ವರ್ಷಾಂತ್ಯಕ್ಕೆ ಮನೆಗೆ ಲಕ್ಷ್ಮಿಯ ಬರ ಮಾಡಿಕೊಂಡ ಮಹಾಭಾರತದ ಅರ್ಜುನ

First Published | Jan 1, 2024, 12:08 PM IST

ಮಹಾಭಾರತ ಸೀರಿಯಲ್‌ನಲ್ಲಿ ಅರ್ಜುನನ ಪಾತ್ರ ಮಾಡಿದ ಹಿಂದಿ ಸೀರಿಯಲ್ ನಟ ಶಹೀರ್ ಶೇಖ್ ಅವರನ್ನು ಯಾರು ಮರೆಯುವಂತೆಯೇ ಇಲ್ಲ, ಅವರೀಗ ವರ್ಷಾಂತ್ಯಕ್ಕೆ ಮತ್ತೊಂದು ಹೆಣ್ಣು ಮಗುವಿಗೆ ಪೋಷಕರಾಗಿದ್ದು, ಅವರ ಪತ್ನಿ ರುಚಿಕಾ ಕಪೂರ್ ಅವರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೋವಿಡ್‌ ಟೈಮ್‌ನಲ್ಲಿ ಟಿವಿಯಲ್ಲಿ ಬರುತ್ತಿದ್ದ ಮಹಾಭಾರತ ಸೀರಿಯಲ್ ಯಾರಿಗೆ ಗೊತ್ತಿಲ್ಲ ಹೇಳಿ. ಕುತೂಹಲಕಾರಿಯಾಗಿ ಮೂಡಿ ಬರುತ್ತಿದ್ದ ಈ ವೀಡಿಯೋದ ಪ್ರತಿ ಎಪಿಸೋಡ್ ಕೂಡ ನೋಡುಗರನ್ನು ಕಾಯುವಂತೆ ಮಾಡುತ್ತಿತ್ತು.

ಈ ಮಹಾಭಾರತ ಸೀರಿಯಲ್‌ನಲ್ಲಿ ಅರ್ಜುನನ ಪಾತ್ರ ಮಾಡಿದ ಹಿಂದಿ ಸೀರಿಯಲ್ ನಟ ಶಹೀರ್ ಶೇಖ್ ಅವರನ್ನು ಯಾರು ಮರೆಯುವಂತೆಯೇ ಇಲ್ಲ, ತಮ್ಮ ನಟನೆ ಹಾಗೂ ಸೌಂದರ್ಯದಿಂದ ಸೀರಿಯಲ್ ವೀಕ್ಷಕರನ್ನು ಅತೀಯಾಗಿ ಸೆಳೆದವರು ಶಹೀರ್ ಶೇಖ್. 

Tap to resize

ಹಿಂದಿಯ ಹಲವರು ಸೀರಿಯಲ್‌ಗಳಲ್ಲಿ ನಟನೆಯ ಜೊತೆ ಜೊತೆಗೆ ಹಲವು ಆಲ್ಬಂಗಳಲ್ಲೂ ನಟಿಸಿರು ಶಹೀರ್ ಶೇಖ್ ಅವರು ಈಗ ವರ್ಷಾಂತ್ಯದಲ್ಲಿ 2ನೇ ಮಗುವಿಗೆ ಪೋಷಕರಾಗಿದ್ದು, ಶಹೀರ್ ಶೇಖ್ ಪತ್ನಿ ರುಚಿಕಾ ಕಪೂರ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡಿದ್ದಾರೆ. 

ಭಾರತೀಯ ಬೆಳ್ಳಿ ತೆರೆಯ ಓರ್ವ ಲೀಡಿಂಗ್ ನಾಯಕರಲ್ಲಿ ಒಬ್ಬರಾಗಿರುವ ಶಹೀರ್ ಶೇಖ್ ಅವರು 2021ರ ಮಾರ್ಚ್‌ನಲ್ಲಿ ತಮ್ಮ ಬಹುಕಾಲದ ಗೆಳತಿ ರುಚಿಕಾ ಕಪೂರ್ ಅವರನ್ನು ಮದುವೆಯಾಗಿದ್ದರು.  ಹಾಗೂ 2022ರಲ್ಲಿ ತಮ್ಮ ಮೊದಲ ಮಗಳು ಅನಯಾಳನ್ನು ಬರಮಾಡಿಕೊಂಡಿದ್ದರು. 

ತಮ್ಮ ವೈಯಕ್ತಿಕ ಜೀವನವನ್ನು ಬಹುತೇಕ ಕ್ಯಾಮರಾ  ಕಣ್ಣುಗಳಿಂದ ದೂರವೇ ಇಟ್ಟಿರುವ ಈ ಜೋಡಿ ಜೀವನವನ್ನು ತಮ್ಮಿಷ್ಟದಂತೆ ಎಂಜಾಯ್ ಮಾಡುತ್ತಿದ್ದಾರೆ. ಆದರೂ ಈ ಬಾರಿ ಶಹೀರ್ ಪತ್ನಿ ರುಚಿಕಾ ಅವರು ತಮ್ಮ ಬದುಕಿಗೆ ಆಗಮಿಸಿದ ಹೊಸ ಅತಿಥಿಯ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. 

