ಗರತಿಯಂತೆ ಸೀರೆ ತೊಟ್ಟು ಕೈಬಳೆ ತೋರಿಸಿದ್ದ ಸಂಗೀತಾ ಶೃಂಗೇರಿ ಗ್ಲಾಮರ್ ಲುಕ್ ಹೊರಬಿತ್ತು!

First Published | Sep 19, 2024, 4:54 PM IST

ಕನ್ನಡದ ಸೀಸನ್ 10ರ ಬಿಗ್‌ಬಾಸ್‌ ಶೋನಲ್ಲಿ ಗರತಿಯಂತೆ ಸೀರೆಯುಟ್ಟು ಕೈ ಬಳೆ ಸದ್ದಿನಿಂದಲೇ ಸುದ್ದಿಯಾಗಿದ್ದ, ಸಿಂಹಿಣಿ ಖ್ಯಾತಿಯ ಸಂಗೀತಾ ಶೃಂಗೇರಿ ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್ 2024ರ ವೇದಿಕೆ ಕಾರ್ಯಕ್ರಮದಲ್ಲಿ ಗ್ಲ್ಯಾಮರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಗ್ ಬಾಸ್ ಸೀಸನ್ 10ರ ಸಿಂಹಿಣಿ ಅಂತಾನೆ ಫೇಮಸ್ ಆಗಿರುವ ನಟಿ ಸಂಗೀತಾ ಶೃಂಗೇರಿ (Sangeetha Sringeri) ಬ್ಲ್ಯಾಕ್ ಬಣ್ಣದ ಗೌನ್ ಧರಿಸಿ ಸಖತ್ತಾಗಿ ಮಿಂಚಿದ್ದಾರೆ. ಕೈ ಬಳೆ ಮೂಲಕವೇ ಹೆಚ್ಚು ಸದ್ದು ಮಾಡಿದ್ದ ಸಂಗೀತಾ, ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗಿದ್ದಾರೆ. ಅವರ ಈಗಿನ ಕಣ್ಣೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
 

ಬಿಗ್ ಬಾಸ್ ಮನೆಯಲ್ಲಿ ಆನೆ ಬಂದೊಂದಾನೆ ಎಂದು ಹೇಳುತ್ತಾ ಮದವೇರಿದ ಆನೆಯಂತೆ ನಡೆದುಕೊಳ್ಳುತ್ತಿದ್ದ ಅಜಾನುಭಾಹು ವಿನಯ್‌ ಗೌಡ ಎಲ್ಲರೊಂದಿಗೂ ಸಿಟ್ಟಿನಿಂದಲೇ ವರ್ತಿಸಿ ಅಂಕಿಯಲ್ಲಿ ಇಟ್ಟುಕೊಳ್ಳುತ್ತಿದ್ದನು. ಆದರೆ, ವಿನಯ್‌ಗೆ ಪೈಪೋಟಿ ನೀಡುತ್ತಿದ್ದುದು ಮಾತ್ರ ಕಾರ್ತಿಕ್ ಮಹೇಶ್.

Tap to resize

ಬಿಗ್ ಬಾಸ್ ಸೀಸನ್ 10ರ ವಿಜೇತ ಕಾರ್ತಿಕ್ ಗೆಳತಿಯಾಗಿ ಸುಮಾರು 40ಕ್ಕೂ ಅಧಿಕ ದಿನಗಳನ್ನು ಕಳೆದ ಸಂಗೀತಾ ಶೃಂಗೇರಿ ತನ್ನ ಬೆಂಬಲಕ್ಕೆ ಕಾರ್ತಿ ಇದ್ದಾನೆ ಎಂಬ ಧೈರ್ಯದಿಂದಲೇ ವಿನಯ್‌ಗೆ ಕ್ಯಾರೇ ಎನ್ನದೇ ಆಟದಲ್ಲಿಯೂ, ಮಾತಿನಲ್ಲಿಯೂ ಭರ್ಜರಿ ತಿರುಗೇಟನ್ನೇ ನೀಡುತ್ತಿದ್ದಳು.

ಬಿಗ್ ಬಾಸ್ ಮನೆಯಲ್ಲಿ ಖಳನಾಯಕನಂತೆ ನಡೆದುಕೊಳ್ಳುತ್ತಿದ್ದ ವಿನಯ್ ಗೌಡನನ್ನು ಹೆಚ್ಚಾಗಿ ಯಾರೂ ಎದುರು ಹಾಕಿಕೊಳ್ಳುತ್ತಿರಲಿಲ್ಲ. ಇನ್ನು ಡ್ರೋನ್ ಪ್ರತಾಪ್‌ನಲ್ಲಿ ವಿನಯ್ ಗೌಡ ಗ್ಯಾಂಗ್‌ ಸದಸ್ಯರು ತೀರಾ ಕೆಟ್ಟದಾಗಿಯೂ ನಡೆಸಿಕೊಂಡು, ಕೆಲವು ಬಾರಿ ಟೀಕೆಗಳನ್ನೂ ಮಾಡಿದ್ದರು. ಇದನ್ನು ಪ್ರಶ್ನೆ ಮಾಡಿದರೂ ಎದುರು ಹಾಕಿಕೊಳ್ಳದೇ ಸುಮ್ಮನಾಗುತ್ತಿದ್ದರು.

