ ಸೇರಿದಂತೆ ಹಲವು ಜಾತ ನಡೆದಿತ್ತು. ಅಷ್ಟರ ಮಟ್ಟಿಗೆ ಗಿಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದರು.

ಗಿಲ್ಲಿ ನಟನ ಸ್ಪರ್ಧೆಗೆ ರಾಜ್ಯದಲ್ಲಿ ಭಾರಿ ಮೆಚ್ಚುಗೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories