ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದ ನಂತರ ನಿವೇದಿತಾ ಗೌಡ ಅವರ ಜೀವನಶೈಲಿ ಸಂಪೂರ್ಣ ಬದಲಾಗಿದೆ. ಇದೀಗ ಎರಡನೇ ಮದುವೆಗೆ ಸಿದ್ಧ ಎಂದು ಹೇಳಿಕೊಂಡಿರುವ ಅವರು, ತಮಗೆ ಬೇಕಾದ ಹುಡುಗ ಹೇಗಿರಬೇಕು ಎಂಬುದನ್ನು ವಿವರಿಸಿದ್ದಾರೆ ಹಾಗೂ ಆರ್ಥಿಕವಾಗಿ ಸದೃಢಳಾಗಲು ಐಟಂ ಸಾಂಗ್ ಮಾಡಲು ಸಿದ್ಧ ಎಂದಿದ್ದಾರೆ.
Bigg Bossನಿಂದ ಫೇಮಸ್ ಆಗಿರೋ ನಿವೇದಿತಾ ಗೌಡ (Niveditha Gowda) ಅವರ ಲೆವೆಲ್ಲೇ ಈಗ ಬೇರೆಯಾಗಿದೆ. ಚಂದನ್ ಶೆಟ್ಟಿ ಅವರಿಂದ ಡಿವೋರ್ಸ್ ಪಡೆದ ಬಳಿಕ, ಫಾರಿನ್ ಟೂರ್ ಹೆಚ್ಚಾಗಿದೆ, ಜೊತೆಗೆ ತುಂಡುಡುಗೆ ಕುಣಿತವೂ ಅಷ್ಟೇ ಜೋರಾಗಿದೆ. ವಾಣಿ ಎನ್ನುವ ಸ್ನೇಹಿತೆಯ ಜೊತೆ ಟ್ರೋಲ್ ಆಗುವಂಥ ರೀಲ್ಸ್ ಮಾಡುತ್ತಾ ಅಷ್ಟೇ (ಕು)ಖ್ಯಾತಿಯನ್ನೂ ಗಳಿಸುತ್ತಿದ್ದಾರೆ. ಟ್ರೋಲ್ ಆದಷ್ಟೂ ಹೆಚ್ಚು ಹೆಚ್ಚು ಫೇಮಸ್ ಆಗುತ್ತಾ, ಹೆಚ್ಚಿಗೆ ದುಡಿಯುತ್ತಿದ್ದಾರೆ. ಇಂಥವರಿಗಾಗಿಯೇ ಕಾದು ಕುಳಿತಿರುವ ಕೆಲವು ರಿಯಾಲಿಟಿ ಷೋಗಳಲ್ಲಿಯೂ ಭರ್ಜರಿ ಆಫರ್ ಪಡೆಯುತ್ತಿದ್ದಾರೆ.
26
ಬೇರೆ ಲೆವೆಲ್
ಒಟ್ಟಿನಲ್ಲಿ ನಿವೇದಿತಾ ಗೌಡ ಅವರ ರೇಂಜ್ ಇದೊಂದು ವರ್ಷದಲ್ಲಿ ಬೇರೆಯದ್ದೇ ಲೆವೆಲ್ಲಿಗೆ ಹೋಗಿದೆ ಎನ್ನಬಹುದು. ಇನ್ನೂ ವಯಸ್ಸು 20 ಇರುವಾಗಲೇ ಬಿಗ್ಬಾಸ್ ಮನೆಯಲ್ಲಿ ಸಹ ಸ್ಪರ್ಧಿಯಾಗಿದ್ದ ಚಂದನ್ ಶೆಟ್ಟಿಯವರ ಲವ್ಗೆ ಬಿದ್ದು, ಮೈಸೂರು ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗುವುದರಿಂದ ಹಿಡಿದು, ಇಂದಿನವರೆಗೂ ನಿವೇದಿತಾ ಸದಾ ಸುದ್ದಿಯಲ್ಲಿರುವಾಕೆಯೇ.
36
ಎರಡನೆಯ ಮದ್ವೆ ಬಗ್ಗೆ
ಇದಾಗಲೇ ಎರಡನೆಯ ಮದುವೆಯ ಬಗ್ಗೆ ಕೆಲವು ಮಾಧ್ಯಮಗಳ ಮುಂದೆ ನಿವೇದಿತಾ ಗೌಡ ಹೇಳಿಕೊಂಡಿದ್ದು ಇದೆ. ಸದ್ಯ ಮದುವೆ ಎಂದರೆ ಭಯ ಎಂದೆಲ್ಲಾ ಹೇಳಿದ್ದರು. ಆದರೆ ಈಚಿಗಿನ ಒಂದು ಸಂದರ್ಶನದಲ್ಲಿ ನಿವೇದಿತಾ, ಎರಡನೆಯ ಮದುವೆಗೆ ತಾವು ಸಿದ್ಧ ಎಂದು ಹೇಳಿದ್ದಾರೆ. ನನ್ನ ಅಮ್ಮ ನನಗೆ ಯಾವಾಗ ಮದುವೆ ಆಗಬೇಕು ಎನ್ನಿಸುತ್ತದೆ ಆಗ ಆಗು ಎಂದು ಹೇಳಿದ್ದಾರೆ. ಆದ್ದರಿಂದ ಮದುವೆ ಆಗುತ್ತೇನೆ ಎಂದಿದ್ದಾರೆ.
