ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಮಹಾ ತಿರುವು… ಕೊನೆಗೂ ವೈಷ್ಣವ್ ಮುಂದೆ ಬಯಲಾಗಿಬಿಡ್ತು ಲಕ್ಷ್ಮೀ ದೆವ್ವದ ನಾಟಕ!

Published : Oct 21, 2024, 05:27 PM ISTUpdated : Oct 21, 2024, 05:32 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿ ಒಂದೇ ರೀತಿಯಲ್ಲಿ ಕಥೆ ತೆಗೆದುಕೊಂಡು ಹೋಗ್ತಾ ಕಾವೇರಿಯನ್ನ ಪದೇ ಪದೇ ಗೆಲ್ಲಿಸುತ್ತಾ ವೀಕ್ಷಕರಿಗೆ ಕೋಪ ತರಿಸೋದರ ಜೊತೆಗೆ ಹೊಸ ಟ್ವಿಸ್ಟ್ ಕೂಡ ನೀಡಿದೆ.   

PREV
17
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಮಹಾ ತಿರುವು… ಕೊನೆಗೂ ವೈಷ್ಣವ್ ಮುಂದೆ ಬಯಲಾಗಿಬಿಡ್ತು ಲಕ್ಷ್ಮೀ ದೆವ್ವದ ನಾಟಕ!

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ (Lakshmi Baramma Serial) ದೊಡ್ಡ ದೊಡ್ಡ ತಿರುವುಗಳು ಸಿಕ್ಕಿದ್ದು, ಇನ್ನೇನು ಲಕ್ಷ್ಮೀ ಗೆದ್ದು, ಕಾವೇರಿಯ ಎಲ್ಲಾ ಆಟಗಳು ಬಯಲಾಗುತ್ತೆ ಎನ್ನುವಷ್ಟರಲ್ಲಿ ಕಾವೇರಿಯ ಕೈ ಮೇಲಾಗಿ ವೀಕ್ಷಕರಿಗೆ ನಿರಾಸೆ ಮೂಡಿಸಿತ್ತು. ಈ ರೀತಿ ಒಂದು ಸಲ ಮಾತ್ರ ಅಲ್ಲ, ಪದೇ ಪದೇ ಕಾವೇರಿಗೆ ಅಂದ್ರೆ, ಮೋಸ ಕುತಂತ್ರಕ್ಕೆ ಜಯ ಸಿಗ್ತಿರೋದನ್ನ ನೋಡಿ ವೀಕ್ಷಕರು ಕೆಂಡಾಮಂಡಲವಾಗಿದ್ದರು. 
 

27

ಕಳೆದ ಕೆಲವು ಎಪಿಸೋಡ್ ಗಳಲ್ಲಿ ಲಕ್ಷ್ಮಿಯನ್ನು ಮುಗಿಸೋಕೆ ಕಾವೇರಿ ಸ್ಕೆಚ್ ಹಾಕಿ, ಲಕ್ಷ್ಮಿಯನ್ನು ಕಿಡ್ನಾಪ್ ಮಾಡಿಸಿ, ಆಕೆಯನ್ನು ಗೋಣಿ ಚೀಲದಲ್ಲಿ ಕಟ್ಟಿ ಜೀವಂತ ಸಮಾಧಿ ಕೂಡ ಮಾಡಲಾಗಿತ್ತು, ಆದ್ರೆ ಕೊನೆಗೆ ದುರ್ಗಾ ಎನ್ನುವ ಪೊಲೀಸ್ ರೂಪದಲ್ಲಿ ದೇವರೆ ಬಂದು ಲಕ್ಷ್ಮೀಯನ್ನು ಕಾಪಾಡಿದ್ದೇನೋ ಸರಿ, ಆದ್ರೆ ಕಾವೇರಿಯ ನಿಜ ರೂಪ ಬಯಲಾಗುತ್ತೆ ಎಂದುಕೊಂಡ್ರೆ ಅದು ಬಯಲಾಗಲೇ ಇಲ್ಲ. 
 

