Muddu Sose : ಹಳ್ಳಿನೇ ಎಲ್ಲ ಎಂದ ಭದ್ರೇಗೌಡನ ಹೆಂಡ್ತಿ, ಫೋಟೋ ನೋಡಿ ರೈತನ್ನ ಮದುವೆ ಆಗ್ತೀರಾ ಕೇಳಿದ್ರು ನೆಟ್ಟಿಗರು

Published : Jan 24, 2026, 02:47 PM IST

ಮುದ್ದು ಸೊಸೆ ಸೀರಿಯಲ್ ಶೂಟಿಂಗ್ ಈಗ ತೀರ್ಥಹಳ್ಳಿಯಲ್ಲಿ ನಡೆಯುತ್ತಿದೆ. ಅಲ್ಲಿನ ಸುಂದರ ಫೋಟೋಗಳನ್ನು ಪೋಸ್ಟ್ ಮಾಡಿ ನಟಿ ಪ್ರತಿಮಾ ಹಾಕಿದ ಶೀರ್ಷಿಕೆ ಬಳಕೆದಾರರಲ್ಲಿ ಚರ್ಚೆ ಹುಟ್ಟುಹಾಕಿದೆ.

PREV
17
ಮುದ್ದು ಸೊಸೆ ಪ್ರತಿಮಾ ಠಾಕೂರ್

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಮುದ್ದು ಸೊಸೆ ಸೀರಿಯಲ್ ನಲ್ಲಿ ಮುದ್ದು ಸೊಸೆಯಾಗಿ ಪ್ರತಿಮಾ ಠಾಕೂರ್ ಮಿಂಚುತ್ತಿದ್ದಾರೆ. ಮುದ್ದು ಸೊಸೆ ಸೀರಿಯಲ್ ಈಗ ಮತ್ತೊಂದು ಟ್ವಿಸ್ಟ್ ಪಡೆದಿದೆ. ಹೆಣ್ಣು ಮಗು ಬೇಕು ಎನ್ನುವ ಕಾರಣಕ್ಕೆ ವಿಶೇಷ ಹೂ ಹುಡುಕಿ ಭದ್ರೇಗೌಡ ಕಾಡಿಗೆ ಹೋಗಿದ್ದಾನೆ. ಇತ್ತ ಭದ್ರೇಗೌಡನ ಹುಡುಕಾಟ ಶುರುವಾಗಿದ್ದು, ತಾನೂ ಕಾಡಿಗೆ ಹೋಗುವ ನಿರ್ಧಾರ ತೆಗೆದುಕೊಳ್ತಿದ್ದಾಳೆ ವಿದ್ಯಾ.

27
ಹಳ್ಳಿ ಸೇರಿದ ಸೀರಿಯಲ್ ತಂಡ

ಕಾಡು, ಹಳ್ಳಿ ಶೂಟಿಂಗ್ ಇರೋದ್ರಿಂದ ಸೀರಿಯಲ್ ತಂಡ ಹಳ್ಳಿ ಸೇರಿದೆ. ತೀರ್ಥಹಳ್ಳಿಯಲ್ಲಿ ಸೀರಿಯಲ್ ಶೂಟಿಂಗ್ ನಡೆಯುತ್ತಿದೆ. ಹಳ್ಳಿ ಪರಿಸರದಲ್ಲಿ ಭದ್ರೇಗೌಡನ ಜೊತೆ ರೀಲ್ಸ್ ಮಾಡಿದ್ದ ವಿದ್ಯಾ ಅಲಿಯಾಸ್ ಪ್ರತಿಮಾ ಈಗ ಹಳ್ಳಿಯ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

37
ಕೆಂಪಡಿಕೆ ಒಣಗಿಸ್ತಿರುವ ಪ್ರತಿಮಾ

ಈಗ ಅಡಿಕೆ ಸೀಸನ್. ಅಡಿಕೆ ಬೆಳೆಗಾರರು ಅಡಿಕೆ ಕೊಯ್ಲಿನಲ್ಲಿ ಬ್ಯುಸಿ ಇದ್ದಾರೆ. ಎಲ್ಲಿ ನೋಡಿದ್ರೂ ಕೆಂಪಡಿಕೆ ಕಾಣಸಿಗುತ್ತೆ. ಕೆಂಪಡಿಕೆ ಒಣಗಿಸ್ತಿರುವಂತೆ ಪ್ರತಿಮಾ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಅಡಿಕೆಯನ್ನು ಕೈನಲ್ಲಿ ಹಿಡಿದಿರೋದನ್ನು ಕಾಣ್ಬಹುದು.

