ಜಯಂತ್ ಇಷ್ಟು ಸತಾಯಿಸಿದ್ರೂ, ಚಿನ್ನುಮರಿಗೇನೂ ಗೊತ್ತಾಗ್ತಿಲ್ಲ, ಪೆದ್ದು ಎಂದ ಲಕ್ಷ್ಮೀ ನಿವಾಸ ಫ್ಯಾನ್ಸ್!

First Published | Sep 19, 2024, 4:57 PM IST

ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಸೈಕೋ ಪ್ರೇಮಿ ಜಯಂತ್ ತನ್ನ ಪ್ರೀತಿಯ ಹುಚ್ಚಿನಿಂದ ಏನೇನೋ ಮಾಡಿ ಸತಾಯಿಸುತ್ತಿದ್ದರೂ, ಜಾಹ್ನವಿಗೆ ಏನೂ ಗೊತ್ತಾಗ್ತಾನೆ ಇಲ್ವಾಲ್ಲ, ಅಷ್ಟೊಂದು ಪೆದ್ದು ಹುಡುಗಿನಾ ಜಾಹ್ನವಿ. 
 

ಲಕ್ಷ್ಮೀ ನಿವಾಸದ (Lakshmi Nivasa) ಪ್ರತಿಯೊಬ್ಬರ ಸ್ಟೋರಿ ವಿಭಿನ್ನವಾಗಿದ್ದು, ಎಲ್ಲಾ ಕಥೆಗಳು ಜನರನ್ನು ಹಿಡಿದಿಡುವಲ್ಲಿ ಗೆದ್ದಿದೆ. ಅದರಲ್ಲೂ ಜಯಂತ್ ಮತ್ತು ಜಾಹ್ನವಿಯ ವಿಚಿತ್ರ ಪ್ರೇಮಕಥೆಯನ್ನು ಜನರು ಇಷ್ಟಪಟ್ಟಿದ್ದಾರೆ. ಜಯಂತ್ ಸೈಕೋ ಥರ ಆಡ್ತಿದ್ರೂ, ಅದನ್ನ ಅರ್ಥ ಮಾಡಿಕೊಳ್ಳದ ಜಾಹ್ನವಿಯ ಪೆದ್ದು ತನಕ್ಕೆ ಮಾತ್ರ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. 
 

ಹೆಂಡ್ತಿ ಜಾಹ್ನವಿಯನ್ನು ಅತಿಯಾಗಿ ಪ್ರೀತಿಸುವ ಜಯಂತ್, ಆಕೆ ಏನಾದರೂ ಬೇಕು ಅನ್ನೋ ಮೊದಲೇ ಅದನ್ನು ಆಕೆಯ ಮುಂದೆ ಇಟ್ಟಿರುತ್ತಾನೆ. ಹಾಗಾಗಿ ಜಾಹ್ನವಿಗೂ ತನ್ನ ಗಂಡನ ಬಗ್ಗೆ ಅಪಾರ ನಂಬಿಕೆ ಉಂಟೇ ವಿನಃ, ಜಯಂತ್ ನ ಅತಿಯಾದ ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆಯೇ ವಿನಃ, ಆತನ ಸೈಕೋ ನೇಚರ್ ಮಾತ್ರ ಕಾಣಿಸಲೇ ಇಲ್ಲ. 
 

Tap to resize

ಜಾಹ್ನವಿ ಮನೆಯಲ್ಲಿ ಬಾತ್ ರೂಮಿಗೆ ತೆರಳಿದ ಸಮಯದಲ್ಲಿ ಡೋರ್ ಜಾಮ್ ಆಗಿ ತೆರೆದುಕೊಳ್ಳಲು ಸಾಧ್ಯವಾಗದೇ ಜಾನು ಬೆದರುತ್ತಾಳೆ. ಹೊರಗಡೆ ಇದ್ದ ಜಯಂತ್, ಬಾಗಿಲಿಗೆ ಒದ್ದು ತೆಗೆದು ಜಾಹ್ನವಿಗೆ ಸಮಾಧಾನ ಮಾಡ್ತಾನೆ, ಆದ್ರೆ ಸಿಕ್ಕಾಪಟ್ಟೆ ಹೆದರಿದ ಜಾಹ್ನವಿ (Jahnavi) ಈವಾಗ ನೀವು ಇದ್ರಿಂದ ಸರಿ ಹೋಯ್ತು, ನೀವು ಇಲ್ಲಾ ಅಂದಿದ್ರೆ ಹೇಗೆ ಎನ್ನುತ್ತಲ್ಲೆ ತನ್ನ ಕಾಲೇಜು ದಿನಗಳಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕುತ್ತಾಳೆ. 
 

ಕಾಲೇಜಿನಲ್ಲಿದ್ದಾಗ ಒಂದು ಬಾರಿ ಲಿಫ್ಟಲ್ಲಿ ತೆರಳುವಾಗ ಲಿಪ್ಟ್ ಇದ್ದಕ್ಕಿದ್ದಂತೆ ಬಂದ್ ಆಗಿ ಓಪನ್ ಮಾಡಲು ಸಾಧ್ಯವಾಗದೆ ತುಂಬಾ ಹೊತ್ತು ಅದರಲ್ಲೇ ಉಳಿಯಬೇಕಾಗಿ ಬಂದಿತ್ತಂತೆ, ಆ ದಿನ ಲಿಫ್ಟಲ್ಲಿ ಆಕೆಯ ಜೊತೆ ಒಬ್ಬ ಫ್ರೆಂಡ್ ಕೂಡ ಇದ್ದ ಅನ್ನೋದನ್ನು ಹೇಳುತ್ತಾಳೆ, ಇದನ್ನ ಕೇಳಿ ಜಯಂತ್ ಗೆ ಕೋಪ ಬರುತ್ತೆ. ನನ್ನ ಚಿನ್ನುಮರಿ ಜೊತೆ ಇದ್ದ ಹುಡುಗ ಯಾರು? ಅನ್ನೋದು ಆತನ ತಲೆಯಲ್ಲಿ ಓಡಾಡೋಕೆ ಶುರುವಾಗುತ್ತೆ. 
 

ಅದಕ್ಕಾಗಿ ಜಯಂತ್ ಜಾಹ್ನವಿಯನ್ನು ಕರೆದುಕೊಂಡು ಕಾಲೇಜಿಗೆ ಹೋಗಿ ಅಲ್ಲಿ ಲಿಫ್ಟ್ ಕೆಡಿಸುವಂತೆ ಮಾಡಿ, ಇಬ್ಬರು ಜೊತೆಯಾಗಿ ಲಿಫ್ಟ್ ಏರುತ್ತಾರೆ. ಸ್ವಲ್ಪ ಹೊತ್ತಲೇ ಲಿಫ್ಟ್ ಕೆಟ್ಟು ನಿಲ್ಲುತ್ತೆ. ಈ ಟೈಮಲ್ಲಿ ಜಾಹ್ನವಿ ಗಂಡ ಜಯಂತ್ ಕೈಯನ್ನು ಗಟ್ಟಿಯಾಗಿ ಹಿಡಿಯುತ್ತಾಳೆ. ಜಯಂತ್, ಆ ದಿನ ಲಿಫ್ಟ್ ಕೆಟ್ಟಾಗ ಜೊತೆಗಿದ್ದ ಹುಡುಗ ಯಾರು ಅನ್ನೋದನ್ನ ಕೇಳ್ತಾನೆ. ಮುಂದೇನಾಗುತ್ತೆ, ಜಾಹ್ನವಿಗೆ ಜಯಂತ್ ಶಿಕ್ಷೆ ಕೊಡ್ತಾನಾ? ಸತಾಯಿಸ್ತಾನ ಅನ್ನೋದನ್ನ ಕಾದು ನೋಡಬೇಕು. 
 

ಜಯಂತ್ ತನ್ನ ಅತಿಯಾದ ಪ್ರೀತಿಯಿಂದ ಜಾಹ್ನವಿಗೆ ಏನೇನೋ ಮಾಡಿದ್ದಾನೆ, ಜಾಹ್ನವಿಯ ಸುತ್ತಮುತ್ತ ಎಂತೆಂಥದ್ದೋ ನಡೆದಿದೆ. ಆದರೆ ಎಷ್ಟು ಸತಾಯಿಸಿದರೂ, ರಿಸ್ಟ್ರಿಕ್ಟ್ ಮಾಡಿದ್ರೂ ಜಾಹ್ನವಿಗೆ ತನ್ನ ಗಂಡ ಎಂತವನು ಅನ್ನೋದು ಇನ್ನೂ ತಿಳಿಯದೇ ಇರೋದು ವಿಚಿತ್ರವಾಗಿದೆ. ಇದು ಜಾಹ್ನವಿಯ ಪೆದ್ದು ತನಕ್ಕೆ ಸಾಕ್ಷಿ ಎನ್ನುತ್ತಿದ್ದಾರೆ ಜನರು. 
 

ಮದುವೆ ಆಗದೇ ಜೀವನಪರ್ಯಂತ ಹಾಗೆಯೇ ಇದ್ರೂ ಸರಿ. ಈ ಜಯಂತನಂತಹ ಗಂಡ ಯಾವ ಹೆಣ್ಮಕ್ಳಿಗೂ ಬೇಡ ಅಂತಿದ್ದಾರೆ ಜನರು, ಅಷ್ಟೇ ಅಲ್ಲ ಅಯ್ಯೋ ಚಿನ್ನುಮರಿಗೆ ಏನು ಮಾಡ್ಬೇಡ ಅನುಮಾನದ ಪಿಶಾಚಿ ಅಂತ ಶಾಪ ಕೂಡ ಇಡ್ತಿದ್ದಾರೆ ವೀಕ್ಷಕರು. ಜೊತೆಗೆ ಪ್ರೀತಿ ಲೀ ನನಗೆ ಮಾತ್ರ ಸ್ವಂತ ಅನ್ನೋ ಅಭಿಪ್ರಾಯ ಇರೋದು ಸಹಜ,ಆದ್ರೆ ಇಂಥ ದುರ್ಬುದ್ಧಿ ಪ್ರೀತಿ ಮಾತ್ರ ಬೇಡ ಡೈರೆಕ್ಟರ್, ಇದು ಓವರ್ ಆಯ್ತು ಅಂತಾನೂ ಹೇಳ್ತಿದ್ದಾರೆ ಜನ. ಜಾಹ್ನವಿಗೆ ಮುಂದೆ ಏನು ಕಾದಿದೆ ಅನ್ನೋದು ಇನ್ನಷ್ಟೇ ತಿಳಿಬೇಕು. 
 

Latest Videos

click me!