ರೆಡ್‌ಬುಲ್‌ನೊಂದಿಗೆ ಕಾಣಿಸಿಕೊಂಡ ಸೋನುಗೌಡ: ಗೂಳಿ ಗುಮ್ತದೆ ಹುಷಾರು ಎಂದ ಫ್ಯಾನ್ಸ್!

First Published | Dec 31, 2023, 10:47 PM IST

ಬೆಂಗಳೂರು (ಡಿ.31): ಬಿಗ್‌ಬಾಸ್‌ ಒಟಿಟಿ ಸ್ಪರ್ಧಿ ಸೋನುಗೌಡ ಎಲ್ಲರಿಗೂ ಚಿರಪರಿಚಿತರೇ ಆಗಿದ್ದಾರೆ. ಇನ್ನುಬಿಗ್‌ಬಾಸ್‌ನಲ್ಲಿ ತಮ್ಮ ಜೀವನದ ಕೆಲವು ಕಹಿ ಘಟನೆಗಳನ್ನು ಹಂಚಿಕೊಂಡು ನಿರಾಳವಾಗಿರುವ ಸೋನು, ಸಾಮಾಜಿಕ ಜಾಲತಾಣದಲ್ಲಿ ಮತ್ತೆ ತಮ್ಮ ಹಳೆಯ ಖದರ್‌ಗೆ ವಾಪಸ್ ಮರಳಿದ್ದಾಳೆ. ಹೊಸ ವರ್ಷಕ್ಕೆ ರೆಡ್‌ಬುಲ್‌ ಎನರ್ಜಿ ಡ್ರಿಂಕ್‌ ಬಾಟಲಿಯೊಂದಿಗೆ ಕಾಣಿಸಿಕೊಂಡಿದ್ದಾಳೆ.

ಬಿಗ್‌ಬಾಸ್‌ ರಿಯತಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವುದನ್ನೂ ಮುನ್ನವೇ ಸೋನುಗೌಡ ಅವರು ತಮ್ಮ ಸೋಷಿಯಲ್‌ ಮಿಡಿಯಾ ರೀಲ್ಸ್‌ಗಳಿಂದಲ ಭಾರಿ ಫೇಮಸ್ ಆಗಿದ್ದರು. ಹೀಗಾಗಿ, ಸಾಮಾನ್ಯ ವರ್ಗದ ಅಡಿಯಲ್ಲಿ ಅವರನ್ನು ಬಿಗ್‌ಬಾಸ್‌ ಶೋಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು.
 

ರಾಜ್ಯಾದ್ಯಂತ ಸೋನು ಗೌಡ ಅವರು ಎಲ್ಲರಿಗೂ ಪರಿಚಿತ. ಬಿಗ್​ಬಾಸ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದ ಸೋನು ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಅವರ ಫೊಟೋಸ್ ವೈರಲ್ ಆಗುತ್ತಿವೆ.

Tap to resize

ಸೋನು ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ವೆಕೇಷನ್, ಟ್ರಿಪ್ ಸೇರಿದಂತೆ ಹಲವಾರು ಕಂಟೆಂಟ್​ಗಳನ್ನು ನಟಿ ಶೇರ್ ಮಾಡುತ್ತಲೇ ಇರುತ್ತಾರೆ. ಈಗ ರೆಡ್‌ಬುಲ್‌ ಡ್ರಿಂಕ್ಸ್‌ ಹಿಡಿದುಕೊಂಡು ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಅವರ ಲುಕ್ ಈಗ ಎಲ್ಲೆಡೆ ವೈರಲ್ ಆಗಿದೆ.
 

ಖಾಸಗಿ ವಿಲೇಜ್‌ ರೆಸಾರ್ಟ್‌ನಲ್ಲಿ ಕಾಣಿಸಿಕೊಂಡಿರುವ ರೀಲ್ಸ್‌ ರಾಣಿ ಸೋನುಗೌಡ ಅವರು ತಮ್ಮ ಹಿಂದಿನ ಕಟ್ಟಡದ ಗೋಡೆಗೆ ಬಿಡಿಸಿರುವ ಚಿತ್ರ ಯಾರದ್ದು? ಎಂದು ಕೇಳಿದ್ದಾರೆ.

ರೆಸಾರ್ಟ್‌ನ ಕಟ್ಟಡದ ಕೋಣೆಯ ಮೇಲೆ ಕಿಚ್ಚ ಸುದೀಪ್‌ ಅವರು ಜಾಹೀರಾತು ನೀಡಿರುವ ಚಿತ್ರವೊಂದನ್ನು ಬಿಡಿಸಿದ್ದಾರೆ. ಈ ಚಿತ್ರದ ಮುಂದೆ ಹಾಡೊಂದಕ್ಕೆ ಸೋನುಗೌಡ ರೀಲ್ಸ್‌ ಮಾಡಿದ್ದಾರೆ.
 

ಸೋನು ಜೀನ್ಸ್‌ ಪ್ಯಾಂಟ್ ಮತ್ತು ಪಿಂಕ್‌ ಕಲರ್ ಟೀ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಆಕರ್ಷಕವಾದ ಫೋಟೋಶೂಟ್ ಮೂಲಕ ಇದೀಗ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.
 

ಸಿಲ್ವರ್-ನೀಲಿ ಕ್ಯಾನ್‌ನಲ್ಲಿ ಮಾರಾಟವಾಗುವ ಎನರ್ಜಿ ಡ್ರಿಂಕ್‌ ಎಂದು ಕರೆಯಲ್ಪಡುವ ರೆಡ್ ಬುಲ್ ಅನ್ನು ಹಿಡಿದು ಇದು ತನಗಿಷ್ಟ ಎಂದು ಮುತ್ತಿಡುತ್ತಾ ಪೋಸ್‌ ಕೊಟ್ಟಿದ್ದಾಳೆ. ಆದರೆ, ಇದಕ್ಕೆ ಅಭಿಮಾನಿಗಳು ರೆಡ್‌ಬುಲ್‌ ನಿಮಗೆ ಗುಮ್ಮಬಹುದು ಹುಷಾರು ಎಂದು ಹೇಳಿದ್ದಾರೆ.
 

ಸೋನು ಶ್ರೀನಿವಾಸ್‌ ಗೌಡ ಅವರು ತಮ್ಮ ಬೋಲ್ಡ್‌ ಪೋಟೋಗಳು, ವಿಡಿಯೋಗಳ ಮೂಲಕವೇ ಇನ್‌ಸ್ಟಾಗ್ರಾಂನಲ್ಲಿ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಹೊಂದಿದ್ದಾರೆ.
 

ಟ್ರೋಲ್‌ ಮಾಡುವವರ ಬಗ್ಗೆ ಆಗಾಗ ಬೇಸರ ವ್ಯಕ್ತಪಡಿಸುವ ಸೋನುಗೌಡ ಅವರು, ಟ್ರೋಲ್ ಮಾಡಿ ಆದರೆ ತೀರಾ ಮನೆ ಮಂದಿ, ಅಪ್ಪ, ಅಮ್ಮನನ್ನು ಹಿಡಿದುಕೊಂಡು ಮತನಾಡಬೇಡಿ. ಅವರಿಗೂ ನೋವಾಗುತ್ತದೆ ಎಂದು ಹೇಳಿದ್ದರು.

Latest Videos

click me!