ಇದೇ ವೇಳೆ, ತಮ್ಮನ್ನು ಮದುವೆಯಾಗುವ ಹುಡುಗನ ಬಗ್ಗೆ ಮಾತನಾಡಿರುವ ನಿವ್ವಿ, ನನ್ನನ್ನು ಆತ ತುಂಬಾ ಇಷ್ಟಪಡಬೇಕು. ಅದಕ್ಕಿಂತಲೂ ಹೆಚ್ಚಾಗಿ ನನಗೆ ಆ ಫೀಲಿಂಗ್ ಬರುವಂತೆ ಮಾಡಬೇಕು. ಸದ್ಯ ಭಯ ಇದೆ. ಆ ಭಯವನ್ನು ಹೋಗಲಾಡಿಸುವ ಸಿಕ್ಕರೆ ಆಗುತ್ತೇನೆ. ಅವನು ಫೀಲಿಂಗ್ ಬರಿಸುವುದರ ಜೊತೆಗೆ ನನ್ನನ್ನು ತುಂಬಾ ಇಷ್ಟಪಡುವವನಾಗಿರಬೇಕು ಎಂದಿದ್ದಾರೆ.
56
ನೆಟ್ಟಿಗರಿಂದ ಪ್ರಶ್ನೆ
ಇದನ್ನು ಕೇಳಿದ ನೆಟ್ಟಿಗರು, ಹಾಗಿದ್ರೆ ಚಂದನ್ ಶೆಟ್ಟಿ ಹೀಗೆಲ್ಲಾ ಇರಲಿಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ! ಇದಾಗಲೇ ಚಂದನ್ ಶೆಟ್ಟಿ (Chandan Shetty) ಅವರು ಸಂದರ್ಶನದಲ್ಲಿ, ನಿವೇದಿತಾ ಅವರಿಗೆ ಐಷಾರಾಮಿ ಜೀವನ ಬೇಕು. ಇದೇ ಕಾರಣಕ್ಕೆ ತಮಗೂ ಈಕೆಗೂ ಹೊಂದಾಣಿಕೆ ಆಗಿಲ್ಲ ಎಂದಿದ್ದರು. ಇದಕ್ಕೆ ಉತ್ತರಿಸಿದ್ದ ನಿವೇದಿತಾ, ನನಗೆ ಐಷಾರಾಮಿ ಜೀವನ ಬೇಕು ನಿಜ. ಆದರೆ ಚಿಕ್ಕ ವಯಸ್ಸಿನಲ್ಲಿಯೇ ನಾನೇ ದುಡಿಯುತ್ತಿದ್ದೇನೆ. ಫೈನಾನ್ಷಿಯಲಿ ನಾನು ಯಾರ ಸಹಾಯವನ್ನೂ ಕೇಳುವವಳಲ್ಲ, ಚಂದನ್ ಶೆಟ್ಟಿ ಜೊತೆಗೆ ಇರುವಾಗಲೂ ನನ್ನದೇ ದುಡ್ಡಿನಿಂದ ವಸ್ತು ಖರೀದಿಸುತ್ತಿದ್ದೆ ಎಂದಿದ್ದರು.
66
ಐಟಂ ಸಾಂಗ್ಗೆ ರೆಡಿ ಎಂದಿದ್ದ ನಿವೇದಿತಾ
ಆರ್ಥಿಕ ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ಗುರಿ ಇಟ್ಟುಕೊಂಡಿರುವ ನಿವೇದಿತಾ ಗೌಡ, ಇದಕ್ಕಾಗಿ ಈಗ ಯಾವ ಹಂತಕ್ಕಾದರೂ ಹೋಗಲು ರೆಡಿ ಇದ್ದಾರೆ. ಸಿನಿಮಾದಲ್ಲಿ ನಟನೆ ಮಾಡುವ ಆಸೆ ಇದೆ. ಅದು ಸಿಗದೇ ಹೋದರೆ ಐಟಂ ಸಾಂಗ್ ಆದ್ರೂ ಓಕೆ, ನನಗೆ ದುಡ್ಡು ಬೇಕು ಅರ್ಥಾತ್ Finacially strong ಆಗಬೇಕು. ಅದಕ್ಕಾಗಿ ನನಗೆ ಇಷ್ಟವಾದದ್ದನ್ನು ನಾನು ಏನು ಬೇಕಾದರೂ ಮಾಡಲು ಸೈ ಎಂದು ಧೈರ್ಯದಿಂದ ಹೇಳಿದ್ದಾರೆ ನಟಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.