Bollywood Actor Ram Kapoor: ಈ ಹಿಂದೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದ ಖ್ಯಾತ ನಟ ರಾಮ್ ಕಪೂರ್ ಈ ಬಾರಿ 'ಲಾಕ್ ಅಪ್ ಸೀಸನ್ 2' (Lock Upp Season 2) ರಿಯಾಲಿಟಿ ಶೋನಲ್ಲಿ ಕೂಡ ಮಾತನಾಡಿದ್ದಾರೆ. ಇದನ್ನು ನೋಡಿ ಅನೇಕರು ಬೇಸರ ಹೊರಹಾಕಿದ್ದಾರೆ.
ಈ ಹಿಂದೆ, “ಅವರು ನನ್ನ ಕಣ್ಣಿಗೆ ಕಾಣಿಸುವಾಗ, ನಾನು ನೋಡದೆ ಇರಲು ಹೇಗೆ ಸಾಧ್ಯ? ನನಗೆ ಆನೆಯಿಂದ ಗ್ಯಾಂಗ್ ರೇಪ್ ಆಗೋ ಥರ ನೀನು ಮಾಡ್ತಿದ್ದೀಯಾ? ಆ ರಾತ್ರಿ ನಿನ್ನನ್ನು ಹೆರುವ ಬದಲು, ನಿನ್ನ ತಾಯಿ ಮಲ*ಗಬೇಕಿತ್ತು” ಎಂದೆಲ್ಲ ಮಾತನಾಡಿದ್ದ ರಾಮ್ ಕಪೂರ್ ಈ ಬಾರಿ, “ಮದುವೆಯಲ್ಲಿ ಮೋಸ ಮಾಡೋದು ತಪ್ಪಲ್ಲ” ಎಂದು ಹೇಳಿದ್ದಾರೆ.
24
ಸಮಸ್ಯೆ ಆಯ್ತು ಎಂದು ಡಿವೋರ್ಸ್ ತಗೋಬೇಡ
ಈ ಶೋನಲ್ಲಿ ರಾಮ್ ಕಪೂರ್, ಆಕಾಂಕ್ಷಾ ಛಮೋಲ ಮಧ್ಯೆ ಮಾತುಕತೆ ನಡೆದಿದೆ. ನಂಬಿಕೆ ಮತ್ತು ಸಂಬಂಧಗಳ ಬಗ್ಗೆ ಚರ್ಚೆ ಆಗುವಾಗ ರಾಮ್ ಕಪೂರ್, "ಮದುವೆ ಜೀವನದಲ್ಲಿ ಒಂದಿಷ್ಟು ಏರಿಳಿತ ಇರುತ್ತದೆ. ಒಂದು ತಪ್ಪು ಆದಾಗ ಡಿವೋರ್ಸ್ ತಗೋಬಾರದು. ನೀವು ನಿಜವಾಗಿಯೂ ಪ್ರೀತಿ ಮಾಡುತ್ತಿದ್ದರೆ, ಡಿವೋರ್ಸ್ ತಗೋಬಾರದು. ಮದುವೆ ಚೆನ್ನಾಗಿರಲು ನಿತ್ಯವೂ ಶ್ರಮ ಹಾಕಬೇಕು, ಒಂದು ಸಂಬಂಧದಲ್ಲಿ ಒಳ್ಳೆಯ ದಿನಗಳೂ ಇರುತ್ತವೆ, ಕೆಟ್ಟ ದಿನಗಳೂ ಇರುತ್ತವೆ. ಕೆಟ್ಟ ಟೈಮ್‌ನಲ್ಲಿ ಏನಾದರೂ ತಪ್ಪಾಗುವುದು. ನಿಮ್ಮ ಸಂಗಾತಿ ಅಥವಾ ಮಕ್ಕಳಿಲ್ಲದೆ ನಿಮಗೆ ಬದುಕಲು ಸಾಧ್ಯವಿಲ್ಲ ಎಂದಾದರೆ, ಕಾಲ ಎಲ್ಲವನ್ನೂ ಗುಣಪಡಿಸುತ್ತದೆ. ಹೀಗಾಗಿ ಸಂಬಂಧ ಮುರಿಯೋದು ಬೇಡ”" ಎಂದು ಹೇಳಿದ್ದರು.
34
ಆಕಾಂಕ್ಷಾ ಛಮೋಲಾ ವಿರೋಧ
ರಾಮ್ ಕಪೂರ್ ಮಾತನ್ನು ಆಕಾಂಕ್ಷಾ ಚಮೋಲಾ ಒಪ್ಪಲಿಲ್ಲ. ಮದುವೆಯಲ್ಲಿ ಮೋಸ ಮಾಡುವುದನ್ನು ಎಂದಿಗೂ 'ಆಕಸ್ಮಿಕವಾಗಿ ನಡೆದ ತಪ್ಪು' ಎಂದು ಹೇಳಲಾಗೋದಿಲ್ಲ ಎಂದಿದ್ದಾರೆ. “ದೈಹಿಕವಾಗಿ ಸಂಬಂಧ ಬೆಳೆಸೋದು ಆಕಸ್ಮಿಕ ತಪ್ಪಲ್ಲ. ಇದು ಎಂದಿಗೂ ತಪ್ಪಾಗಿ ಅಥವಾ ಆಕಸ್ಮಿಕವಾಗಿ ನಡೆಯೋದಿಲ್ಲ. ನೀವು ಇನ್ನೊಬ್ಬರೊಂದಿಗೆ ದೈಹಿಕವಾಗಿ ಹತ್ತಿರ ಆಗುತ್ತಿದ್ದೀರಿ ಎಂದರೆ ತಪ್ಪು ಅಲ್ಲ ಎಂದು ಹೇಳಲು ಹೇಗೆ ಸಾಧ್ಯ? ನಾನು ನಿಮ್ಮನ್ನು ಆಕಸ್ಮಿಕವಾಗಿ ಚಾಕುವಿನಿಂದ ಚುಚ್ಚಿದ ಹಾಗೆ ಅಲ್ಲ" ಎಂದು ಹೇಳಿದ್ದಾರೆ.
ಮದುವೆಯಲ್ಲಿ ದ್ರೋಹ ಬಗೆಯುವುದು ಯಾರೋ ತಿಳಿಯದೆ ಮಾಡುವ ತಪ್ಪಲ್ಲ ಎಂದು ಅನೇಕರು ಹೇಳಿದ್ದಾರೆ. ಒಟ್ಟಿನಲ್ಲಿ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ರಾಮ್ ಕಪೂರ್ ಅವರಿಗೆ ಈಗಾಗಲೇ 52 ವರ್ಷ ವಯಸ್ಸು. ಗೌತಮಿ ಕಪೂರ್ ಜೊತೆ ಮದುವೆಯಾಗಿ 20 ವರ್ಷ ಆಗಿವೆ. ನಟಿ ಆಕಾಂಕ್ಷಾ ಛಮೋಲ ಅವರು ಮದುವೆಯಾಗಿ 10 ವರ್ಷಕ್ಕೆ ಪತಿ ಗೌರವ್ ಖನ್ನಾರಿಂದ ಡಿವೋರ್ಸ್ ತಗೊಳ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.