47
ವಿದ್ಯಾ ಕೈನಲ್ಲಿ ಗುದ್ದಲಿ

ಪ್ರತಿಮಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಅವರು ಗುದ್ದಲಿ ಹಿಡಿದು ಕೆಲ್ಸ ಮಾಡ್ತಿರೋದನ್ನು ನೋಡ್ಬಹುದು. ತೋಟ, ಮನೆ ಹೀಗೆ ಹಳ್ಳಿಯ ಅನೇಕ ಫೋಟೋಗಳನ್ನು ವಿದ್ಯಾ ಪೋಸ್ಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಹಳ್ಳಿ ಮನೆಯೊಳಗೆ ವಿದ್ಯಾ ಕುಳಿತಿರೋದನ್ನು ಕಾಣ್ಬಹುದು.

57
ಹಳ್ಳಿನೇ ಎಲ್ಲ

ವಿದ್ಯಾ ಫೋಟೋ ಫ್ಯಾನ್ಸ್ ಗೆ ಇಷ್ಟವಾಗಿದೆ. ಆದ್ರೆ ಅವರು ಹಾಕಿದ ಶೀರ್ಷಿಕೆ ಸ್ವಲ್ಪ ಚರ್ಚೆಗೆ ಕಾರಣವಾಗಿದೆ. ವಿದ್ಯಾ ಈ ಎಲ್ಲ ಫೋಟೋ ಹಾಕಿ, ಹಳ್ಳಿಲ್ಲಿ ಏನಿಲ್ಲ ಅನ್ನೋರ್ ಮುಂದೆ ಹಳ್ಳಿನೇ ಎಲ್ಲ ಅನ್ನೋರು ನಾವು ಅಂತ ಶೀರ್ಷಿಕೆ ಹಾಕಿದ್ದಾರೆ. ಅವರ ಶೀರ್ಷಿಕೆ ನೋಡಿದ ಬಳಕೆದಾರರು, ಕಾಲೆಳೆಯಲು ಶುರು ಮಾಡಿದ್ದಾರೆ.

67
ರೈತನನ್ನು ಮದುವೆ ಆಗ್ತೀರಾ?

ಹಳ್ಳಿಗೆ ಬಂದು ಫೋಟೋಕ್ಕೆ ಫೋಸ್ ಕೊಡೋದಲ್ಲ, ರೈತನನ್ನು ಮದುವೆ ಆಗ್ತೀರಾ ಅಂತ ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಫೋಟೋಕ್ಕೆ, ಲೈಕ್ಸ್, ಕಮೆಂಟ್ ಗೆ ಹಳ್ಳಿ ಬೇಕು. ಹುಡುಗಿ ಕೊಡೊವಾಗ ಮಾತ್ರ ಹುಡುಗ ರೈತ ಆಗಿರಬಾರದು ಎನ್ನುತ್ತಾರೆ. ಶೂಟಿಂಗ್ ನಲ್ಲಿ ಮಾತ್ರ ಇಂಥ ಮಾತು ಅಂತ ಕೆಲವರು ವಿದ್ಯಾ ಶೀರ್ಷಿಕೆಗೆ ಕಮೆಂಟ್ ಮಾಡಿದ್ದಾರೆ. ಪ್ರತಿಮಾ ಕೊರಳಲ್ಲಿ ತಾಳಿ ನೋಡಿದ ಕೆಲವರು ನಿಮಗೆ ಮದ್ವೆ ಆಗಿದ್ಯಾ ಕೇಳಿದ್ದಾರೆ. ಇನ್ನು ಕೆಲವರು ಪ್ರತಿಮಾ ಫೋಟೋಗಳನ್ನು ಇಷ್ಟಪಟ್ಟಿದ್ದಲ್ಲದೆ ಹಳ್ಳಿ ಜೀವನವೇ ಬೆಸ್ಟ್ ಎಂದಿದ್ದಾರೆ.

77
ಪ್ರತಿಮಾ ಠಾಕೂರ್

ಪ್ರತಿಮಾ ಠಾಕೂರ್ ಮುದ್ದು ಸೊಸೆ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ ಆಗಿದ್ದ ಪ್ರತಿಮಾ, ಕನ್ನಡ ಹಾಗೂ ತೆಲುಗು ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದರು. ಆದ್ರೆ ಸೀರಿಯಲ್ ಗೆ ನಾಯಕಿಯಾಗಿದ್ದು ಇದೇ ಮೊದಲು. ಕನ್ನಡದ ದೊರೆಸ್ವಾನಿ, ಅಂತರಪಟ ಸೀರಿಯಲ್ ನಲ್ಲಿ ನಾಯಕಿ ತಂಗಿಯಾಗಿ ಪ್ರತಿಮಾ ನಟಿಸಿದ್ದರು. ಮುದ್ದು ಸೊಸೆಯಲ್ಲಿ ಬಿಗ್ ಬಾಸ್ 11ರ ಸ್ಪರ್ಧಿ ತ್ರಿವಿಕ್ರಮ್ ಜೋಡಿಯಾಗಿ ನಟಿಸುತ್ತಿದ್ದಾರೆ. ಕೆಂಡದ ಸೆರಗು, ತರ್ಕ ಸಿನಿಮಾದಲ್ಲಿಯೂ ಪ್ರತಿಮಾ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories