ದಕ್ಷಿಣ ಭಾರತದ ಜನಪ್ರಿಯ ಕಿರುತೆರೆ ನಟಿ ತಮ್ಮ ಸೌಮ್ಯ ಪಾತ್ರಗಳಿಂದಲೇ ಫೇಮಸ್ ಆಗಿದ್ದ ಜ್ಯೋತಿ ರೈ (Jyothi Rai), ಸದ್ಯ ತಮ್ಮ ಬೋಲ್ಡ್ ಲುಕ್, ಮಾಡರ್ನ್ ಡ್ರೆಸ್ ಮೂಲಕ ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ವರ್ಷ 38 ದಾಟಿದರೂ ಇನ್ನೂ ಹರೆಯದ ಹುಡುಗಿಯರಂತೆ ಸುಂದರಿಯಾಗಿರುವ ಜ್ಯೋತಿ ರೈಗೆ ಸದ್ಯ ಫ್ಯಾನ್ ಫಾಲೋವಿಂಗ್ ಕೂಡ ಸಿಕ್ಕಾಪಟ್ಟೆ ಇದೆ.
ಸದ್ಯ ತೆಲುಗು ವೆಬ್ ಸೀರೀಸ್ ಗಳಲ್ಲಿ (Web series) ಬ್ಯುಸಿಯಾಗಿರುವ ನಟಿ ತಮ್ಮ ಸೋಶಿಯಲ್ ಮಿಡಿಯಾದಲ್ಲಿ, ಶಾರ್ಟ್ ಡ್ರೆಸ್, ಬೋಲ್ಡ್ ಪೋಸ್ ನೀಡಿರೋ ಫೋಟೋಗಳನ್ನು ಹಂಚಿಕೊಳ್ಳುತ್ತಾ, ಪಡ್ಡೆ ಹುಡುಗರಿಗೆ ಕಚಕುಳಿ ಇಡುತ್ತಲೇ ಇರುತ್ತಾರೆ. ಇವರ ಫೋಟೋಗಳಿಗೆ ಹೊಗಳಿಕೆ ಬರೋದಕ್ಕಿಂತ ಜಾಸ್ತಿ, ಕೆಟ್ಟ ಕಾಮೆಂಟ್ ಗಳು ಬರುತ್ತವೆ. ಅದರಲ್ಲೂ ಇವರ ಅಶ್ಲೀಲ ವಿಡಿಯೋ ವೈರಲ್ ಆದ ಬಳಿಕ ನಟಿ ಮತ್ತಷ್ಟು ಸುದ್ದಿಯಲ್ಲಿದ್ದು, ಟ್ರೋಲ್ ಗಳಿಗೂ ಆಹಾರವಾಗುತ್ತಿದ್ದಾರೆ. ಇತ್ತೀಚೆಗೆ ಇವರದ್ದು ಎನ್ನಲಾದ ಅಶ್ಲೀಲ ವೀಡಿಯೋ ಸಹ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ಇತ್ತೀಚೆಗೆ ತೆಲುಗು ಸಮಾರಂಭವೊಂದರಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ವ್ಯಕ್ತಿಯೊಬ್ಬರು, ಜ್ಯೋತಿ ರೈ ಬಳಿ ಸೋಶಿಯಲ್ ಮಿಡೀಯಾದಲ್ಲಿ ನಿಮ್ಮ ಮೇಲೆ ಎಷ್ಟು ಎಕ್ಸೈಟ್ ಮೆಂಟಲ್ಲಿ ಕಾಮೆಂಟ್ ಮಾಡ್ತಾರೋ, ಅಷ್ಟೇ ಕೆಟ್ಟದಾಗಿ ಕೆಲವರು ಕಾಮೆಂಟ್ (bad comments) ಮಾಡ್ತಾರೆ. ನಿಮ್ಮ ಫೋಟೋಗಳು ತುಂಬಾ ಟ್ರೋಲ್ ಆಗುತ್ತವೆ ಅದಕ್ಕೇನಂತೀರಿ ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಅದಕ್ಕೆ ನಟಿ ಸಮಾಧಾನದಿಂದಲೇ ಉತ್ತರಿಸಿದ್ದಾರೆ.
