ಲಕ್ಷ್ಮಿ ನಿವಾಸ ವೆಂಕಿ -ಚೆಲುವಿ ಜೋಡಿ ಸೂಪರೋ ಸೂಪರ್ ರಂಗ…. ಅಂತಿದ್ದಾರೆ ವೀಕ್ಷಕರು

First Published | Jun 11, 2024, 5:49 PM IST

ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಸದ್ಯ ಮಿಂಚುತ್ತಿರುವ ಹೊಸ ಜೋಡಿ ಅಂದ್ರೆ ಅದು ವೆಂಕಿ ಮತ್ತು ಚೆಲುವಿ. ಇಬ್ಬರ ಮುಗ್ಧ ಪ್ರೇಮವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್‌ನಲ್ಲಿ ಜೋಡಿಗಳಿಗೇನು ಕಮ್ಮಿಯೇ ಇಲ್ಲ. ಯಾಕಂದ್ರೆ ಲಕ್ಷ್ಮೀ ಮತ್ತು ಶ್ರೀನಿವಾಸರ ಎಲ್ಲಾ ಮಕ್ಕಳು ಮತ್ತು ಅವರ ಸಂಗಾತಿ, ಲವ್ ಇವರ ಸುತ್ತಲೇ ಕಥೆ ನಡೆಯುತ್ತದೆ. ಇದೀಗ ಈ ಸಾಲಿಗೆ ಹೊಸ ಜೋಡಿ ಸೇರುತ್ತಿದೆ. 

ಜಾಹ್ನವಿ -ವಿಶ್ವ, ಜಾಹ್ನವಿ - ಜಯಂತ್, ಭಾವನಾ- ಸಿದ್ಧೇಗೌಡ್ರು, ಸಿಂಚನಾ -ಹರೀಶ… ಈ ಎಲ್ಲಾ ಜೋಡಿಗಳು ಇಲ್ಲಿವರೆಗೆ ಸೀರಿಯಲ್‌ನಲ್ಲಿ ಮಿಂಚಿದ್ದೇ ಮಿಂಚಿದ್ದು, ಅದಕ್ಕೀಗ ಹೊಸ ಸೇರ್ಪಡೆ ಅಂದ್ರೆ ವೆಂಕಿ ಮತ್ತು ಚೆಲುವಿ (Venki and Cheluvi). ಇಬ್ಬರ ಜೋಡಿ ವೀಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
 

Tap to resize

ಲಕ್ಷ್ಮೀ ಶ್ರೀನಿವಾಸರ ಸಾಕು ಮಗ, ಬಾಯಿ ಬಾರದ ಮುಗ್ಧ ವೆಂಕಿ ಮತ್ತು ಹೂವು ಮಾರುವ ಪಾಪದ ಹುಡುಗಿ ಚೆಲುವಿ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಇಬ್ಬರೂ ಉತ್ತಮ ಸ್ನೇಹಿತರೂ ಆಗಿದ್ದಾರೆ. ವೆಂಕಿಗೆ ಈಗಾಗಲೇ ಚೆಲುವಿ ಮೇಲೆ ಮನಸಾಗಿದೆ, ಅದನ್ನ ಜಾಹ್ನವಿ ಬಳಿ ಹೇಳಿಕೊಂಡೂ ಆಗಿದೆ. ಇದೀಗ ಚೆಲುವಿಗೂ ಪ್ರೀತಿ ಮೂಡಿರುವಂತಿದೆ. 
 

