ಮತ್ತೊಮ್ಮೆ ರೆಟ್ರೋ ಹಾಡಿಗೆ ಕಿಶನ್- ನಮ್ರತಾ ಡುಯೆಟ್…. ಮದ್ವೆ ಆಗ್ಬಿಡಿ ಎಂದ ಫ್ಯಾನ್ಸ್!

Published : Jun 11, 2024, 05:25 PM IST

ಕಿಶನ್ ಬಿಳಗಲಿ ಮತ್ತು ನಮ್ರತಾ ಗೌಡ ಇಬ್ಬರೂ ತಮ್ಮ ಡ್ಯಾನ್ಸ್ ಮೂಲಕ ಸುದ್ದಿಯಾಗ್ತಿರ್ತಾರೆ. ಹೆಚ್ಚಾಗಿ ಇಬ್ಬರೂ ಜೊತೆ ಸೇರಿ ಹಾಡಿಗೆ ಹೆಜ್ಜೆ ಹಾಕುತ್ತಿರುತ್ತಾರೆ. ಈ ಬಾರಿ ಜೀವ ಹೂವಾಗಿದೆ ಹಾಡಿಗೆ ಡುಯೆಟ್ ಹಾಡಿದ್ದಾರೆ.   

PREV
17
ಮತ್ತೊಮ್ಮೆ ರೆಟ್ರೋ ಹಾಡಿಗೆ ಕಿಶನ್- ನಮ್ರತಾ ಡುಯೆಟ್…. ಮದ್ವೆ ಆಗ್ಬಿಡಿ ಎಂದ ಫ್ಯಾನ್ಸ್!

ಬಿಗ್ ಬಾಸ್ ಸೀಸನ್ 7 ರ ಮೂಲಕ ಭಾರಿ ಜನಪ್ರಿಯತೆ ಪಡೆದ ಡ್ಯಾನ್ಸರ್ ಕಿಶನ್ ಬಿಳಗಲಿ (Kishen Bilagali)ತಮ್ಮ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್ ಮೂಲಕ ಯಾವಾಗ್ಲೂ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ನಟಿಯರೊಂದಿಗೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿ ಅದನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. 
 

27

ಈ ಬಾರಿ ಕಿಶನ್ ಕಿರುತೆರೆ ನಟಿ ಹಾಗೂ ಡ್ಯಾನ್ಸರ್ ಆಗಿರುವ ನಮ್ರತಾ ಗೌಡ (Namratha Gowda) ಜೊತೆ ಡುಯೆಟ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಬ್ಬರು ಜೊತೆಯಾಗಿ ಹಲವಾರು ರೆಟ್ರೋ ಹಾಡುಗಳಿಗೆ ವಿಡೀಯೋ ಶೂಟ್ ಮಾಡಿಸಿದ್ದರು. ಎಲ್ಲಾ ವಿಡೀಯೋಗಳು ಅದ್ಭುತವಾಗಿ ಮೂಡಿ ಬಂದಿದ್ದು, ನೆಟ್ಟಿಗರು ಸಹ ಮೆಚ್ಚಿಕೊಂಡಿದ್ದರು. 
 

37

ನಮ್ರತಾ ಗೌಡ ಮತ್ತು ಕಿಶನ್ ಉತ್ತಮ ಸ್ನೇಹಿತರಾಗಿದ್ದು, ಹಿಂದೆ ಮಧ್ಯ ರಾತ್ರೀಲಿ, ಹೈವೇ ರಸ್ತೇಲಿ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನು ಕುಣಿಸುವಂತೆ ಮಾಡಿದ್ದರು. ಇದೀಗ ಕಳೆದ ಕೆಲವು ದಿನಗಳಿಂದ ರೆಟ್ರೋ ಹಾಡುಗಳಿಗೆ, ರೆಟ್ರೋ ಲುಕ್ ನಲ್ಲಿ ಅದ್ಭುತ ಪರ್ಫಾರ್ಮೆನ್ಸ್ ನೀಡಿದ್ದು, ಅಪಾರ ಜನಮೆಚ್ಚುಗೆ ಪಡೆದಿದೆ. 
 

47

ಕೆಲದಿನಗಳ ಹಿಂದೆ ಶಂಕರ್ ನಾಗ್ ಅವರ ಸಿಬಿಐ ಶಂಕರ್ (CBI Shankar) ಸಿನಿಮಾದ ಗೀತಾಂಜಲಿ ಹಾಡಿಗೆ ಸುಂದರವಾಗಿ ಹೆಜ್ಜೆ ಹಾಕಿದ್ದರು, ಅದಾದ ಬಳಿಕ ಅನಿಲ್ ಕಪೂರ್ ಅವರ ಪಲ್ಲವಿ ಅನುಪಲ್ಲವಿ ಚಿತ್ರದ ನಗುವ ನಯನ ಮಧುರ ಮೌನ ಹಾಡಿಗೂ ಜೊತೆಯಾಗಿದ್ದರು. ಈ ವಿಡೀಯೋಕ್ಕೂ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. 
 

57

ಇದೀಗ ಮತ್ತೆ ಡಾ ರಾಜ್ ಕುಮಾರ್ ಅವರ ಜೀವ ಹೂವಾಗಿದೆ, ಭಾವ ಜೇನಾಗಿದೆ ಹಾಡಿಗೆ ಹೆಜ್ಜೆ ಹಾಕುವ ಮೂಲಕ ರೆಟ್ರೋ ಕಾಲಕ್ಕೆ ನಮ್ಮನ್ನು ಕರೆದೊಯ್ದಿದ್ದಾರೆ. ಇಬ್ಬರೂ ರೆಟ್ರೋ ಕಾರಿನಲ್ಲಿ ಕುಳಿತು, ಹಾಡಿಗೆ ಸರಿಯಾಗಿ ಹೆಜ್ಜೆ ಹಾಕುತ್ತಾ, ತುಂಬಾನೆ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. 
 

67

ಮತ್ತೆ ಕಿಶನ್ ಮತ್ತು ನಮ್ರತಾರನ್ನು ಜೊತೆಯಾಗಿ ನೋಡಿರೋ ಅಭಿಮಾನಿಗಳು ಕಾಮೆಂಟ್ ಗಳ ಮೂಲಕವೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಜನರು ವಿಡೀಯೋ ಅದ್ಭುತವಾಗಿ ಬಂದಿದೆ, ಸುಂದರವಾಗಿದೆ, ಹಾಡು ಹಳೇದಾಗಿದೆ ವಿಡಿಯೋ ಹೊಸದಾಗಿದೇ ಕ್ಯಾಮೆರಾ ಕಲರ್ ಫುಲ್ ಹಾಗಿದೆ ನೋಡಲು ವಿಡಿಯೋ ಹಿತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. 
 

77

ಇನ್ನೂ ಕೆಲವರು, ಮತ್ತೆ ನೀವಿಬ್ರೂ ಜೊತೆಯಾದ್ರಾ? ಸುಮ್ನೆ ಇಬ್ರು ಮದ್ವೆ ಆಗ್ಬಿಡಿ ಎಂದಿದ್ದಾರೆ. ನಿಮ್ಮಿಬ್ಬರ ಜೋಡಿ ನೋಡೋಕೆ ಚೆಂದ, ಅಷ್ಟೇ ಅಲ್ಲ, ಇನ್ನೂ ಕೆಲವರು ಕಾರ್ತಿಕ್ ಎಲ್ಲಿದ್ದಿಯಾ ಅಂದಿದ್ದಾರೆ. ಪ್ರೀ ವೆಡ್ಡೀಂಗ್ ಶೂಟ್ (pre wedding shoot) ಜೋರಾಗಿಯೇ ನಡೀತಿದೆ. ಯಾವಾಗ ಮದ್ವೆ ಅಂತಾನೂ ಕೇಳಿದ್ದಾರೆ ಜನ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories