ಕಿರುತೆರೆಯ ನಿಮ್ಮ ಫೆವರಿಟ್ ನಟಿಯರು, ಉದ್ಯಮಿಗಳೂ ಕೂಡ ಹೌದು ಗೊತ್ತಾ?

First Published | Mar 28, 2023, 3:27 PM IST

ನಿಮ್ಮ ನೆಚ್ಚಿನ ಸೀರಿಯಲ್ ತಾರೆಯರು ಕೇವಲ ನಟಿಯರಾಗಿ ಮಾತ್ರ ಗುರುತಿಸಿಕೊಂಡಿಲ್ಲ, ಬದಲಾಗಿ ಅವರು ಬ್ಯುಸಿನೆಸ್ ವಿಮೆನ್‌ಗಳಾಗಿಯೂ ಗುರುತಿಸಿಕೊಂಡಿದ್ದಾರೆ. ಹೌದು ದೀಪಿಕಾ ದಾಸ್, ಶ್ವೇತಾ ಚಂಗಪ್ಪಾ ಮೊದಲಾದ ನಟಿಯರು… ನಟನೆಯ ಜೊತೆ ಜೊತೆಗೆ, ಬೇರೆ ಬ್ಯುಸಿನೆಸ್ ಗಳನ್ನೂ ಸಹ ಮಾಡ್ತಾರೆ. ಅವರ ಬಗ್ಗೆ ಸ್ವಲ್ಪ ತಿಳಿಯೋಣ. 

ಶ್ವೇತಾ ಚಂಗಪ್ಪ (Shwetha Chengappa)
ಕನ್ನಡ ಕಿರುತೆರೆಯ ಫೆವರಿಟ್ ನಟಿ ಮತ್ತು ನಿರೂಪಕಿಯರಲ್ಲಿ ಪ್ರಮುಖ ಸ್ಥಾನ ಪಡೆದಿರುವ ನಟಿ ಅಂದ್ರೆ ಶ್ವೇತಾ ಚಂಗಪ್ಪ. ಸದ್ಯ ನಿರೂಪಣೆಯಲ್ಲೂ, ಚಿತ್ರರಂಗದಲ್ಲೂ ಬ್ಯುಸಿಯಾಗಿರುವ ಶ್ವೇತಾ ತನ್ನದೇ ಆದ ಡಿಸೈನರ್ ಬಟ್ಟೆ ಬ್ರಾಂಡ್ ಅನ್ನು ಸಹ ಹೊಂದಿದ್ದಾರೆ.

ಶ್ರುತಿ ನಾಯ್ಡು (Shruthi Naidu)
ಕನ್ನಡ ಕಿರುತೆರೆಯಲ್ಲಿ ನಟಿಯಾಗಿ, ನಿರ್ದೇಶಕಿಯಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡವರು ಶ್ರುತಿ ನಾಯ್ಡು, ಇವರು ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಮಿಂಚಿದ್ದಾರೆ. ನಿಜಾ. ಇದರ ಜೊತೆಗೆ ಶ್ರುತಿ ನಾಯ್ಡು ಅವರು ಮೈಸೂರಿನಲ್ಲಿ ರೆಸ್ಟೋರೆಂಟ್ ಹೊಂದಿದ್ದಾರೆ .

Tap to resize

ಶ್ವೇತಾ ಆರ್ ಪ್ರಸಾದ್  (Shwetha Prasad)
ಕನ್ನಡ ಕಿರುತೆರೆಯ ಫೆವರಿಟ್ ನಟಿ ಶ್ವೇತಾ ಅಂದ್ರೆ ತಪ್ಪಾಗಲ್ಲ. ಶ್ರೀರಸ್ತು ಶುಭಮಸ್ತು ಮತ್ತು ರಾಧಾ ರಮಣ ಸೀರಿಯಲ್ ಮೂಲಕ ಇವರು ಜನಮನ ಗೆದ್ದಿದ್ದರು. ಶ್ವೇತಾ ನೈಸರ್ಗಿಕ ಮತ್ತು ಸಾವಯವ ಉತ್ಪನ್ನಗಳ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಸಮಾಜ ಸೇವೆಯಲ್ಲೂ ಸಹ ಇವರು ಬ್ಯುಸಿಯಾಗಿದ್ದಾರೆ. 