ಬಿಗ್ ಬಾಸ್ ಮನೆಯಲ್ಲಿ ಹಳ್ಳಿ ಸೊಗಡಿನ ಆಟದ ಟಾಸ್ಕ್ ಏರ್ಪಡಿಸಿದಾಗ ವಿನಯ್ ಗೌಡ ತಂಡಕ್ಕೆ ಕಾರ್ತಿಕ್ ಎಷ್ಟೇ ಸವಾಲು ಹಾಕಿದರೂ ಎದೆಯೇರಿಸಿ ಹೊಡೆಯುವವನಂತೆ ವಿನಯ್ ಬರುತ್ತಿದ್ದನು. ಆಗ ನೀನು ಕಾರ್ತಿಕ್‌ಗೆ ನೀನು ಬಳೆ ತೊಟ್ಟುಕೊಳ್ಳು ಹೋಗು ಎಂದು ಟೀಕೆ ಮಾಡುತ್ತಿದ್ದನು. 

ಸಂಗೀತಾ ಶೃಂಗೇರಿ ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಬಗ್ಗದೇ ಕೌಂಟರ್ ಕೊಡುತ್ತಿದ್ದಳು. ಹಳ್ಳಿ ಸೊಗಡಿನ ಆಟದಲ್ಲಿ ಕಾರ್ತಿಕ್ ತಂಡದಲ್ಲಿದ್ದ ಸಂಗೀತಾ ಶೃಂಗೇರಿ, ವಿನಯ್ ಗೌಡಗೆ ನೀನೇನು ಮಹಿಳೆಯರ ಬಳೆ ಬಗ್ಗೆ ಮಾತನಾಡುತ್ತೀಯಾ ಎಂದು ಸವಾಲು ಹಾಕುತ್ತಾ ತನ್ನ ಕೈಬಳೆ ಎತ್ತಿ ತೋರಿಸುವ ಮೂಲಕ ಮಹಿಳೆಯರ ಸಾಮರ್ಥ್ಯ ತೋರಿಸುವ ಪ್ರತೀಕ ಕೈಬಳೆ ಎಂದು ಸೆಡ್ಡು ಹೊಡೆದಿದ್ದಳು.

ಬಿಗ್ ಬಾಸ್ ಸೀಸನ್ 10ರಲ್ಲಿ ಫೈನಲಿಸ್ಟ್ ಆಗಿದ್ದ ಸಂಗೀತಾ ಶೃಂಗೇರಿ 2ನೇ ರನ್ನರ್ ಅಪ್ ಆಗುತ್ತಾರೆ. ಆದರೆ, ಸೀಸನ್ 10ರ ಬಿಗ್ ಬಾಸ್ ಮನೆಯ ಕಂಟೆಸ್ಟೆಂಟ್‌ಗಳ ಪೈಕಿ ಸಂಗೀತಾ ಶೃಂಗೇರಿಗೆ ಹೆಚ್ಚು ಅಭಿಮಾನಿಗಳಿದ್ದಾರೆ. ಎಲ್ಲಿಯೇ ಹೋದರೂ ನೂರಾರು ಅಭಿಮಾನಿಗಳು ಜಮಾಯಿಸುತ್ತಾರೆ. ಅವರಿಗೆ ಮಹಿಳಾ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ವಿವಿಧ ಮಹಿಳಾ ಸಂಘ, ಸಂಸ್ಥೆಗಳು ಕರೆಸಿ ಸನ್ಮಾನವನ್ನೂ ಮಾಡುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಸೆ.29ರಿಂದ ಬಿಗ್ ಬಾಸ್ ಸೀಸನ್ 11 ಆರಂಭವಾಗಲಿದೆ. ಆದರೆ, ಇದಕ್ಕೂ ಮುಂಚಿತವಾಗಿ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ 2024ರ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜನೆ ಮಾಡಲಾಗಿದೆ. ಈ ವೇದಿಕೆಗೆ ಬಿಗ್‌ಬಾಸ್ ಸೀಸನ್ 10ರ ಎಲ್ಲ ಕಂಟೆಸ್ಟೆಂಟ್‌ಗಳನ್ನು ಕರೆಸಲಾಗಿತ್ತು. ಅದರಲ್ಲಿ ಸಂಗೀತಾ ಗ್ಲಾಮರ್ ಲುಕ್ ಎಲ್ಲರಿಗೂ ಹುಬ್ಬೇರಿಸುವಂತೆ ಮಾಡಿದೆ.

Latest Videos

click me!