ವರ್ಷಗಳ ನಂತ್ರ ಕಿರುತೆರೆಗೆ ಮಾಂಗಲ್ಯಂ ತಂತುನಾನೇನ ತೇಜು ಎಂಟ್ರಿ; ಅಪ್ಪು ಬದ್ಲು ನೀವೆ ಹೀರೋ ಆಗಿ ಎಂದ ಫ್ಯಾನ್ಸ್‌!

Published : May 23, 2024, 03:17 PM IST

ಹಲವು ವರ್ಷಗಳ ಬಳಿಕ ಶ್ರೀ ಗೌರಿ ಸೀರಿಯಲ್ ಮೂಲಕ ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ ಮಾಂಗಲ್ಯಂ ತಂತುನಾನೇನ ನಟ ಆರ್ ಕೆ ಚಂದನ್. ತಮ್ಮ ನೆಚ್ಚಿನ ತೇಜಸ್ವಿಯನ್ನು ನೋಡಿ ಜನ ಫುಲ್ ಖುಷ್ ಆಗಿದ್ದಾರೆ.   

PREV
17
ವರ್ಷಗಳ ನಂತ್ರ ಕಿರುತೆರೆಗೆ ಮಾಂಗಲ್ಯಂ ತಂತುನಾನೇನ ತೇಜು ಎಂಟ್ರಿ; ಅಪ್ಪು ಬದ್ಲು ನೀವೆ ಹೀರೋ ಆಗಿ ಎಂದ ಫ್ಯಾನ್ಸ್‌!

ಕೆಲ ವರ್ಷಗಳ ಹಿಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಮಾಂಗಲ್ಯಂ ತಂತು ನಾನೇನ (Mangalyam Tantu Nanena) ಎನ್ನುವ ಸೀರಿಯಲ್ ಪ್ರಸಾರವಾಗುತ್ತಿತ್ತು, ಈ ಸೀರಿಯಲ್ ಜೋಡಿಯಾದ ತೇಜಸ್ವಿ -ಶ್ರಾವಣಿ ಭಾರಿ ಜನಪ್ರಿಯತೆ ಪಡೆದಿದ್ದರು. ಇಬ್ಬರ ಮುದ್ದಾದ ಜೋಡಿಗೆ ಜನ ಫಿದಾ ಆಗಿದ್ದರು. ಆದರೆ ಕೊರೋನಾ ಕಾರಣದಿಂದ ಸೀರಿಯಲ್ ಶಾಶ್ವತವಾಗಿ ಪ್ರಸಾರ ನಿಲ್ಲಿಸಿದ್ದು, ಜನರಿಗೆ ಭಾರಿ ಬೇಸರ ತಂದಿತ್ತು.
 

27

ಶ್ರಾವಣಿಯಾಗಿ ನಟಿಸಿದ್ದ ದಿವ್ಯಾ ವಾಘುಕರ್ ಬಳಿಕ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದರು, ಸದ್ಯ ಗೌರಿಶಂಕರ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಆದರೆ ತೇಜಸ್ವಿ ಪಾತ್ರದಲ್ಲಿ ನಟಿಸಿದ್ದ ಆರ್ ಕೆ ಚಂದನ್ (R K Chandan) ಮತ್ತೆ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಇದೀಗ ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. 
 

37

ಹೌದು, ಚಂದನ್ ಇದೀಗ ವಿರಾಟ್ ಆಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀಗೌರಿ (Shree Gouri) ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ಗೌರಿ ಸೀರಿಯಲ್ ನಲ್ಲಿ ಬ್ಯುಸಿನೆಸ್ ಮೆನ್ ಆಗಿ ಚಂದನ್ ನಟಿಸಿದ್ದು, ಮಾಣಿಕ್ಯ ತನ್ನ ತಂಗಿ ಗೌರಿಗಾಗಿ ಹುಡುಗಿ ಹುಡುತ್ತಿದ್ದ ಸಂದರ್ಭದಲ್ಲಿ ಇವರ ಆಗಮನವಾಗಿದ್ದು, ಆತನೇ ತನ್ನ ತಂಗಿಗೆ ಬೆಸ್ಟ್ ಎಂದು ಮಾಣಿಕ್ಯ ನಿರ್ಧರಿಸಿದ್ದಾರೆ. 
 

