ಕಾಲು ಮುರಿದುಕೊಂಡ ಲಕ್ಷ್ಮೀ ನಿವಾಸ ಸೀರಿಯಲ್ ಹಿರಿಯ ನಟಿ

First Published | Jul 8, 2024, 10:22 PM IST

ಧಾರಾವಾಹಿಗಳಲ್ಲಿ ಬ್ಯುಸಿ ಆಗಿರುವ ಹಿರಿಯ ನಟಿ ಅಂಜಲಿ ಕಾಲು ಮುರಿದುಕೊಂಡಿದ್ದಾರೆ. ರಾಮಾಚಾರಿ ಮತ್ತು ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಪೋಷಕ ನಟಿಯಾಗಿ ನಟಿಸುತ್ತಿದ್ದಾರೆ.

20 ದಿನಗಳ ಬಳಿಕ ಅಂಜಲಿ ಅವರು ಲಕ್ಷ್ಮೀ ನಿವಾಸ ಸೆಟ್‌ಗೆ ಮರಳಿದ್ದಾರೆ. ಅಂಜಲಿ ಅಮ್ಮ ಶೂಟಿಂಗ್ ಬಂದ ಖುಷಿಯಲ್ಲಿ ಮಾನಸಾ ಮನೋಹರ್ ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾಲು ಹೇಗೆ ಮುರಿತು ಎಂಬ ವಿಷಯವನ್ನು ತಿಳಿಸಿದ್ದಾರೆ.

15 ದಿನಗಳ ಬಳಿಕ ಅಮ್ಮನನ್ನು ಶೂಟಿಂಗ್ ನಲ್ಲಿ ನೋಡಿ ಖುಷಿ ಆಯ್ತು ಎಂದು ಮಾನಸಾ ಹೇಳುತ್ತಾರೆ. ಆಗ ಅಂಜಲಿ ಅವರು 15 ಅಲ್ಲ 20 ದಿನ ಆಯ್ತು. ಕಳೆದ 20 ದಿನದಿಂದ 24 ಗಂಟೆ ಮನೆಯಲ್ಲಿ ಕುಳಿತು ಬೇಸರ ಆಗಿತ್ತು ಎಂದು ಅಂಜಲಿ ಹೇಳಿದ್ದಾರೆ.

Tap to resize

ಮನೆಯ ಹತ್ತಿರ ಹಣ್ಣು ತರಲು ಹೋಗಿದ್ದ ವೇಳೆ ಕಾಲು ಜಾರಿ ಬಿದ್ದೆ. ಬಲಗಾಲಿಗೆ ಪೆಟ್ಟಾಗಿದೆ. ಡಾಕ್ಟರ್ ರೆಸ್ಟ್ ಮಾಡುವಂತೆ ಹೇಳಿದ್ದರು. ಕಾಲು ಹಾಗೆ ಇರಿಸಬೇಕು. ಹೀಗೆ ಇಡಬೇಕು ಅಂತ ಹೇಳಿದ್ದರಿಂದ ವಿಶ್ರಾಂತಿಯಲ್ಲಿದ್ದೆ ಎಂದು ಅಂಜಲಿ ತಿಳಿಸಿದ್ದಾರೆ.

ಕಾಲು ಮುರಿದಿದೆ ಅಂತ ಕೇಳಿದಾಗ ಈ ವಯಸ್ಸಿನಲ್ಲಿ ಎಲ್ಲಿ ಆಟ ಆಡಲು ಹೋಗಿದ್ದೆ ಎಂದು ತಮಾಷೆ ಮಾಡುತ್ತಿದ್ದಾರೆ ಎಂಬ ವಿಷಯವನ್ನು ಅಂಜಲಿ ಹೇಳಿದರು. ನಂತರ ಮಾನಸ ನಡೆದ ಘಟನೆಯನ್ನು ವಿವರವಾಗಿ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ರಸ್ತೆ  ಬದಿಯಲ್ಲಿ ಟೈಲ್ಸ್ ತುಂಡಾಗಿತ್ತು. ಅದನ್ನು ಮುಚ್ಚಲು ಟೈಲ್ಸ್ ಮೇಲೆ ಚೀಲ ಹಾಕಲಾಗಿತ್ತು. ಅದು ರಸ್ತೆಯಲ್ಲಿ ಹೋಗುವ ಜನರಿಗೆ ಹೇಗೆ ಗೊತ್ತಾಗಬೇಕು. ಅಂಜಲಿ ಅಮ್ಮಾ, ಅದರ ಮೇಲೆ ಕಾಲಿಟ್ಟಿದ್ದರಿಂದ ಬಿದ್ದಿದ್ದಾರೆ ಎಂದು ಮಾನಸಾ ಹೇಳಿದ್ದಾರೆ.

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡರ ತಾಯಿಯಾಗಿ ಅಂಜಲಿ ನಟಿಸುತ್ತಿದ್ದಾರೆ. ಝೀ ಕನ್ನಡ ವಾಹಿನಿಯಲ್ಲಿ ಈ ಧಾರಾವಾಗಿ ಸೋಮವಾರದಿಂದ ಶುಕ್ರವಾದವರೆಗೆ ಪ್ರತಿ ರಾತ್ರಿ 8 ಗಂ    ಟೆಗೆ ಪ್ರಸಾರವಾಗುತ್ತದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಮಾಚಾರಿಯಲ್ಲಿಯೂ ಅಂಜಲಿಯವರು ನಟಿಸುತ್ತಿದ್ದಾರೆ. ರಾಮಾಚಾರಿಯ ಮುದ್ದಿನ ಅಮ್ಮನ ಪಾತ್ರದಲ್ಲಿ ಅಂಜಲಿ ಬಣ್ಣ ಹಚ್ಚಿದ್ದಾರೆ. 90ರ ದಶಕದಲ್ಲಿ ಸಾಲು ಸಾಲು  ಸೂಪರ್ ಹಿಟ್ ಸಿನಿಮಾಗಳನ್ನು ಅಂಜಲಿ ನೀಡಿದ್ದಾರೆ.

Latest Videos

click me!