ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ತುಂಬು ಕುಟುಂಬದ ಧಾರಾವಾಹಿ ಬೃಂದಾವನ (Brundavana Serial). ಇದರಲ್ಲಿ ನಾಯಕಿಯಾಗಿ, ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿತ್ತಿರುವ ಅಮೂಲ್ಯ ಭಾರಧ್ವಜ್ ನಿಜ ಜೀವನದಲ್ಲಿ ಸಖತ್ ಸ್ಟೈಲಿಶ್ ಆಗಿದ್ದಾರೆ.
ಇತ್ತೀಚೆಗೆ ಅಮೂಲ್ಯ (Amulya Bharadwaj) ತಮ್ಮ ಔಟಿಂಗ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಇವರೇನಾ ಬೃಂದಾವನದ ಪುಷ್ಪಾ ಎನ್ನುವಷ್ಟು ಮಾಡರ್ನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಅಮೂಲ್ಯ.
ಕೆಂಪು ಬಣ್ಣದ ಆಫ್ ಶೋಲ್ಡರ್ ಕ್ರಾಪ್ ಟಾಪ್ ಜೊತೆಗೆ ಕಪ್ಪು ಬಣ್ಣದ ಮಿನಿ ಸ್ಕರ್ಟ್ ಧರಿಸಿ ಫ್ರೆಂಡ್ಸ್ ಜೊತೆ ಔಟಿಂಗ್ ಮಾಡಿದ್ದಾರೆ. ಅಮೂಲ್ಯ ಜೊತೆ ಅವರ ಗೆಳತಿ ಜೊತೆಗೆ ಲಕ್ಷಣ ಸೀರಿಯಲ್ ನಾಯಕಿಯೂ ಆಗಿರುವ ವಿಜಯಲಕ್ಷ್ಮಿ ಸಹ ಕಾಣಿಸಿಕೊಂಡಿದ್ದಾರೆ.
ಈಗ ಬೃಂದಾವನ ಈ ಹಿಂದೆ ದಾಸ ಪುರಂದರ ಧಾರಾವಾಹಿಯಲ್ಲಿ (serial) ನಟಿಸಿದ ಅಮೂಲ್ಯ ಭಾರಧ್ವಜ್ ಎರಡರಲ್ಲೂ ಹಳ್ಳಿ ಹುಡುಗಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಆದರೆ ಇವರು ನಿಜ ಜೀವನದಲ್ಲಿ ಸಖತ್ ಸ್ಟೈಲಿಶ್ ಆಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ (social media) ಆಕ್ಟೀವ್ ಆಗಿರುವ ಅಮೂಲ್ಯ, ಹೆಚ್ಚಾಗಿ ಫ್ರೆಂಡ್ಸ್ ಜೊತೆ ಪಾರ್ಟಿ ಔಟಿಂಗ್, ಟ್ರಾವೆಲ್ ಮಾಡುತ್ತಲೇ ಇರುತ್ತಾರೆ, ಜೊತೆಗೆ ತಾವು ರೀಲ್ ಗಿಂತ ರಿಯಲ್ ಲೈಫಲ್ಲಿ ತುಂಬಾನೆ ಬೇರೆ ಅನ್ನೋದನ್ನು ತಮ್ಮ ಗ್ಲಾಮರ್ ಸ್ಟೈಲ್ ಮೂಲಕ ತೋರಿಸುತ್ತಿದ್ದಾರೆ.
ಶಾಂತಂ ಪಾಪಂ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಅಮೂಲ್ಯ ನಂತರ ದಾಸ ಪುರಂದರ ಧಾರಾವಾಹಿಯಲ್ಲಿ ನಾರಾಯಣನ ಪತ್ನಿಯ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ನಂತರ ಹಲವಾರು ಆಡಿಶನ್ ಗಳಲ್ಲಿ ರಿಜೆಕ್ಟ್ ಆಗಿದ್ದ ಇವರು ಇದೀಗ ವೃಂದಾವನದಲ್ಲಿ ನಟಿಸುತ್ತಿದ್ದಾರೆ.
ಬೃಂದಾವನ ಸೀರಿಯಲ್ ನಲ್ಲಿ ತಾನು ಇಷ್ಟಪಟ್ಟು ಮದುವೆಯಾದ ಹುಡುಗ ತನ್ನನ್ನು ಇಷ್ಟಪಡೋದಿಲ್ಲ ಎನ್ನುವ ನೋವನ್ನು ಸಹಿಸಿಕೊಂಡು, ಅವನ ಒಳಿತಿಗಾಗಿ ಹಾರೈಸುವ ಮುಗ್ಧ ಹುಡುಗಿಯಾಗಿ ಅಮೂಲ್ಯ ಅಭಿನಯಿಸುತ್ತಿದ್ದಾರೆ.