47

ವಿರಾಟ್ ಗೌರಿ ಮನೆಗೆ ನೇರವಾಗಿ ಎಂಟ್ರಿ ಕೂಡ ಕೊಟ್ಟಿದ್ದು, ಪ್ರತಿದಿನ ನೆಲದ ಮೇಲೆ ಎಲ್ಲರೂ ಮೆಟ್ಟಿಕೊಂಡು ಹೋಗುವ ರಂಗೋಲಿಯಲ್ಲೂ ಪರ್ಫೆಕ್ಷನ್ ಹುಡುಕುವ ಗೌರಿ ಮೊದಲ ನೋಟದಲ್ಲಿ ವಿರಾಟ್ ಗೆ ಇಷ್ಟವಾಗಿದ್ದು, ತನ್ನ ಮನೆಯವರನ್ನು ಕರೆದುಕೊಂಡು ನೇರವಾಗಿ ಗೌರಿ ಮನೆಗೆ ಹುಡುಗಿ ಕೇಳೊದಕ್ಕೆ ಬಂದಿದ್ದಾನೆ. 
 

57

ಹಲವು ವರ್ಷಗಳ ಬಳಿಕ ತಮ್ಮ ನೆಚ್ಚಿನ ಹೀರೋನನ್ನು ತೆರೆಯ ಮೇಲೆ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಚಂದನ್ ಅವರನ್ನು ಮತ್ತೆ ಕಿರುತೆರೆಗೆ ಕರೆದುಕೊಂಡು ಬಂದಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ ಜನ. ಅಷ್ಟೇ ಅಲ್ಲ ಹ್ಯಾಂಡ್ಸಮ್ ಹಂಕ್ ತೇಜು ಈಸ್ ಬ್ಯಾಕ್, ಎಷ್ಟೋ ವರ್ಷಗಳ ಬಳಿಕ ಇವರನ್ನ ಕಿರುತೆರೆಯಲ್ಲಿ ನೋಡೋದೆ ಖುಷಿ ಎಂದಿದ್ದಾರೆ. 
 

67

ಇನ್ನೂ ಕೂಡ ಚಂದನ್ ಅವರನ್ನು ಮಾಂಗಲ್ಯಂ ತಂತುನಾನೇನದ ತೇಜು ಆಗಿಯೇ ಕರೆಯುತ್ತಿರುವ ಅಭಿಮಾನಿಗಳು ಇವರೇ ಹೀರೋ ಆಗ್ಬೇಕಿತ್ತು, ಗೌರಿ ವಿರಾಟ್ ಜೋಡಿ ತುಂಬಾನೆ ಚೆನ್ನಾಗಿರ್ತಿತ್ತು ಎಂದಿದ್ದಾರೆ. ಗೌರಿ ಮತ್ತು ವಿರಾಟ್ ಗೆ ಮದುವೆ ಮಾಡಿಸಿಬಿಡಿ ಎಂದು ಕೂಡ ಸಲಹೆ ನೀಡಿದ್ದಾರೆ. ಅಪ್ಪುಗಿಂತ ಇವರೇ ಚೆನ್ನಾಗಿದ್ದಾರೆ, ಅಪ್ಪುನ ಚೆಂಜ್ ಮಾಡಿ, ಇವರನ್ನೆ ಹಾಕ್ಬಿಡಿ ಅಂತ ಸಲಹೆ ನೀಡ್ತಿದ್ದಾರೆ ಜನ. 
 

77

ಇನ್ನು ಚಂದನ್ ಬಗ್ಗೆ ಹೇಳೋದಾದರೆ ಮಾಂಗಲ್ಯಂ ತಂತು ನಾನೇನ ಸೀರಿಯಲ್ ಬಳಿಕ ಸಿನಿಮಾಗಳಲ್ಲಿ ಚಂದನ್ ಬ್ಯುಸಿಯಾಗಿದ್ದರು. ಬಿಂಗೋ, ಕಟ್ಟಾರ, ಮೊದಲಾದ ಸಿನಿಮಾಗಳಲ್ಲಿ ಚಂದನ್ ಬಣ್ಣ ಹಚ್ಚಿದ್ದಾರೆ. ಸದ್ಯ ವಿಶೇಷ ಅತಿಥಿ ಪಾತ್ರದಲ್ಲಿ ಶ್ರೀಗೌರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರ ನೆಗೆಟೀವ್ (negative shade) ಆಗಿದೆಯೋ, ಪಾಸಿಟಿವ್ ಆಗಿದೆಯೋ , ಗೌರಿಯನ್ನು ಮದ್ವೆ ಆದ್ರೆ ಅಪ್ಪು ಕಥೆ ಏನು..? ಎಲ್ಲಾದಕ್ಕೂ ಕಾದು ನೋಡಬೇಕು. 
 

Read more Photos on
click me!

Recommended Stories