ಕಾಮೆಂಟ್ ಮಾಡುವವರ ಬಗ್ಗೆ ಕೋಪಗೊಳ್ಳದೇ ಮಾತನಾಡಿದ ಜ್ಯೋತಿ ರೈ ಅವರ ಬಗ್ಗೆ ನಾನೇನು ಹೇಳೋದಿಲ್ಲ, ಅದನ್ನ ಅವರ ಬಳಿಯೇ ಕೇಳ್ಬೇಕು. ನಾವು ಮಾಡೋದೆಲ್ಲಾ ಸಿನಿಮಾಕ್ಕೆ, ಇದು ನಮ್ಮ ಪ್ರೊಫೇಶನ್. ಮಾಡರ್ನ್ ರೋಲ್ ಬಂದ್ರೆ ಮಾಡರ್ನ್ ಆಗಿ ಕಾಣಿಸ್ತೀವಿ, ಟ್ರೆಡಿಶನಲ್ ರೋಲ್ ಬಂದ್ರೆ ಟ್ರೆಡಿಶನಲ್ ಆಗಿ ಕಾಣಿಸಿಕೊಳ್ತೀವಿ ಅಷ್ಟೇ.
ಜನ ಏನು ಕಾಮೆಂಟ್ ಮಾಡ್ತಾರೆ ಅನ್ನೋದು ಅದು ಅವರ ಮೆಂಟಾಲಿಟಿ (Mentality), ಅವರ ವ್ಯಕ್ತಿತ್ವ (Personality) ಏನು ಅನ್ನೋದನ್ನು ತೋರಿಸುತ್ತೆ. ಅವರು ಕಾಮೆಂಟ್ ಮಾಡ್ತಾರೆ ಅಂತ ನಾನು ಫೋಟೋ ಹಾಕೋದಿಲ್ಲ. ಮೊದಲಾದ್ರೆ ನಾನು ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರಲಿಲ್ಲ, ಆದ್ರೆ ಈವಾಗ ಎಲ್ಲವೂ ಸೋಶಿಯಲ್ ಮೀಡಿಯಾ (social media) ಮೂಲಕವೇ ನಡೆಯುತ್ತೆ, ಹಾಗೆ ನಾನು ಸಹ ಆಕ್ಟೀವ್ ಆಗಿದ್ದೀನಿ. ಹಾಗಾಗಿ ಫೋಟೋ ಹಾಕ್ತೀನಿ.
ಸಿನಿಮಾ, ಪ್ರೋಮೋಷನ್ (Movie Promotion) ಏನೆ ಆದ್ರೂ ಸಾಮಾಜಿಕ ಮಾಧ್ಯಮ ಮುಖ್ಯ. ನಾವು ಟ್ರೆಂಡ್ ಜೊತೆ ಸಾಗಬೇಕು ಎಂದಿದ್ದಾರೆ. ಇಲ್ಲ ನಾನು ಮಾಡರ್ನ್ ಡ್ರೆಸ್ ಹಾಕಲ್ಲ, ಸೀರೆಯುಟ್ಟೆ ನಟಿಸ್ತೀನಿ, ಕಾಣಿಸಿಕೊಳ್ತೀನಿ ಅಂದ್ರೆ ಆಗೋದೆ ಇಲ್ಲ. ಸಿನಿಮಾಗೆ ಏನು ಬೇಕೋ ಹಾಗೆ ಇರ್ತೀನಿ, ಅದೇ ರೀತಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತೀನಿ ಎಂದಿದ್ದಾರೆ.
ಇನ್ನು ತೆಲುಗು ಜನರು ನನ್ನನ್ನು ಜಗದಿ ಪಾತ್ರದಲ್ಲೇ ನೋಡಿರೋದ್ರಿಂದ, ನಾನು ಟ್ರೆಡಿಷನಲ್ ಆಗಿಯೇ ಇದ್ದೇನೆ ಅಂದುಕೊಂಡಿದ್ದಾರೆ. ಹಾಗಾಗಿ ಇವಾಗ ನಾನು ಮಾಡರ್ನ್ ಡ್ರೆಸ್ (Modern dress) ಹಾಕೋದಕ್ಕೆ, ಮಾಡರ್ನ್ ಆಗಿದ್ದಾರೆ ಎನ್ನುತ್ತಿದ್ದಾರೆ. ಆದರೆ ಕನ್ನಡದಲ್ಲಿ ನಾನು ಮಾಡರ್ನ್ ಡ್ರೆಸಲ್ಲೇ ಕಾರ್ಯಕ್ರಮವೊಂದರೆ 68 ಎಪಿಸೋಡ್ ಗಳನ್ನು ನಾನು ಹೋಸ್ಟ್ ಮಾಡಿದ್ದೀನಿ ಎನ್ನುವ ಮೂಲಕ ಟ್ರೋಲ್ ಗಳಿಗೆ ಉತ್ತರಿಸಿದ್ದಾರೆ.