ಡಿಸೆಂಬರ್ 31 ರಂದು  ಮಕ್ಕಳಿಬ್ಬರ ಫೋಟೋಗಳನ್ನು ಹಾಕಿ ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ರುಚಿಕಾ ಕಪೂರ್‌, ಸಹೋದರಿಯನ್ನು ಹೊಂದಲು ಮುಂದಿನ ಉತ್ತಮ ವಿಷಯವೆಂದರೆ ___ ನಿಜವಾಗಿ ಏನೂ ಇಲ್ಲ. ಯಾವುದನ್ನೂ ಹೋಲಿಸುವುದಿಲ್ಲ. ಒಂದೇ ಬಾಳಿನಲ್ಲಿರುವ ಎರಡು ಬಟಾಣಿಗಳು ಅನಯಾ ಮತ್ತು ಕುದ್ರತ್ಎಂದು ಬರೆದುಕೊಂಡಿದ್ದಾರೆ ರುಚಿಕಾ ಕಪೂರ್.  ಈ ಫೋಟೋದಲ್ಲಿ ದೊಡ್ಡ ಮಗಳು ಅನಯಾ ಪುಟ್ಟ ತಂಗಿಯನ್ನು ಮುದ್ದಿಸುವುದನ್ನು ಕಾಣಬಹುದಾಗಿದೆ. 

ಇನ್ನು ಶಹೀರ್ ಶೇಖ್ ಅವರ ಬಗ್ಗೆ ಹೇಳುವುದಾದರೆ ಅವರು ಶೀಘ್ರದಲ್ಲೇ ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲಿದ್ದಾರೆ. ಡು ಪಟ್ಟಿ ಎಂಬ ಸಿನಿಮಾದಲ್ಲಿ ಅವರು ನಟಿ ಕೃತಿ ಸನನ್ ಜೊತೆ ನಟಿಸಲಿದ್ದಾರೆ.

ಈ ಸಿನಿಮಾದಲ್ಲಿ ಕಾಜೋಲ್ ಕೂಡ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾ ಕತೆಯನ್ನು ಕನ್ನಿಕಾ ದಿಲ್ಲಾನ್ ಅವರು ಬರೆದಿದ್ದಾರೆ ಶಶಾಂಕ್ ಚತುರ್ವೇದಿ ಸಿನಿಮಾದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಇನ್ನುಳಿದಂತೆ ಶಹೀರ್ ಶೇಖ್ ಅವರು ಹಿಂದಿಯ ಕುಛ್ ರಂಗ್ ಪ್ಯಾರ್ ಕೇ ಐಸಾ ಬಿ, ಮಹಾಭಾರತ್, ನವ್ಯಾ, ಬೆಸ್ಟ್ ಆಫ್ ಲಕ್ ನಿಕ್ಕಿ, ಕ್ಯಾ ಮಸ್ತ್ ಹೈ ಲೈಫ್, ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. 

ಇನ್ನು ಪತ್ನಿ ರುಚಿಕಾ ಬಗ್ಗೆ ಹೇಳುವುದಾದರೆ ಅವರೊಬ್ಬ ಸಿನಿಮಾ ನಿರ್ಮಾಪಕಿ ಹಾಗೂ ಮಾರ್ಕೆಟಿಂಗ್ ಮುಖ್ಯಸ್ಥೆಯಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರು ಬಾಲಾಜಿ ಮೋಷನ್ ಪಿಕ್ಚರ್‌ನ ಉಪ ಮುಖ್ಯಸ್ಥೆಯಾಗಿಇಯೂ ಕಾರ್ಯ ನಿರ್ವಹಿಸಿದ್ದಾರೆ.

ಉಡ್ತಾ ಪಂಜಾಬ್, ಏಕ್ ವಿಲನ್‌ ರಿಟರ್ನ್, ದೊಬಾರ ಮುಂತಾದ ಸಿನಿಮಾಗಳಿಗೆ ಸಹ-ನಿರ್ದೇಶನವನ್ನು ಕೂಡ ಮಾಡಿದ್ದಾರೆ. ಸಿನಿಮಾಗಾಗಿ ಅವರು ಗರ್ಭಾವಸ್ಥೆ ಹಾಗೂ ಬಾಣಂತಿಯಾಗಿದ್ದ ಸಮಯದಲ್ಲೂ ಕೆಲಸ ಮಾಡಿದ್ದಾರೆ. 

Latest Videos

click me!