BBK 11: ಈ ವಾರ ಲಾಯರ್ ಜಗದೀಶ್ ಎಲಿಮಿನೇಟ್ ಗ್ಯಾರಂಟಿ ಅಂತಿದ್ದಾರೆ ಜನ... ನೀವೇನಂತೀರಾ?

Published : Oct 03, 2024, 11:25 AM ISTUpdated : Oct 03, 2024, 05:05 PM IST

ಬಿಗ್ ಬಾಸ್ ಸೀಸನ್ 11 ಆರಂಭವಾದಗಿನಿಂದ ಪೂರ್ತಿಯಾಗಿ ಜಗಳವೇ ತುಂಬಿಹೋಗಿದೆ. ಅದರಲ್ಲೂ ಲಾಯರ್ ಜಗದೀಶ್ ಅವರ ತಮ್ಮ ಮಾತಿನಿಂದಲೇ ಸ್ವರ್ಗ ನರಕದಲ್ಲೆ ಕಿಚ್ಚು ಹಚ್ಚಿದ್ದು, ಈ ವಾರ ಎಲಿಮಿನೇಟ್ ಆಗೋದು ಜಗದೀಶ್ ಎನ್ನುತ್ತಿದ್ದಾರೆ ಜನ.   

PREV
17
BBK 11: ಈ ವಾರ ಲಾಯರ್ ಜಗದೀಶ್ ಎಲಿಮಿನೇಟ್ ಗ್ಯಾರಂಟಿ ಅಂತಿದ್ದಾರೆ ಜನ... ನೀವೇನಂತೀರಾ?

ಬಿಗ್ ಬಾಸ್ ಸೀಸನ್ 11 (Bigg Boss Season 11) ಆರಂಭವಾದಾಗ ಲಾಯರ್ ಜಗದೀಶ್ ಮತ್ತು ಚೈತ್ರಾ ಕುಂದಾಪುರ ಅವರನ್ನ ನೋಡಿ ಜನ ಮೊದಲಿಗೇ ಅಂದುಕೊಂಡಿದ್ದರು ಗ್ಯಾರಂಟಿ ಈ ಬಾರಿ ಬಿಗ್ ಬಾಸ್ ತುಂಬಾನೆ ರಗಡ್ ಆಗಿರುತ್ತೆ ಅಂತ. ಅದಕ್ಕೆ ಸರಿಯಾಗಿ ಆರಂಭವಾದ ದಿನವೇ ಜಗಳ ಮಾಡಿಕೊಂಡು ತಮ್ಮ ವರ್ತನೆಯಿಂದಲೇ ಮನೆಮಂದಿಯ ಜೊತೆಗೆ ವೀಕ್ಷಕರಿಗೂ ಇರಿಟೇಶನ್ ಅನಿಸುವಷ್ಟು ಕಿರಿಕಿರಿಯಾಗಿಬಿಟ್ಟಿದ್ದಾರೆ ಲಾಯರ್ ಜಗದೀಶ್. 
 

27

ಸ್ವರ್ಗದಲ್ಲಿದ್ದರೂ ಕೂಡ, ಸ್ವರ್ಗದಲ್ಲಿದ್ದವರ ಬಗ್ಗೆ ನರಕದಲ್ಲಿ, ನರಕದಲ್ಲಿರುವವರ ಬಗ್ಗೆ ಸ್ವರ್ಗದಲ್ಲಿ ಕಿಚ್ಚು ಹಚ್ಚಿ ಮಾತನಾಡುವ ಜಗದೀಶ್, ತಮ್ಮ ರಫ್ ಮಾತುಗಳಿಂದ ಹಾಗೂ ಎದುರಿರುವವರಿಗೆ ಮಾರ್ಯದೆ ಕೊಡದೆ ಮಾತನಾಡುವ ಶೈಲಿಯಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ಬಿಗ್ ಬಾಸ್ ಗೆ ಬಂದಿರೋದೆ ಜಗಳ ಮಾಡೊಕೆ ಎನ್ನೋ ತರ ಆಡ್ತಿದ್ದಾರೆ ಜಗದೀಶ್. 
 

37
BBK jagadish

ಬಿಗ್ ಬಾಸ್ ನಲ್ಲಿರ 16 ಜನರ ಆಟ ಬೇರೆಯದ್ದೇ ಆದರೆ, ಜಗದೀಶ್ (Lawyer Jagadish) ಆಡುವ ರೀತಿಯೇ ಬೇರೆಯಾಗಿದೆ. ಅವರ ಸ್ವಭಾವದಿಂದ ಸ್ಪರ್ಧಿಗಳು ಅವರನ್ನ ನಾಮಿನೇಟ್ ಮಾಡಿದ್ರೂ ಕೂಡ ನನ್ನ ಸ್ಟ್ರಾಟೆಜಿ ಏನು ಗೊತ್ತಾ? ನೀವೆಲ್ಲಾ ನನ್ನ ನಾಮಿನೇಟ್ ಮಾಡ್ತೀರಿ ಅಂತನ ನಗೆ ಗೊತ್ತು. ನನಗೆ ಅದೇ ಬೇಕಾಗಿರೋದು ಅಂತ ತನ್ನದೇ ಲೋಕದಲ್ಲಿ ಆಡ್ತಿದ್ದಾರೆ. 
 

