ಕಿರುತೆರೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿದ ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿಯ ಲೀಲಾ ಯಾರಿಗೆ ತಾನೆ ಗೊತ್ತಿಲ್ಲ. ತನ್ನ ಎಡವಟ್ಟುಗಳಿಂದ ಕನ್ನಡಿಗರ ಮನಗೆದ್ದು, ಎಡವಟ್ಟು ರಾಣಿಯಾದ ಮಿಲ್ಕಿ ಬ್ಯೂಟಿ ಮಲೈಕಾ ವಸುಪಾಲ್.
ಸೀರಿಯಲ್ ಮುಗಿದು ಸಮಯ ಕಳೆದರೂ ಇಂದಿಗೂ ಜನರು ಮಲೈಕಾಗಿಂತ ಹೆಚ್ಚಾಗಿ ಲೀಲಾ (Leela) ಅಂತಾನೆ ಗುರುತಿಸುತ್ತಿದ್ದಾರೆ. ಅಷ್ಟೊಂದು ಇಷ್ಟಪಟ್ಟಿದ್ದಾರೆ ಜನರು ಲೀಲಾ ಪಾತ್ರವನ್ನು.
ಸೀರಿಯಲ್ ಬಳಿಕ ಸದ್ಯ ಮಲೈಕಾ (Malaika Vasupal) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಟ್ಲರ್ ಕಲ್ಯಾಣ ಮಾಡುತ್ತಿರುವಾಗಲೇ ಉಪಾಧ್ಯಕ್ಷ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು, ಚಿಕ್ಕಣ್ಣ ಜೊತೆ ಅದ್ಭುತವಾಗಿ ಅಭಿನಯಿಸಿ ಹಿರಿತೆರೆಗೂ ಸೈ ಅನಿಸಿಕೊಂಡಿದ್ದರು.
ಇದೀಗ ಟಗರು ಪಲ್ಯ ಸಿನಿಮಾ ನಾಯಕ ನಾಗಭೂಷಣ್ ಜೊತೆ ವಿದ್ಯಾಪತಿ ಸಿನಿಮಾಕ್ಕೆ ನಾಯಕಿಯಾಗಿ ಮಲೈಕಾ ನಟಿಸುತ್ತಿದ್ದಾರೆ. ಇದು ಮಲೈಕಾ ಎರಡನೇ ಸಿನಿಮಾ ಆಗಿದ್ದು, ಮತ್ತಷ್ಟು ಅವಕಾಶಗಳು ಸಿಗೋ ಭರವಸೆ ಹೊಂದಿದ್ದಾರೆ.
ಮಲೈಕಾ ಇದೀಗ ನೀತಾ ಶಂಕರ್ ಬಳಿ ಹೊಸದಾಗಿ ಫೋಟೊ ಶೂಟ್ (Photoshoot) ಮಾಡಿಸಿದ್ದು, ಟ್ರೆಡಿಷನಲ್ ಸೀರೆಗೆ ಮಾಡರ್ನ್ ಟಚ್ ಕೊಟ್ಟು ಸೀರೆಯುಟ್ಟಿದ್ದು, ಮಲೈಕಾ ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ. ನೀತಾ ಶಂಕರ್ ಈ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಲೈಕಾ ಐವರಿ ಬಣ್ಣದ ಗೋಲ್ಡನ್ ಡಿಸೈನ್ ಇರುವಂತಹ ಹಾಗೂ ಕೆಂಪು ಬಣ್ಣದ ಬಾರ್ಡರ್ ಇರುವಂತಹ ಸೀರೆಯುಟ್ಟಿದ್ದು, ಅದಕ್ಕೆ ಕೆಂಪು ಬಣ್ಣದ ಬ್ಯಾಕ್ ಲೆಸ್ ಟ್ಯೂಬ್ ಬ್ಲೌಸ್ ಧರಿಸಿದ್ದು, ಟ್ರೆಡಿಶನಲ್ ಜೊತೆಗೆ ಮಾರ್ಡನ್ ಲುಕ್ ನಲ್ಲಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.
ತಮ್ಮ ಈ ಲುಕ್ ಸುಂದರವಾಗಿ ಕಾಣೋದಕ್ಕೆ ಮಲೈಕಾ ಶ್ರೀಕೃಷ್ಣ ಡೈಮಂಡ್ಸ್ ಜ್ಯುವೆಲ್ಲರಿ ಅವರ ಗ್ರೀನ್ ಪರ್ಲ್ ಮತ್ತು ಸ್ಟೋನ್ಸ್ ಹೊಂದಿರುವ ಹೆವಿ ಚಾಕರ್, ಜೊತೆಗೆ ಹಸಿರು ಬಣ್ಣದ ಜುಮುಕಿ ಮತ್ತು ಹಸಿರು ಮುಂದಾಲೆ ಧರಿಸಿದ್ದು, ಜೀವಿತಾ ಮೇಕಪ್ ಮಾಡಿದ್ದು, ವಿಭಿನ್ನ ಡಿಸೈನರ್ ಔಟ್ ಫಿಟ್ ಧರಿಸಿದ್ದಾರೆ.
ಅಭಿಮಾನಿಗಳು ಸಹ ಮಲೈಕಾ ಈ ಟ್ರೆಂಡಿ ಲುಕ್ ಗೆ ಮನಸೋತಿದ್ದು, ದೇವರು ಬಹಳ ಪುರುಸೋತಲ್ಲಿ ಕೆತ್ತಿದಂತಹ ಅಂದ ಇದು, ಬೋಲ್ಡ್ ಆಂಡ್ ಬ್ಯೂಟಿಫುಲ್, ಸ್ಟನ್ನಿಂಗ್ ಲುಕ್ (stunning look) ಎಂದು ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.