ಬುಲೆಟ್ ಪ್ರಕಾಶ್ ಕಟ್ಟಿಸಿದ್ದ ಐಷಾರಾಮಿ ಮನೆ ಮಾರಿದ ಪುತ್ರ; ಜನರ ಟೀಕೆಗೆ ಉತ್ತರ ಕೊಟ್ಟ ರಕ್ಷಕ್

First Published | Nov 15, 2023, 2:19 PM IST

ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ಟೀಕೆ ಎದುರಿಸುತ್ತಿರುವ ರಕ್ಷಕ್ ಬುಲೆಟ್. ತಂದೆ ಕಟ್ಟಿಸಿರುವ ಮನೆ ಮಾರಾಟ ಮಾಡಲು ಕಾರಣ ಇಲ್ಲಿದೆ.... 

ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿದ್ದಾರೆ. ಎಲಿಮಿನೇಟ್ ಆಗಿ ಹೊರ ಬಂದ ಮೇಲೆ ರಕ್ಷಕ್ ತಂದೆ ಕಟ್ಟಿಸಿರುವ ಮನೆ ಮಾರಿದ್ದಾರೆ ಎಂದು ಟೀಕೆ ಎದುರಾಗುತ್ತಿದೆ. ಅದಕ್ಕೆ ಉತ್ತರ ಕೊಟ್ಟಿದ್ದಾರೆ.

'ನನ್ನ ತಂದೆ ಕಟ್ಟಿಸಿರುವ ಮನೆಯನ್ನು ಮಾರಬೇಕು ಎಂದು ನಿರ್ಧಾರ ಮಾಡಿದ್ದು ನಾನು. ಆ ನಿರ್ಧಾರದ ಬಗ್ಗೆ  ನನಗೆ ಬೇಸರವಿಲ್ಲ. ಮಾರಿದ ಮೇಲೆ ಸರಿ ತಪ್ಪು ಅಂತ ಹೇಳಲು ಆಗಲ್ಲ' ಎಂದು ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಉತ್ತರ ಕೊಟ್ಟಿದ್ದಾರೆ.

Tap to resize

 'ನನ್ನ ಮನೆಯವರು ನಾನು ಸೇರಿ ನಿರ್ಧಾರ ಮಾಡಿರುವುದು. ಕೆಲವರು ಸುಮ್ಮನೆ ಕಾಮೆಂಟ್ ಮಾಡುತ್ತಾರೆ. ಅಪ್ಪನ ನೆನಪುಗಳು ಆ ಮನೆಯಲ್ಲಿ ತುಂಬಾ ಇದೆ ಅದು ನಮ್ಮನ್ನು ಕಾಡುತ್ತಿತ್ತು ಅದಿಕ್ಕೆ ಮನೆ ಮಾರಿ ಅದರಲ್ಲಿ ಬರುವ ಹಣ ಬಳಸಿಕೊಂಡು ಅಕ್ಕನ ಮದುವೆ ಮಾಡಿ ಇನ್ನು ಉಳಿದ ಹಣದಲ್ಲಿ ಬಾಡಿಗೆ ಬರುವಂತ ಜಾಗ ಖರೀದಿ ಮಾಡಿರುವೆ.

ಅಪ್ಪ ಮಾಡಿದ ಮನೆಯಲ್ಲಿ ನಾವು ಒಬ್ಬರೇ ವಾಸ ಮಾಡಬಹುದಿತ್ತು ಆದರೆ ಈಗ ನಾನು ಬಾಡಿಗೆ ಬರುವಂತೆ ಮಾಡಿಕೊಂಡಿರುವೆ. ನನ್ನ ಅಕ್ಕನ ಮದುವೆಗೆ ಯಾರೂ ದುಡ್ಡು ಕೊಟ್ಟಿಲ್ಲ. 

ಅದೆಲ್ಲಾ ಲೂಸ್ ಟಾಕ್ಸ್‌. ಕಾಟನ್‌ ಪೇಟೆಯಲ್ಲಿ ಇರುವ ಮನೆಯಿಂದ ಬಾಡಿಗೆ ಬರುವಂತೆ ಮಾಡಿಕೊಂಡಿರುವೆ. ಅಕ್ಕ ಮದುವೆ ಸಮಯದಲ್ಲಿ ಟಾರ್ ತೆಗೆದುಕೊಂಡೆ. 

ನಮಗೂ ಕಷ್ಟ ಏನೆಂದರೆ ಗೊತ್ತು ಆದರೆ ಜೀವನದ ಅನುಕೂಲಕ್ಕೆ ಏನು ಬೇಕು ಅದನ್ನು ಮಾಡಿಕೊಂಡಿರುವೆ. ಜನರು ಶೋಕಿ ಮಾಡುತ್ತಾರೆ ಎನ್ನುತ್ತಾರೆ...ಆದರೆ ನಮ್ಮ ಕಷ್ಟ ನಮಗೆ ಗೊತ್ತು. ಅಪ್ಪ ಕಷ್ಟ ಪಟ್ಟು ಮಾಡಿರುವ ಮನೆ ಮಾರಲು ನಾನು ಯಾರೂ ಅಲ್ಲ ಆದರೆ ಅಕ್ಕ, ಅಮ್ಮ ಮತ್ತು ನಾನು ಒಟ್ಟಿಗೆ ನಿರ್ಧಾರ ಮಾಡಿದ್ದು. 

ಆ ಮನೆಯಲ್ಲಿ ಲಿಫ್ಟ್‌ ಇದ್ದು, ಡ್ಯಾನ್ಸ್‌ ರೂಮ್‌ ಇತ್ತು ಮತ್ತು ಜಿಮ್‌ ರೂಮ್ ಎಲ್ಲವೂ ಇತ್ತು ಅದನ್ನು ಮಾರಲು ಕಷ್ಟ ಆಯ್ತು ಆದರೂ ಮಾಡಲೇಬೇಕು. 

ಹುಟ್ಟಿದ ಮೇಲೆ ಸಾವು ಕಚಿತಾ ಇವತ್ತು ಸಾಯುತ್ತೀನೋ ಗೊತ್ತಿಲ್ಲ ಖುಷಿಯಾಗಿ ಬದುಕಬೇಕು ಎಂದು ಯಾವುದಕ್ಕೂ ಲೆಕ್ಕಚಾರ ಮಾಡದೆ ಎಂಜಾಯ್ ಮಾಡಿದ್ದಾರೆ. ಅಪ್ಪ ರಾಯಲ್ ಆಗಿ ಬದುಕಿದ್ದರು ಹಾಗೇ ನಮಗೂ ಬದುಕು ಕೊಟ್ಟಿದ್ದಾರೆ. ಅದರ ಬಗ್ಗೆ ನಮಗೆ ಖುಷಿಯಾಗಿ ಬದುಕಿದ್ದೀವಿ. 

Latest Videos

click me!