37

ಇನ್ನೊಂದು ಕಡೆ ಲಕ್ಷ್ಮೀ ಜೀವನದಲ್ಲಿ ಆಗ್ತಿರೋದಕ್ಕೆ ತಲೆಕೆಡಿಸಿಕೊಂಡು, ಲಕ್ಷ್ಮೀನ ಸಮಧಾನ ಮಾಡೋದಕ್ಕೆ ಬರೋ ವೈಷ್ಣವ್, ಕೀರ್ತಿ ಬಗ್ಗೆ ತಲೆ ಕೆಡಿಸ್ಕೋಬೇಡ, ಅವಳಿಗೆ ನಮ್ಮಿಬ್ಬರ ಮದ್ವೆ ಆಗೋದು ಇಷ್ಟ ಇರ್ಲಿಲ್ಲ, ಅದಕ್ಕೆ ಏನೇನೋ ಹೇಳಿ ತಲೆಕೆಡಿಸಿದ್ದಾರೆ. ಅದನ್ನ ತಲೆಗೆ ಹಾಕ್ಬೇಡಿ ಎನ್ನುತ್ತಾನೆ ವೈಷ್ಣವ್ . ಅಷ್ಟೇ ಅಲ್ಲ ಅಮ್ಮ ನಮ್ಮ ಮೇಲೆ ಜೀವಾನೆ ಇಟ್ಕೊಂಡಿದ್ದಾರೆ, ಕೀರ್ತಿ ಮದ್ವೆ ಬೇಡ ಅಂತ ಹೊರಟಾಗ ನನಗೆ ಮದ್ವೆನೆ ಬೇಡ ಅಂತ ನಾನು ಮದ್ವೆ ಮನೆಯಿಂದಾನೆ ಹೊರಟಿದ್ದೆ, ಆದ್ರೆ ಲಕ್ಷ್ಮೀನೆ ನಿನಗೆ ಸರಿಯಾದ ಜೋಡಿ ಅಂತ ನನ್ನ ತಡೆದು, ನಿಮ್ಮ ಜೊತೆ ಮದ್ವೆ ಮಾಡಿಸಿದ್ದು ನನ್ನ ಅಮ್ಮ. ಅವರೇ ಆರಿಸಿರೋ ಹುಡುಗಿಗೆ ಅವರೇ ಯಾಕೆ ತೊಂದರೆ ಮಾಡ್ತಾರೆ ಎನ್ನುತ್ತಾನೆ ವೈಷ್ಣವ್. 
 

47

ಕೀರ್ತಿ ಅವಳಾಗಿಯೇ ತಲೆಗೆ ಏನೇನೋ ತುಂಬಿ, ಅವಳೇ ಸತ್ತಿರೋದು, ಮರೆತು ಬಿಡಿ ಅವಳನ್ನ, ಯಾವುದೇ ವಿಷ್ಯ ತಲೆ ಕೆಡಿಸ್ತಿದೆ ಅಂದ್ರೆ, ಅದನ್ನ ಸುಮ್ನೆ ಬಿಡ್ಬೇಕು ಅಂತಾನೆ. ಆದ್ರೆ ಲಕ್ಷ್ಮೀ ಮಾತ್ರ ಕೀರ್ತಿ ಸಾವಿನ ರಹಸ್ಯವನ್ನ ಹುಡುಕದೇ ಸುಮ್ನೆ ಇರಲ್ಲ ಅಂತಾನೆ. ಆವಾಗ ಅಲ್ಲಿಗೆ ಬರೋ ಗಂಗಾ ಎಲ್ಲರೂ ಸೇರಿ ಲಕ್ಷ್ಮೀ ಅಕ್ಕನಿಗೆ ಏನೇನೋ ಹೇಳ್ಬೇಡಿ, ಅವರಿಗೆ ಏನೂ ಆಗಿಲ್ಲ. ಕೀರ್ತಿ ಸಾವಿಗೆ ಯಾರು ಕಾರಣ ಅಂತ ತಿಳಿದುಕೊಳ್ಳೋಕೆ ಲಕ್ಷ್ಮೀ ಆಡ್ತಿರೋ ನಾಟಕ ಅಂತಾಳೆ. ವೈಷ್ಣವ್ ಶಾಖ್ ಆಗ್ತಾನೆ. ಇನ್ನು ವೈಷ್ಣವ್ ಏನ್ ಮಾಡ್ತಾನೆ ಅನ್ನೋದನ್ನ ನೋಡ್ಬೇಡಿ. 
 

