ಅಮೃತಧಾರೆ ಸೀರಿಯಲ್ನಲ್ಲಿ (Amruthadhaare Serial) ಸದ್ಯ ಭೂಮಿಕಾಗೆ ಜೀವ ಕಂಟಕ ಎಂದು ವೈದ್ಯರು ಹೇಳಿದ್ದಾರೆ. ಬ್ರೆಸ್ಟ್ ಕ್ಯಾನ್ಸರ್ ಇರುವ ಕಾರಣ, ಆಯಸ್ಸು ಸ್ವಲ್ಪೇ ದಿನದ್ದು ಎಂದಿದ್ದಾರೆ. ನಿಜ ಜೀವನದಲ್ಲಿ ಕ್ಯಾನ್ಸರ್ ಗೆದ್ದಿರುವ ಅದೆಷ್ಟೋ ಜನರು ಇರುವಾಗ, ಸೀರಿಯಲ್ ನಲ್ಲಿ ರೋಚಕತೆ ತರುವ ಉದ್ದೇಶದಿಂದ ಭೂಮಿಕಾಗೆ ವೈದ್ಯರು ಕೆಲವೇ ತಿಂಗಳ ಗಡುವು ನೀಡಿದ್ದಾರೆ. ಇದನ್ನು ಕೇವಲ ಸೀರಿಯಲ್ ಆಗಿ ನೋಡಿದವರಿಗೆ ಮುಂದೇನು ಎನ್ನುವ ಕುತೂಹಲ ಹೆಚ್ಚುತ್ತಿದೆ.
26
ಗೌತಮ್ಗೆ ವಿಷ್ಯ ಗೊತ್ತಿಲ್ಲ
ಅದೇ ಇನ್ನೊಂದೆಡೆ, ಗೌತಮ್ಗೆ ಸದ್ಯ ಭೂಮಿಕಾಳ ವಿಷಯ ಗೊತ್ತಿಲ್ಲ. ತನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಗುವವರೆಗೂ ಭೂಮಿಕಾ ಆರೋಗ್ಯದಿಂದಲೇ ಇದ್ದಳು. ಯಾವಾಗ ವೈದ್ಯರು ಇದಕ್ಕೆ ಪರಿಹಾರವೇ ಇಲ್ಲ, ಸಾವೇ ಅಂತಿಮ ಹಾದಿ ಎಂದುಬಿಟ್ಟರೋ, ಈ ರೀತಿ ಸಾವಿನ ವಿಷವನ್ನು ವೈದ್ಯರೊಬ್ಬರು ರೋಗಿಯ ತಲೆಯಲ್ಲಿ ತಲೆಬುಡವಿಲ್ಲದೇ ತುಂಬಿದಾಗ ಏನಾಗುವುದೋ ಅದೇ ಪರಿಸ್ಥಿತಿ ಭೂಮಿಕಾಗೂ ಆಗಿದೆ. ಆದ್ದರಿಂದ ಭೂಮಿಕಾ ಸಾವಿನ ಹಾದಿಯನ್ನೇ ಮುಂದಿಟ್ಟುಕೊಂಡು ಜೀವಿಸುವ ರೀತಿಯಲ್ಲಿ ಕಾಣಿಸುತ್ತಿದೆ.
36
ಗೌತಮ್ ಕೈ ನೋಡಿದ ಕೊರವಂಜಿ
ಇದೀಗ ಭೂಮಿಕಾ ಮತ್ತು ಗೌತಮ್ ದೇವಸ್ಥಾನಕ್ಕೆ ಪೂಜೆಗೆಂದು ಹೋಗಿದ್ದಾರೆ. ಅಲ್ಲಿ ಕಣಿಶಾಸ್ತ್ರ ಹೇಳುವವಳು ಬಂದಿದ್ದಾಳೆ. ಮೊದಲಿಗೆ ಗೌತಮ್‌ನ ಕೈಯನ್ನು ನೋಡಿದ್ದಾಳೆ. ಗೌತಮ್‌ನ ಒಳ್ಳೆಯತನವನ್ನು ಹೊಗಳಿರುವ ಅವಳು, ಈ ಒಳ್ಳೆಯತನವೇ ಅವನನ್ನು ಕಾಪಾಡುತ್ತದೆ, ಸದಾ ಈ ಒಳ್ಳೆಯತನ ಅವರ ಜೀವನದುದ್ದಕ್ಕೂ ಇರುತ್ತದೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂದಿದ್ದಾಳೆ.
ಕೊನೆಗೆ ಬೇಡ ಬೇಡ ಎಂದರೂ ಭೂಮಿಕಾಳ ಕೈಯನ್ನು ನೋಡಿರುವ ಕಣಿ ಶಾಸ್ತ್ರದವಳು, ಅವಳ ಆಯಸ್ಸಿನ ರೇಖೆಯನ್ನು ನೋಡಿ, ನೋವಿನ ಭಾವದಿಂದ ಭೂಮಿಕಾಳನ್ನು ನೋಡಿದ್ದಾಳೆ. ಆದರೆ ಆಕೆ ಏನು ಹೇಳಿದಳು ಎನ್ನುವ ಬಗ್ಗೆ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ತೋರಿಸಲಿಲ್ಲ.
56
ಮುಂದೇನು ಸ್ಟೋರಿ?
ಆದರೆ, ಸದ್ಯ ಬಿಡುಗಡೆಯಾಗಿರುವ ಪ್ರೊಮೋ ನೋಡಿದರೆ, ಭೂಮಿಕಾ ವೈದ್ಯರು ಹೇಳಿದಂತೆ ಸಾವಿನ ಹಾದಿಯಲ್ಲಿ ಇದ್ದರೂ, ಗೌತಮ್ ಒಳ್ಳೆಯತನ ಅದನ್ನು ಕಾಪಾಡುತ್ತದೆ ಎನ್ನುವುದು ಕಣಿ ಶಾಸ್ತ್ರದವಳು ಹೇಳಿದ ಮಾತಿನ ಮರ್ಮ ಎನ್ನುವುದಾಗಿ ನೆಟ್ಟಿಗರು ಊಹಿಸಿಕೊಳ್ಳುತ್ತಿದ್ದಾರೆ.
66
ಮುಂದೇನು?
ಕೆಲವರು ಇದು ಶಕುಂತಲಾ ಕೈವಾಡ, ಭೂಮಿಕಾಗೆ ಏನೂ ಆಗುವುದಿಲ್ಲ ಎನ್ನುತ್ತಿದ್ದರೆ, ಭೂಮಿಕಾ ಸಾವನ್ನು ಜಯಿಸಿ ಬರುತ್ತಾಳೆ ಎನ್ನುತ್ತಿದ್ದಾರೆ ಮತ್ತೆ ಕೆಲವರು. ಇದಾಗಲೇ ಬ್ರೆಸ್ಟ್ ಕ್ಯಾನ್ಸರ್ಗೆ ಸಾವೇ ಅಂತಿಮ ದಾರಿ ಎನ್ನುವ ರೀತಿಯಲ್ಲಿ ವೈದ್ಯರು ಮಾತನಾಡಿರುವುದಕ್ಕೆ ಸಾಕಷ್ಟು ಟೀಕೆಗಳೂ ಬರುತ್ತಿವೆ. ಅದನ್ನು ಜಯಿಸಿ, ನಿಜಾಂಶ ತಿಳಿಸಬೇಕಿದೆ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.