ಇದು ಕೊನೆ ದಿನ ಅನ್ನೋ ಹಾಗೆ ಜೀವಿಸಿ…ಎನ್ನುತ್ತಾ ನೋವು ಮರೆತು ಮಾಲ್ಡೀವ್ಸ್’ಗೆ ಹಾರಿದ ಕ್ಯಾನ್ಸರ್ ಪೀಡಿತ ನಟಿ ಹೀನಾ ಖಾನ್

Published : Oct 21, 2024, 04:37 PM ISTUpdated : Oct 21, 2024, 04:57 PM IST

ಪ್ರಸ್ತುತ 3 ನೇ ಹಂತದ ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಪಡೆಯುತ್ತಿರುವ ನಟಿ ಹೀನಾ ಖಾನ್, ಕೊನೆಯ ಕೀಮೋಗೆ ಒಳಗಾದ ನಂತರ ಇದೀಗ ಮಾಲ್ಡೀವ್ಸ್ನಲ್ಲಿ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ.    

PREV
17
ಇದು ಕೊನೆ ದಿನ ಅನ್ನೋ ಹಾಗೆ ಜೀವಿಸಿ…ಎನ್ನುತ್ತಾ ನೋವು ಮರೆತು ಮಾಲ್ಡೀವ್ಸ್’ಗೆ ಹಾರಿದ ಕ್ಯಾನ್ಸರ್ ಪೀಡಿತ ನಟಿ ಹೀನಾ ಖಾನ್

ಹಿಂದಿ ಕಿರುತೆರೆ ಮತ್ತು ಬಾಲಿವುಡ್ ನಲ್ಲಿ ಮಿಂಚಿದ ನಟಿ ಹೀನಾ ಖಾನ್ ಸ್ತನ ಕ್ಯಾನ್ಸರ್ ನ (Breast cancer) ಮೂರನೇ ಹಂತದಲ್ಲಿದ್ದಾರೆ. ಅದರಿಂದ ಚೇತರಿಸಿಕೊಳ್ಳಲು ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಇಂಥ ನೋವಿನ ಸಂದರ್ಭದಲ್ಲೂ ನಟಿ ನಗು ನಗುತ್ತಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ, ತಾವು ಸ್ಟ್ರಾಂಗ್ ಆಗಿರೋದನ್ನ ನಿರೂಪಿಸಿದ್ದರು. 
 

27

ಕೆಲವು ದಿನಗಳ ಹಿಂದೆ ಹೀನಾ ಖಾನ್ ತಮ್ಮ ಕೊನೆಯ ಕೀಮೋ ಥೆರಪಿಯನ್ನು (chemotherapy) ಪಡೆದಿದ್ದು, ಈಗ ಅವರು ಮಾಲ್ಡೀವ್ಸ್ ಗೆ ಟ್ರಾವೆಲ್ ಮಾಡಿ ಅಲ್ಲಿ ಎಂಜಾಯ್ ಮಾಡ್ತಿದ್ದಾರೆ. ಅಲ್ಲಿಂದ ಸುಂದರವಾದ ಫೋಟೊಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.  
 

37

ನಟಿ ಸಮುದ್ರ ತೀರದಲ್ಲಿ ತೆಗೆದಂತಹ ಎಲ್ಲಾ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿ ಆತ್ಮಸ್ಥೈರ್ಯಕ್ಕೆ ಅಭಿಮಾನಿಗಳು ಗೌರವಿಸಿ, ನಟಿಗೆ ಪ್ರೀತಿಯ ಸುರಿಮಳೆ ಸುರಿಸಿದ್ದಾರೆ, ಜೊತೆಗೆ ಆದಷ್ಟು ಬೇಗನೆ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. 
 

47

ಹೀನಾ ಖಾನ್ ಗೆ (Hina Khan) ಯಾವಾಗ ಸ್ತನ ಕ್ಯಾನ್ಸರ್ ಇದೆ ಅನ್ನೋದು ಗೊತ್ತಾಗಿತ್ತೋ, ಅಂದಿನಿಂದ ಹೀನಾ ಖಾನ್ ಕ್ಯಾನ್ಸರ್ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಚಿಕಿತ್ಸೆಯ ಪ್ರತಿ ಹಂತವನ್ನು, ಕೀಮೋದಿಂದ ತನ್ನ ಪ್ರವಾಸದವರೆಗೆ ಎಲ್ಲವನ್ನೂ, ಸಹ ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಹಾಗಾಗಿ ನಟಿ ಬೇಗನೆ ಚೇತರಿಸಿಕೊಳ್ಳಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ. 
 

57

ಹೀನಾ ಖಾನ್ ಪ್ರಸ್ತುತ ಮಾಲ್ಡೀವ್ಸ್ ನಲ್ಲಿ (Maldives) ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ. ಅಲ್ಲಿಂದ, ಅವರು ತಮ್ಮ ಕೆಲವು ಸುಂದರ ಕ್ಷಣಗಳ ತುಣುಕುಗಳನ್ನು ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಪೋಸ್ಟ್ ಮಾಡಿದ್ದರು, ಜೊತೆಗೆ  ಸಮುದ್ರ ಕಿನಾರೆಯ ಮತ್ತೊಂದಿಷ್ಟು ಫೋಟೊಗಳನ್ನು ಸಹ ನಟಿ ಹಂಚಿಕೊಂಡರು. 
 

67

ಹೀನಾ ಖಾನ್ ಫೋಟೋಗಳು ಮತ್ತು ವೀಡಿಯೊಗಳಲ್ಲಿ ಅಲ್ಲಿನ ಆಹಾರ ಸವಿಯುವುದು,  ಕುಡಿಯುವುದರಿಂದ ಹಿಡಿದು ಬೀಚ್ ವಾಕ್, ರೈಡಿಂಗ್ ಮಾಡುತ್ತಾ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಅಷ್ಟೇ ಅಲ್ಲ ಹೀನಾ ಖಾನ್ ತಮ್ಮ ಫೋಟೊ ಜೊತೆಗೆ, "ನಾನು ಈಗ ಬದುಕಲು ಕಲಿತಿದ್ದೇನೆ. ಪ್ರತಿ ದಿನವೂ ಅದು ಕೊನೆಯದು ಎಂಬಂತೆ ಬದುಕಿ ಎಂದು ಬರೆದುಕೊಂಡಿದ್ದಾರೆ. 
 

77

ಕೀಮೋ ಥೆರಪಿಯಿಂದ ಕೂದಲು ಕಳೆದುಕೊಂಡಿರುವ ಹೀನಾ ಖಾನ್ ಕೆಲವೊಮ್ಮೆ ಟೋಪಿ ಧರಿಸಿ ಮತ್ತು ಕೆಲವೊಮ್ಮೆ ವಿಗ್ ಧರಿಸಿ ಮುದ್ದು ಮುದ್ದಾಗಿ ಫೋಟೊಗಳನ್ನ ತೆಗೆಸಿಕೊಂಡಿದ್ದಾರೆ. ಜನರು ಸಾಕಷ್ಟು ಪ್ರೀತಿಯ ಮಳೆ ಸುರಿಸಿದ್ದು, ಎಲ್ಲಾ ಸಮಸ್ಯೆಗಳನ್ನು ಗೆದ್ದು ಬನ್ನಿ, ಆ ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಹಾರೈಸಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories