ಸದ್ಯ ಅಮೃತಧಾರೆ ಸೀರಿಯಲ್‌ನಲ್ಲಿ ಶೋಕದ ಛಾಯೆ ಆವರಿಸಿದೆ. ತನಗೆ ಬಂದಿರುವ ಮಹಾರೋಗವನ್ನು ಮರೆ ಮಾಡಿ ತನ್ನೆಲ್ಲಾ ಜವಾಬ್ದಾರಿಗಳನ್ನು ಗೌತಮ್ ಹೆಗಲಿಗೆ ರವಾನಿಸುವ ಕೆಲಸವನ್ನು ಭೂಮಿಕಾ ಮಾಡುತ್ತಿದ್ದಾಳೆ. ಈ ನಡುವೆ ಸಿಸ್ಟರ್ ಶಕುಂತಲಾ ಬೆನ್ನ ಹಿಂದೆಯೇ ಸೋದರ ಲಕ್ಷ್ಮೀಕಾಂತ್ ಬಿದ್ದಿದ್ದಾನೆ.
25
ಸಿಸ್ಟರ್ ಮೇಲೆ ಲಕ್ಷ್ಮೀಕಾಂತ್‌ನ ಕಣ್ಣು
ಎಲ್ಲರ ಮುಂದೆ ತಾನು ಬದಲಾದಂತೆ ನಟಿಸುತ್ತಿರುವ ಶಕುಂತಲಾ, ಕೆಡಿ ಮಗ ಜೈದೇವ್ ಜೊತೆ ಕೈ ಜೋಡಿಸಿದ್ದಾಳೆ. ಶಕುಂತಲಾಳಲ್ಲಿ ಹಳೆಯ ದ್ವೇಷ ಕಾಣಿಸುತ್ತಿರೋದು ಲಕ್ಷ್ಮೀಕಾಂತ್ ಗಮನಕ್ಕೆ ಬಂದಿದೆ. ಹಾಗೆಯೇ ಗೌತಮ್ ಮತ್ತು ಭೂಮಿಕಾ ಬಗ್ಗೆ ಶಕುಂತಲಾಳ ಅಸಮಾಧಾನ ಲಕ್ಷ್ಮೀಕಾಂತ್ ಸೂಕ್ಷ್ಮವಾಗಿ ಗಮನಿಸುತ್ತಿದ್ದಾಳೆ.
35
ಮಲ್ಲಿ ಖಡಕ್ ಎಚ್ಚರಿಕೆ
ಮತ್ತೊಂದೆಡೆ ಮಲ್ಲಿ ಕಂಬ್ಯಾಕ್, ಶಕುಂತಲಾಳಲ್ಲಿ ಭಯ ಹುಟ್ಟಿಸಿದೆ. ಶಕುಂತಲಾಳನ್ನು ಭೇಟಿಯಾದ ಮಲ್ಲಿ, ಐಪಿಎಸ್ ಅಧಿಕಾರಿಯಂತೆಯೇ ಮಾತನಾಡಿ ತನ್ನ ಮುಂದಿನ ಗುರಿ ಮಾಜಿ ಗಂಡ ಜೈದೇವ್ ಎಂಬುದನ್ನು ಹೇಳಿದ್ದಾಳೆ. ಮಲ್ಲಿಯ ಎಲ್ಲಾ ಮಾತುಗಳ ಹಿಂದಿನ ಮರ್ಮ ಶಕುಂತಲಾಗೆ ಸೂಕ್ಷ್ಮವಾಗಿ ಅರ್ಥವಾಗಿದೆ. ಇದರಿಂದ ಮಲ್ಲಿಯನ್ನು ಎದುರು ಹಾಕಿಕೊಳ್ಳೋ ಮುನ್ನ ನೂರು ಬಾರಿ ಯೋಚಿಸಬೇಕು ಎಂದು ಶಕುಂತಲಾ ನಿರ್ಧರಿಸಿದ್ದಾಳೆ.
ಇತ್ತ ಮಲ್ಲಿ ಕಂಬ್ಯಾಕ್ ಮಾಡಿರೋ ವಿಷಯವನ್ನು ಜೈದೇವ್‌ಗೆ ಶಕುಂತಲಾ ಹೇಳಿದ್ದಾಳೆ. ಜೈದೇವ್ ಮನೆಯಿಂದ ಹೊರಗೆ ಬರಲು ಮತ್ತು ಭೂಮಿಕಾ ತಮ್ಮ ವಿರುದ್ಧ ನಿಂತಿರೋದಕ್ಕೆಲ್ಲಾ ಮಲ್ಲಿಯೇ ಕಾರಣ. ಹಾಗಾಗಿ ಭೂಮಿಕಾಗಿಂತ ಮಲ್ಲಿಯನ್ನೇ ಮುಗಿಸಬೇಕು ಎಂದು ಜೈದೇವ್ ಗುಡುಗಿದ್ದಾನೆ. ಆತುರ ಬುದ್ಧಿಯ ಮಗನಿಗೆ ತಾವು ಯೋಚಿಸಿ ತಾಳ್ಮೆಯಿಂದ ಕೆಟ್ಟ ಕೆಲಸ ಮಾಡಬೇಕೆಂದು ಶಕುಂತಲಾ ಹೇಳಿದ್ದಾಳೆ.
55
ಸ್ಟೋರಿಗೆ ರೋಚಕ ತಿರುವು
ಭೂಮಿಕಾಗೆ ಕ್ಯಾನ್ಸರ್ ಬಂದಿರುವ ವಿಷಯ ತಿಳಿದ್ರೆ ಶಕುಂತಲಾ ಅದನ್ನು ತನ್ನ ಲಾಭಕ್ಕೆ ಹೇಗೆ ಬಳಸಿಕೊಳ್ತಾಳೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಮತ್ತೊಂದೆಡೆ ಮಲ್ಲಿ ಬಂದಿರೋದು ಕೆಡಿಗಳಲ್ಲಿ ನಡುಕು ಹುಟ್ಟಿಸಿರೋದಂತು ಸತ್ಯ. ಶಕುಂತಲಾಳನ್ನು ನೆರಳಿನಂತೆ ಲಕ್ಷ್ಮೀಕಾಂತ್ ಹಿಂಬಾಲಿಸುತ್ತಿರೋದು ಸ್ಟೋರಿಗೆ ರೋಚಕ ತಿರುವು ನೀಡಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.