47

ಇನ್ನು ಸ್ವರ್ಗದ ಜನರಿಗೆ ಸಿಗುವಂತಹ ಆಹಾರ, ಬಿಸಿ ನೀರನ್ನು ನರಕದ ಜನರಿಗೆ ನೀಡುವ ಮೂಲಕ ಲಕ್ಸುರಿ ಬಜೆಟ್ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲ ಸ್ವರ್ಗದ ಜನರ ಅಗತ್ಯ ಸಾಮಾಗ್ರಿಗಳನ್ನು ಬಿಗ್ ಬಾಸ್ ಕಿತ್ತುಕೊಳ್ಳುವಂತೆ ಮಾಡೊದಕ್ಕೂ ಲಾಯರ್ ಕಾರಣವಾಗಿದ್ದಾರೆ. 
 

57
biggboss Kannada dhanraj

ಹೆಂಗಸರ ಜೊತೆ ಮರ್ಯಾದೆ ಇಲ್ಲದೆ ಮಾತನಾಡುವ ಜಗದೀಶ್ ಗೆ ಈಗಾಗಲೇ ಸ್ಪರ್ಧಿಗಳು ಸರಿಯಾಗಿ ಬೈದು, ಮೊದಲಿಗೆ ಹೆಂಗಸರಿಗೆ ಮರ್ಯಾದೆ ನೀಡೊದನ್ನ ಕಲಿ ಅಂತಾನೂ ಹೇಳಿದ್ದಾರೆ. ಆದರೂ ತಾನು ನಡೆದದ್ದೆ ಹಾದಿ ಎನ್ನುವ ಜಗದೀಶ್ ವರ್ತನೆಯಿಂದ ವೀಕ್ಷಕರು ರೋಸಿ ಹೋಗಿದ್ದಾರೆ. 
 

67
biggboss Kannada jagadish

ಮೊದಲ ದಿನವೇ  ಎಲಿಮಿನೇಶನ್ (elimination) ಪ್ರಕ್ರಿಯೆ ನಡೆದಿದ್ದು, ಗೌತಮಿ ಜಾದವ್, ಶಿಶಿರ್ ಶಾಸ್ತ್ರಿ, ಯಮುನಾ ಸನ್ನಿಧಿ, ಭವ್ಯಾ ಗೌಡ, ಹಂಸಾ, ಲಾಯರ್ ಜಗದೀಶ್, ಮಾನಸ, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ನಾಮಿನೇಟ್ ಆಗಿದ್ದು, ಇವರನ್ನ ಉಳಿಸಲು ಓಟ್ ಮಾಡೊದಕ್ಕೆ ಕೇಳಿಕೊಂಡಿದ್ದಾರೆ. 

77

ಆದರೆ ಜನರು ಮಾತ್ರ ದಯವಿಟ್ಟು ಈಗ್ಲೇ ಜಗದೀಶ್ ಅವರನ್ನು ಹೊರಹಾಕಿ, ಅವರ ಭವಿಷ್ಯ ನಮಿಗೆ ಕಾಣಿಸ್ತಿದೆ. ಈವತ್ತಿನ ಜಗದೀಶ್ ವರ್ತನೆ ನೋಡಿ ವೀಕೆಂಡ್ ಎಪಿಸೋಡ್ ಗೆ ಕಾಯುತ್ತ ಇದ್ದೇವೆ. ಜಗದೀಶ್ ಅಂತ 3rd ಕ್ಲಾಸ್ ಕಂಟೆಸ್ಟೆಂಟ್ ನ ಯಾವ ಸೀಸನ್ ಅಲ್ಲೂ ನೋಡಿಲ್ಲ ಗುರು. ಜಗದೀಶ ಮನೆಯ ನೆಮ್ಮದಿಯನ್ನೇ ಹಾಳು ಮಾಡ್ತಿದ್ದಾರೆ ಆದಷ್ಟು ಬೇಗ ಅವರನ್ನ ಆಚೆ ಹಾಕ್ಲೇಬೇಕು ಎಂದಿದ್ದಾರೆ ವೀಕ್ಷಕರು. 
 

Read more Photos on
click me!

Recommended Stories