Ankitha Jayaram: ಕರ್ಣ ಧಾರಾವಾಹಿಯಲ್ಲಿ ಇತ್ತೀಚಿನ ಪ್ರೊಮೋದಲ್ಲಿ ಹೊಸ ಪಾತ್ರವೊಂದರ ಎಂಟ್ರಿಯಾಗಿದೆ. ಸಂಜಯ್ ಗೆ ಕೊಬ್ಬಿಳಿಸುವ ರಿಯಾ ಪಾತ್ರದಲ್ಲಿ ನಟಿಸುತ್ತಿರುವ ಆ ಮುದ್ದಾದ ಬೆಡಗಿ ಯಾರು? ಈ ಹಿಂದೆ ಬಾಲನಟಿಯಾಗಿ ನಟಿಸಿ, ಇದೀಗ ವಿಶೇಷ ಪಾತ್ರದಲ್ಲಿ ಎಂಟ್ರಿ ಕೊಟ್ಟ ನಟಿಯ ಮಾಹಿತಿ ಇಲ್ಲಿದೆ.
ಕರ್ಣ ಧಾರಾವಾಹಿಯಲ್ಲಿ ಇದೀಗ ಹೊಸ ಪಾತ್ರದ ಎಂಟ್ರಿಯಾಗಿದೆ. ಇಲ್ಲಿವರೆಗೂ ತಮಗೆ ಠಕ್ಕರ್ ಕೊಡುವವರು ಯಾರು ಇಲ್ಲ ಎಂದು ನಂಬಿದ್ದ ಸಂಜಯ್ ಗೆ, ಸವಾಲು ಹಾಕಲೇಂದೇ ಬಂದಿರುವ ಪಾತ್ರ ರಿಯಾ. ಮೊದಲ ಎಪಿಸೋಡ್ ನಲ್ಲೇ ಸಂಜಯ್ ಗೆ ಢಿಕ್ಕಿ ಹೊಡೆದು, ಜಗಳ ಮಾಡಿ ಆಟೋ ಹತ್ತಿ ಕುಳಿತ ರಿಯಾ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಯಾರೀ ನಟಿ. ಇಲ್ಲಿದೆ ಮಾಹಿತಿ.
26
ಅಂಕಿತಾ ಜಯರಾಮ್
ಈ ನಟಿ ಬೇರೆ ಯಾರೂ ಅಲ್ಲ, ಹಲವು ಸಿನಿಮಾಗಳಲ್ಲಿ, ಸೀರಿಯಲ್ ಗಳಲ್ಲಿ ಬಾಲ ನಟಿಯಾಗಿ ನಟಿಸಿ, ವೀಕ್ಷಕರ ಮನ ಗೆದ್ದ ನಟಿ ಅಂಕಿತಾ ಜಯರಾಮ್. ಇವರು ಈ ಹಿಂದೆ ನವೀನ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ನವೀನ್ ಕೃಷ್ಣ ಅವರ ಮಗಳು ಪ್ರಣೀತಾ ಪಾತ್ರದಲ್ಲಿ ನಟಿಸಿದ್ದರು.
36
ಅಂಕಿತಾ ಜಯರಾಮ್ ನಟಿಸಿದ ಸಿನಿಮಾಗಳು
ಅಂಕಿತಾ ನಟ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ಮೊದಲಾದ ಸ್ಟಾರ್ ನಟರ ಸಿನಿಮಾಗಳಾದ ಭರಾಟೆ, ಕ್ರಾಂತಿ, ಯುವರತ್ನ, ರತ್ನನ್ ಪ್ರಪಂಚ, ವೇದ, ಶೋಕಿವಾಲ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ವಿಜಯ್ ರಾಘವೇಂದ್ರ ಅಭಿನಯದ ‘ಹಕೂನ ಮಟಾಟ’ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ.
ಕಳೆದ ವರ್ಷ ಬಿಡುಗಡೆಯಾದ ‘ಕಾಗದ’ ಎನ್ನುವ ಸಿನಿಮಾದಲ್ಲಿ ಅಂಕಿತಾ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಟೀನೇಜ್ ಪ್ರೇಮಕತೆಯಾಗಿದ್ದು, ಈ ಸಿನಿಮಾದಲ್ಲಿ ಅಂಕಿತಾ ಮುಸ್ಲಿಂ ಹುಡುಗಿಯಾಗಿ ನಟಿಸಿದ್ದರು. 16 ವರ್ಷ ವಯಸ್ಸಿನ ಅಂಕಿತಾ ಸದ್ಯ ಪಿಯುಸಿ ಓದುತ್ತಿದ್ದು, ಇದೀಗ ಕರ್ಣ ಧಾರಾವಾಹಿಗೆ ರಿಯಾ ಆಗಿ ಎಂಟ್ರಿ ಕೊಟ್ಟಿದ್ದಾರೆ.
56
ಸೀರಿಯಲ್ ಕುರಿತು ರಿಯಾ ಹೇಳಿದ್ದೇನು?
ಜೀ ಕನ್ನಡದಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಕರುನಾಡ ಜನತೆಯ ಮನೆ ಮನ ಮೆಚ್ಚಿದ ಕರ್ಣ ಧಾರಾವಾಹಿಯಲ್ಲಿ ಹೊಸ ಲುಕ್ ನೊಂದಿಗೆ ಅಭಿನಯಿಸುತ್ತಿರುವ ನಿಮ್ಮ ಪ್ರೀತಿಯ ಅಂಕಿತ. ಎಂದಿನಂತೆ ನಿಮ್ಮೆಲ್ಲರ ಪ್ರೀತಿಯ ಪ್ರೋತ್ಸಾಹ ಶುಭ ಹಾರೈಕೆ ಸದಾ ಕಾಲ ಇರಲಿ ಎಂದು ವೀಕ್ಷಕರಲ್ಲಿ ಕೇಳಿಕೊಂಡಿದ್ದಾರೆ.
66
ಮಿಸ್ ಮಾಡದೆ ಎಪಿಸೋಡ್ ನೋಡಿ
ಇಂದು ಪ್ರಸಾರ ವಾಗುತ್ತಿರುವ ಈ ಎಪಿಸೋಡ್ ತಪ್ಪದೇ ನೋಡಿ. ಈ ಧಾರಾವಾಹಿಯಲ್ಲಿ ನಟಿಸಲು ಆಯ್ಕೆ ಮಾಡಿದ ಜೀ ಕುಟುಂಬದ ರಾಘವೇಂದ್ರ ಹುಣಸೂರ್ ಸರ್, ರಮೇಶ್ ಇಂದಿರಾ ಸರ್, ಶೃತಿ ನಾಯ್ಡು ಮೇಡ೦ರವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.