ಚೈತ್ರ ವಾಸುದೇವ್ (Chaitra Vasudevan)
ನಟಿ-ನಿರೂಪಕಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ವಾಸುದೇವ್ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಹೊಂದಿದ್ದಾರೆ. ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ಈ ಚೆಲುವೆ, ತನ್ನ ಬ್ಯುಸಿನೆಸ್ ಬಗ್ಗೆ ಅಲ್ಲಿಯೇ ಹೇಳಿಕೊಂಡಿದ್ದರು. ಇವರು ನಟನೆ, ನಿರೂಪಣೆ ಮತ್ತು ಬ್ಯುಸಿನೆಸ್ ಜೊತೆಯಾಗಿ ಮ್ಯಾನೇಜ್ ಮಾಡುತ್ತಿದ್ದಾರೆ. 

ದೀಪಿಕಾ ದಾಸ್ (Deepika das)
ದೀಪಿಕಾ ದಾಸ್ ನೋಡಿದಾಗಲೇ ಅವರ ಫ್ಯಾಷನ್ ಸೆನ್ಸ್ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಈ ನಟಿ ವಿಭಿನ್ನ ಡ್ರೆಸ್ಸಿಂಗ್ ಮೂಲಕವೇ ಫ್ಯಾಷನಿಸ್ಟಾ ಆಗಿದ್ದಾರೆ. ಉನ್ನತ ಫ್ಯಾಷನ್ ಸ್ಟೇಟ್ ಮೆಂತ್ ಗೆ ಹೆಸರುವಾಸಿಯಾದ ದೀಪಿಕಾ ತನ್ನದೇ ಆದ ಫ್ಯಾಷನ್ ಲೇಬಲ್ ಕೂಡ ಹೊಂದಿದ್ದಾರೆ.

ಮಾನಸಾ ಜೋಶಿ (Manasa joshi)
ಮಹಾದೇವಿ ಮತ್ತು ಮಂಗಳ ಗೌರಿ ಮದುವೆ ಸೀರಿಯಲ್ ನಲ್ಲಿ ನಟಿಸಿದ ನಟಿ ಮಾನಸ ಜೋಶಿ ಸದ್ಯ ತಾಯ್ತನದ ಸಂಭ್ರಮ ಅನುಭವಿಸುತ್ತಿದ್ದಾರೆ. ವೃತ್ತಿಪರ ಶಾಸ್ತ್ರೀಯ ನೃತ್ಯಗಾರ್ತಿಯೂ ಆಗಿರುವ ಮಾನಸಾ ಜೋಶಿ ನೃತ್ಯ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. 

ಶಿಲ್ಪಾ ಶೆಟ್ಟಿ (Shilpa Shetty)
ಕನ್ನಡದ ಅನೇಕ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲೇ ಹೆಚ್ಚಾಗಿ ಮಿಂಚಿದ ನಟಿ ಶಿಲ್ಪಾ ಶೆಟ್ಟಿ ಪುತ್ತೂರ್.  ಮರಳಿ ಮನಸಾಗಿದೆ ಸೀರಿಯಲ್ ನ ನಟಿ ಶಿಲ್ಪಾ ಶೆಟ್ಟಿ ತಮ್ಮದೇ ಆದ ಡಿಸೈನರ್ ಆಭರಣ ಬ್ರಾಂಡ್ ಹೊಂದಿದ್ದಾರೆ ಅನ್ನೋದು ನಿಮಗೆ ಗೊತ್ತಾ? 

Latest Videos

click me!