ಇವತ್ತಿನ ಪ್ರೋಮೋದ (Lakshmi Nivasa Promo) ಹೈಲೈಟ್ ವೆಂಕಿ ಮತ್ತು ಚೆಲುವಿ. ಊರ ಜಾತ್ರೆಯಲ್ಲಿ ಹೂವಿನ ಅಲಂಕಾರದ ಹೊಣೆ ಹೊತ್ತಿರೋದು ಚೆಲುವಿ, ಆಕೆಗೆ ಸಹಾಯ ಮಾಡ್ತಿದ್ದಾನೆ ವೆಂಕಿ. ಇದರ ನಡುವೆ ಹೂವಿ ಮೆಟ್ಟಿಲು ಹತ್ತುವಾಗ ಇನ್ನೇನು ಜಾರಿ ಬೀಳುತ್ತಾಳೆ ಎನ್ನುವಾಗ ವೆಂಕಿ ಬಂದು ಹಿಡಿದುಕೊಳ್ಳುತ್ತಾನೆ. ಇಬ್ಬರ ಕಣ್ಣುಗಳು ಕೂಡುತ್ತವೆ. ಹಿನ್ನೆಲೆಯಲ್ಲಿ ಹಾಯಾಗಿದೆ ಒಳಗೊಳಗೆ.. ಹಾಡು ಪ್ಲೇ ಮಾಡಲಾಗಿದೆ. 
 

ಈ ದೃಶ್ಯ ವೀಕ್ಷಕರಿಗೆ ಸಖತ್ ಇಷ್ಟವಾಗಿದ್ದು, ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈಗಾಗಲೇ ಇಬ್ಬರ ನಟನೆಗೆ ಜನ ಸೈ ಅಂದಿದ್ದಾರೆ, ಇದೀಗ ಇಬ್ಬರ ಜೋಡಿ ನೋಡಿ ವಾರೆ ವಾ ಅನ್ನುತ್ತಿದ್ದಾರೆ. ವೆಂಕಿ ಚೆಲುವೆ ಜೋಡಿ ಸೂಪರೋ ಸೂಪರ್ ರಂಗ, ಈ ಸೀರಿಯಲ್ಲಲ್ಲಿ ನಿಮ್ ಜೋಡಿ ನೇ ಸೂಪರ್ ಮತ್ತೆ ಒನ್ ನಂಬರ್ ಕೂಡ ಅಂತಾನೂ ಹೇಳ್ತಿದ್ದಾರೆ ಜನ. 
 

ವೆಂಕಿ ಮತ್ತು ಚೆಲುವಿ, ಇಬ್ಬರ ಜೋಡಿ ತುಂಬಾ ಸುಂದರವಾಗಿದೆ. ಒಬ್ಬರು ಒಬ್ಬರ ಮನಸ್ಸನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿ ಕೊಂಡಿದ್ದಾರೆ. ನಿಮ್ಮಿಬ್ಬರ ಜೋಡಿ ನೋಡೋದಕ್ಕೆ ಚೆಂದ. ಜಯಂತ್ ಜಾಹ್ನವಿಗಿಂತ ಇವರೇ ಬೆಸ್ಟ್, ಇದು ಮುಗ್ಧ ಪ್ರೇಮ ಅಂದ್ರೆ. ನೀವಿಬ್ಬರು ಬೆಸ್ಟ್ ಜೋಡಿ ಎಂದಿದ್ದಾರೆ. 
 

ಇನ್ನೂ ಕೆಲವು ಜನ ಕಾಮೆಂಟ್ ಮಾಡಿ, ಅಕ್ಕಂಗೆ ಲವ್ ಆಗಿದೆ, ಕೊನೆಗೆ ಇವರಿಬ್ಬರ ಲವ್ ಸ್ಟೋರಿಗೂ (Love story) ಸ್ಟಾರ್ಟ್ ಮಾಡಿದ್ರು. ಇವ್ರಿಗೂ ಲವ್ ಆಯ್ತು, ಇಂಥದನ್ನೆಲ್ಲಾ ಹಾಕಿ ನಮಗೆ ಯಾಕೆ ಹೊಟ್ಟೆ ಉರಿಸ್ತೀರಾ, ನಾವಿನ್ನೂ ಸಿಂಗಲ್ಲೂ ಎಂದು ಬೇಜಾರೂ ಮಾಡ್ಕೊಂಡಿದ್ದಾರೆ ಜನ. 
 

Latest Videos

click me!