57

ಆದರೆ ವೀಕ್ಷಕರು ಮಾತ್ರ ಈ ಪ್ರೊಮೋ ನೋಡಿ ತಲೆ ಕೆಡಿಸಿಕೊಂಡಿದ್ದಾರೆ. ದೇವರೆ ಇದು ಕನಸು ಆಗಿರಲಿ, ನಾಟಕ ಅಂತ ಗೊತ್ತಾಗೋದು ಬೇಡ ಅಂತ ಕೆಲವರು ಹೇಳಿದ್ರೆ, ಇನ್ನೂ ಕೆಲವರು ಯಾಕೆ ಈ ರೀತಿ ಕಥೆನಾ ಹಾಳು ಮಾಡ್ತೀರ. ಕೀರ್ತಿ ವಾಪಾಸ್ ಬರಬೇಕು ಕಾವೇರಿಗೆ ಬುದ್ದಿ ಕಲಿಸಬೇಕು, ಆವಾಗ್ಲೇ ಚೆನ್ನಾಗಿರುತ್ತೆ. ಒಂದೇ ಒಂದು ಕಥೆ ನಾ ಎಷ್ಟೂ ಅಂಥ ಎಳಿತೀರ, ಬೇರೆ ಟ್ವಿಸ್ಟ್ ತನ್ನಿ ಎಂದಿದ್ದಾರೆ. 
 

67

ಇನ್ನು ಹೆಚ್ಚಿನ ಜನರು ವೈಷ್ಣವ್ ಪಾತ್ರದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದು,  ನೀನು ಹೀರೋ ಆಗೋಕೆ ಲಾಯಕ್ಕಿಲ್ಲ ಸ್ವಂತ ಬುದ್ಧಿನೇ ಇಲ್ವಲ್ಲ.  ಕೀರ್ತಿ ವಿಷಯ ಖುಷಿ ನುಂಗ್ತಾ ಇದೆ ಅಂತಿದ್ಯಲ್ಲ. ಆದ್ರೆ ಅವಳು ನಿಂಗೋಸ್ಕರ ಸಾಯೋದಿಕ್ಕೂ ರೆಡಿಯಾದ್ಲೂ, ನೀನೆಂಥ ಹೀರೋ ಅಂತಿದ್ದಾರೆ. ಅಷ್ಟೇ ಅಲ್ಲದೇ ಇವನಿಗೆ ನಡೆದ ಯಾವ ಸತ್ಯವೂ ಗೊತ್ತಿಲ್ಲ ನಿಜ. ಹಾಗಂತ,ತಾನು ಇವತ್ತು ಬದುಕಿದ್ದೀನಿ ಅಂದ್ರೆ ಅದಕ್ಕೆ ಕೀರ್ತಿಯೇ ಕಾರಣ, ಸಾವಿನ ಸ್ಥಿತಿಯಲ್ಲಿದ್ದವನನ್ನು ಬದುಕಿಸಿದವಳು ಕೀರ್ತಿಯೇ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲವಾಯಿತೇ? ಎಂದು ಪ್ರಶ್ನಿಸಿದ್ದಾರೆ. 
 

77

ಇನ್ನು ಕೆಲವು ಜನರು ಕೀರ್ತಿ ಇಂದ ಮಾತ್ರ ಸಾಧ್ಯ ಕಾವೇರಿ ಬಣ್ಣ ಬಯಲು ಮಾಡಕ್ಕೆ ಸಾಧ್ಯ. ಹಾಗಾಗಿ ಕೀರ್ತಿನ ವಾಪಾಸ್ (Keerthi) ಕರೆಸಿ. ಅವಳ ಸಾವಿಗೆ ಅವಳೇ ನ್ಯಾಯ ತಗೋತಾಳೆ. ಅದು ಬಿಟ್ಟು ಈ ನಾಲಾಯಕ್ ವೈಷ್ಣವ್ ಹಾಗೂ ಒಂದು ಮುಖ್ಯವಾದ ಸಾಕ್ಷಿನ ನೆಟ್ಟಗೆ ಕಾಪಾಡಕ್ಕೆ ಬರದೇ ಬೇಜವಾಬ್ದಾರಿ ಇಂದ ಕಳ್ಕೊಂಡ ಲಕ್ಷ್ಮಿ ಇಂದ ಆಗಲ್ಲ.  ಸೀರಿಯಲ್ ಅಲ್ಲಿ ಯಾವ ಪಾತ್ರನು ಸ್ಟ್ರಾಂಗ್ ಇಲ್ಲ. ಸ್ಟ್ರಾಂಗ್ ಇದ್ದ ಕೀರ್ತಿ ಪಾತ್ರನು ಸಾಯಿಸಿ ಈಗ ಡಬ್ಬ ಸೀರಿಯಲ್ ಮಾಡಿದಿರಾ ಅಷ್ಟೇ . ಕೀರ್ತಿ ಬಂದ್ರೇನೆ ಕಥೆ ಸರಿಯಾಗೋದು ಎಂದಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories